7 ಗ್ರಾಮಗಳು ಮುಳುಗಡೆ: ಜನರ ಸ್ಥಳಾಂತರಿಸುವಾಗ ದೋಣಿ ಮಗುಚಿ ಇಬ್ಬರು ನಾಪತ್ತೆ, ರಕ್ಷಣೆಗೆ ಹ್ಯಾಲಿಕಾಪ್ಟರ್ ಮೊರೆ

ಅಂಕೋಲಾ: ಉತ್ತರಕನ್ನಡ ಜಿಲ್ಲೆಯಲ್ಲಿ ಗಂಗಾವಳಿ, ಕಾಳಿ ನದಿ ಉಕ್ಕಿ ಹರಿಯುತ್ತಿದ್ದು, ಶಿರೂರು, ಬೆಳ್ಸೆ ಕೂರ್ವೆ, ಕೊಡ್ಸಣಿ ಸೇರಿದಂತೆ ಹಲವು ಗ್ರಾಮ ಸಂಪೂರ್ಣ ಮುಳುಗಡೆ‌ಯಾಗಿದೆ. ಮನೆಗೆ ನೀರು ತುಂಬಿದ ಕಾರಣ ಸುರಕ್ಷಿತ ಸ್ಥಳಕ್ಕೆ ತೆರಳುವ ವೇಳೆ ದೋಣಿ ಮಗುಚಿ ನಾಪತ್ತೆಯಾದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ
ಗಂಗಾವಳಿ ನದಿಯ ಶೀರೂರು ಬಳಿ ದೋಣಿ ಮೂಲಕ ಜನರನ್ನು ರಕ್ಷಿಸುವ ವೇಳೆ ದೋಣಿ ಮುಗುಚಿ ಇಬ್ಬರು ಕಣ್ಮರೆಯಾಗಿದ್ದಾರೆ. ಓರ್ವ ಪುರುಷ, ಮಹಿಳೆ ದುರಂತಕ್ಕೆ ಒಳಗಾದವರು. ಇವರ ಪತ್ತೆ ಕಾರ್ಯ ಸಾಗಿದೆ.
1965ರ ನೆರೆಯನ್ನೂ ಮೀರಿಸುವಷ್ಡು ಭೀಕರ ನೆರೆ ಗಂಗಾವಳಿ ನದಿಯಲ್ಲಿ ಕಾಣುತ್ತಿದ್ದು ಡೋಂಗ್ರಿ ಕಲ್ಲೇಶ್ವರ ಭಾಗದಲ್ಲಿ ನೆರೆಯಲ್ಲಿ ಸಿಲುಕಿದವರ ರಕ್ಷಣೆಗೆ ಹ್ಯಾಲಿಕಾಫ್ಟರ್ ಮೊರೆ ಹೋಗಲಾಗಿದೆ.ನೌಕಾಪಡೆಯ ಹ್ಯಾಲಿಲಾಪ್ಟರ್‌ ಮೂಲಕ ರಕ್ಷಣಾ ಕಾರ್ಯ ನಡೆಯಲಿದೆ.

ನೆರೆ ಪ್ರದೇಶದ ಎಲ್ಲ ಸಂಪರ್ಕ ಮಾರ್ಗಗಳು ಬಂದ್ ಆಗಿದ್ದು ಜನ ಕಂಗಾಲಾಗಿದ್ದಾರೆ.
ಮನೆಗೆ ನೀರು ತುಂಬಿದ ಕಾರಣ ಸುರಕ್ಷಿತ ಸ್ಥಳಕ್ಕೆ ಜನ-ಜಾನುವಾರು ಸ್ಥಳಾಂತರ ಮಾಡುವ ವೇಳೆ ಅವಘಡ ಸಂಭವಿಸಿದೆ. ನದಿಯ ಇಕ್ಕೆಲದ 7 ಗ್ರಾಮಗಳು ಜಲಾವೃತವಾಗಿವೆ. 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಇತ್ತ ಕಾಳಿ ನದಿಯಲ್ಲೂ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement