ಮಹತ್ವದ ಬೆಳವಣಿಗೆಯಲ್ಲಿ ಕಾಶಿ ವಿಶ್ವನಾಥ ಮಂದಿರಕ್ಕೆ ಭೂಮಿ ನೀಡಿದ ಜ್ಞಾನವಪಿ ಮಸೀದಿ ಆಡಳಿತ ಮಂಡಳಿ..!

ವಾರಣಾಸಿ: ಮಹತ್ವದ ಬೆಳವಣಿಗೆಯಲ್ಲಿ ಕೋಮು ಸಾಮರಸ್ಯದ ವಿಶಿಷ್ಟ ಪ್ರದರ್ಶನದಲ್ಲಿ, ಕಾಶಿ ವಿಶ್ವನಾಥ ದೇವಸ್ಥಾನ-ಜ್ಞಾನವಪಿ ಮಸೀದಿ ಪ್ರಕರಣದಲ್ಲಿ ಕಾಶಿ ವಿಶ್ವನಾಥ ಕಾರಿಡಾರ್‌ಗಾಗಿ ಜ್ಞಾನವಪಿ ಮಸೀದಿ ಆಡಳಿತ ಮಂಡಳಿಯು 1700 ಚದರ ಅಡಿ ಭೂಮಿಯನ್ನು ಹಸ್ತಾಂತರಿಸಿದೆ. ಜ್ಞಾನವಪಿ ಮಸೀದಿಯ ಪಕ್ಕದಲ್ಲಿರುವ ಈ ಭೂಮಿಯನ್ನು ಕಾಶಿ ವಿಶ್ವನಾಥ ದೇವಾಲಯದ ಟ್ರಸ್ಟ್‌ಗೆ ವರ್ಗಾಯಿಸಲಾಗಿದೆ.
ಪ್ರತಿಯಾಗಿ, ದೇವಾಲಯ ಆಡಳಿತವು ಜ್ಞಾನವಪಿ ಮಸೀದಿ ಮತ್ತು ಕಾಶಿ ವಿಶ್ವನಾಥ ದೆಗುಲದಿಂದ ದೂರದಲ್ಲಿ ಜ್ಞಾನವಪಿ ಮಸೀದಿ ಕಡೆಯವರಿಗೆ 1000 ಚದರ ಅಡಿ ಭೂಮಿ ನೀಡಿದೆ.
ಈ ವಿಷಯ ಇನ್ನೂ ನ್ಯಾಯಾಲಯದಲ್ಲಿದೆ. ಸರ್ಕಾರ ಕಾರಿಡಾರ್ ನಿರ್ಮಿಸುತ್ತಿದೆ, ಅವರು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ನಾವು ನಮ್ಮ ಜನರ ಜೊತೆ ಸಮಾಲೋಚಿಸಿದ್ದೇವೆ ಮತ್ತು ಕಾಶಿ ವಿಶ್ವನಾಥ್ ಕಾರಿಡಾರ್‌ಗೆ 1700 ಚದರ ಅಡಿ ಭೂಮಿಯನ್ನು ಮಂಜೂರು ಮಾಡುವ ನಿರ್ಧಾರವನ್ನು ಮಂಡಳಿ ಮಾಡಿದೆ ಎಂದು ಅಂಜುಮನ್ ಇಂತಜಾಮಿಯಾ ಮಸೀದಿ ಜಂಟಿ ಕಾರ್ಯದರ್ಶಿ ಎಸ್.ಎಂ.ಯಾಸಿನ್ ತಿಳಿಸಿದ್ದಾರೆ ಎಂದು ಟೈಮ್ಸ್ ನೌ ವರದಿ ಮಾಡಿದೆ.
ಮಸೀದಿಯ ಎಎಸ್‌ಐ ಸಮೀಕ್ಷೆಗೆ ವಾರಾಣಸಿ ನ್ಯಾಯಾಲಯ ಅನುಮತಿ ನೀಡಿದೆ
ಈ ವರ್ಷದ ಆರಂಭದಲ್ಲಿ, ಕಾಶಿ ವಿಶ್ವನಾಥ ದೇವಾಲಯದ ಬಳಿ ಇರುವ ಮಸೀದಿಯ ಸಮೀಕ್ಷೆಯನ್ನು ಕೈಗೊಳ್ಳಲು ವಾರಾಣಸಿ ನ್ಯಾಯಾಲಯವು ಭಾರತದ ಪುರಾತತ್ವ ಸಮೀಕ್ಷೆಗೆ ಅನುಮತಿ ನೀಡಿದೆ.
ಜ್ಞಾನವಪಿ ಮಸೀದಿ ನಿರ್ವಹಣಾ ಸಮಿತಿಯು ಹೈಕೋರ್ಟ್‌ನಲ್ಲಿ ಈ ಕ್ರಮ ವಿರೋಧಿಸಿದೆ ಎಂದು ವರದಿಯಾಗಿದೆ. ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಜ್ಞಾನವಪಿ ಮಸೀದಿ ಮಧ್ಯೆ ನಡುವೆ ನಡೆಯುತ್ತಿರುವ ವಿವಾದವನ್ನು ನ್ಯಾಯಾಲಯ ಆಲಿಸುತ್ತಿದ್ದು, ಪುರಾತತ್ವ ತಜ್ಞರೊಂದಿಗೆ ಐವರು ಸದಸ್ಯರ ಸಮಿತಿ ರಚಿಸಿ ಸಮೀಕ್ಷೆ ನಡೆಸುವಂತೆ ನ್ಯಾಯಾಲಯ ಸೂಚಿಸಿದೆ.
ಈ ಪ್ರಕರಣವನ್ನು ಪೂಜಾ ಸ್ಥಳಗಳು (ವಿಶೇಷ ನಿಬಂಧನೆಗಳು) ಕಾಯ್ದೆ 1991ರಿಂದ ನಿರ್ಬಂಧಿಸಲಾಗಿದೆ ಎಂದು ನಮ್ಮ ತಿಳಿವಳಿಕೆ ಸ್ಪಷ್ಟವಾಗಿದೆ. ಪೂಜಾ ಸ್ಥಳಗಳನ್ನು ಅಯೋಧ್ಯೆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಎತ್ತಿಹಿಡಿದಿದೆ. ಜ್ಞಾನವಪಿ ಮಸೀದಿಯ ಸ್ಥಿತಿ ಪ್ರಶ್ನಾರ್ಹವಲ್ಲ ”ಎಂದು ಉತ್ತರ ಪ್ರದೇಶದ ಸುನ್ನಿ ಕೇಂದ್ರ ವಕ್ಫ್ ಮಂಡಳಿಯ ಅಧ್ಯಕ್ಷ ಜುಫರ್ ಅಹ್ಮದ್ ಫಾರೂಕಿ ಆಗ ಹೇಳಿದ್ದರು.
1669 ರಲ್ಲಿ ಔರಂಗಜೇಬ್ ನಗರದ ಕಾಶಿ ವಿಶ್ವೇಶ್ವರ ದೇವಾಲಯವನ್ನು ಧ್ವಂಸ ಮಾಡಿದ ನಂತರ ಜ್ಞಾನವಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ದೇವಾಲಯದ ಅರ್ಜಿದಾರರಾದ ವಿಜಯ್ ಶಂಕರ್ ರಸ್ತೋಗಿ ಹೇಳಿದ್ದಾರೆ. ಮಸೀದಿ ಇರುವ ಭೂಮಿ ಹಿಂದೂಗಳಿಗೆ ಸೇರಿದೆ ಎಂದು ಅರ್ಜಿದಾರರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement