ಭಾರೀ ಮಳೆ: ಕದ್ರಾ ಜಲಾಶಯದಿಂದ 41,461 ಕ್ಯೂಸೆಕ್ ನೀರು ಬಿಡುಗಡೆ

ಕಾರವಾರ:ಜಿಲ್ಲೆಯ ಕೊಡಸಳ್ಳಿ ಹಾಗೂ ಕದ್ರಾ ಜಲಾಶಯದ ಎಂಟು ಗೇಟ್ ಗಳನ್ನು ತೆರೆದು ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಕೊಡಸಳ್ಳಿಯಜಲಾಶಯದ 4 ಕ್ರಸ್ಟ್ ಗೇಟ್‍ಗಳನ್ನು ತೆರೆದು 7,768 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಅಲ್ಲದೇ ವಿದ್ಯುತ್ ಉತ್ಪಾದನಾ ಯೂನಿಟ್‍ನಿಂದ 15,000 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು ಒಟ್ಟಾರೆಯಾಗಿ 22,768 ಕ್ಯೂಸೆಕ್ ನೀರನ್ನು ಜಲಾಶಯದಿಂದ ಬಿಡಲಾಗುತ್ತಿದೆ.

ಹೀಗಾಗಿ ಕಾರವಾರ ತಾಲೂಕಿನಲ್ಲಿ ಇದೇ ನದಿಗೆ ಕಟ್ಟಲಾಗಿರುವ ಕದ್ರಾ ಜಲಾಶಯಕ್ಕೆ 54,802 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಕದ್ರಾ ಜಲಾಶಯದ ಗರಿಷ್ಠ ಮಟ್ಟವು 34.50 ಮೀ. ಆಗಿದ್ದು ಸದ್ಯ 30.72 ಮೀ. ತಲುಪಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದ ಒಟ್ಟೂ 8 ಕ್ರಸ್ಟ್ ಗೇಟ್‍ಗಳನ್ನು ತೆರೆದು 21,472 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.
ಅಲ್ಲದೇ ವಿದ್ಯುತ್ ಉತ್ಪಾದನಾ ಯೂನಿಟ್‍ನಿಂದ 19,989 ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದ್ದು ಒಟ್ಟಾರೆಯಾಗಿ 41,461 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಹೀಗಾಗಿ ಆಣೆಕಟ್ಟೆಯ ಕೆಳಭಾಗದಲ್ಲಿರುವ ಮಲ್ಲಾಪುರ, ಕೆರವಡಿ, ಸಿದ್ದರ, ಕಿನ್ನರ ಭಾಗಗಳಲ್ಲಿ ನದಿಯ ಅಬ್ಬರ ಜೋರಾಗಿದೆ. ಇಲ್ಲಿನ ನಿವಾಸಿಗಳಿಗೆ ಈಗಾಗಲೇ ಎಚ್ಚರದಿಂದಿರಲು ಸೂಚನೆ ನೀಡಲಾಗಿದೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement