ಪತಿಯೊಂದಿಗೆ ದೂರವಾಣಿಯಲ್ಲಿ ಜಗಳ : ನಾಲ್ವರಲ್ಲಿ ಮೂವರ ಅಪ್ರಾಪ್ತೆಯರನ್ನು ಕೊಳಕ್ಕೆ ನೂಕಿ ಕೊಂದ ತಾಯಿ

ಲಕ್ನೋ: ಪತಿಯ ಜೊತೆ ಜಗಳವಾಡಿದ ಪತ್ನಿ ಆ ಸಿಟ್ಟಿನಿಂದ ತನ್ನ ನಾಲ್ವರು ಅಪ್ರಾಪ್ತೆಯರನ್ನು ಕೊಳಕ್ಕೆ ತಳ್ಳಿದ್ದು, ಅದರಲ್ಲಿ ಮೂವರು ಮೃತಪಟ್ಟ ಘಟನೆ ಬಿಹಾರದಲ್ಲಿ ನಡೆದಿದೆ.
ಗಿಲಬ್ಸಾ (8),ನುಸಬಾ ಖತೂನ್(3) ಮತ್ತು ಸಹೆಬಾ ಖತೂನ್ (2) ಮೃತರಾಗಿದ್ದಾರೆ. ನೂರ್ಜಹಾನ್ ನಿಸಾನ್ ಮತ್ತು ಅಸ್ಲಾಮ್ ಅಲಂ ದಂಪತಿ ನಡುವೆ ಜಗಳವಾಗಿದ್ದಕ್ಕೆ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ತಾಯಿ ಕೊಳಕ್ಕೆ ನೂಕಿದ್ದಾಳೆ.
ನೂರ್ಜಹಾನ್ ನಿಸಾನ್ ತನ್ನ ನಾಲ್ಕು ಜನ ಹೆಣ್ಣು ಮಕ್ಕಳೊಂದಿಗೆ ಬಿಹಾರ ಗೋಪಾಲಗಂಜ್ ಜಿಲ್ಲೆಯಲ್ಲಿ ವಾಸಿಸುತ್ತಿರುತ್ತಾಳೆ. ಪತಿ ಅಸ್ಲಾಂ ಅಲಂ ಅಬ್ರಾಡ್‍ನಲ್ಲಿ ಕೆಲಸ ಮಾಡುತ್ತಿದ್ದಾರೆ. ದೂರವಾಣಿ ಕರೆಯಲ್ಲಿ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿದೆ. ಬಳಿಕವೇ ನಿಸಾನ್ ಬ್ಯಾಗ್‍ಪ್ಯಾಕ್ ಮಾಡಿಕೊಂಡು ತನ್ನ ಮೂಲ ನೆಲೆಯಾದ ಉತ್ತರಪ್ರದೇಶದ ಖುಷಿ ನಗರಕ್ಕೆ ಹೊರಟಿದ್ದಾರೆ. ಹೊರಡುವ ಮುನ್ನ ಮನೆಯ ಹತ್ತಿರದಲ್ಲಿದ್ದ ಕೊಳದಲ್ಲಿ ತನ್ನ ನಾಲ್ಕೂ ಹೆಣ್ಣು ಮಕ್ಕಳನ್ನು ನೂಕಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ. ಒಂದು ಮಗುವಿನ ಜೀವ ಉಳಿದಿದ್ದು, ಮೂವರ ಶವವಾಗಿ ಪತ್ತೆಯಾಗಿದ್ದಾರೆ.
ನಾಲ್ವರಲ್ಲಿ ಒಬ್ಬಳಾದ ಅಫ್ರೀನಾಳನ್ನು ಸ್ಥಳೀಯರು ಪ್ರಾಣಾಪಾಯದಿಂದ ರಕ್ಷಿಸಿದ್ದಾರೆ. ಘಟನೆಯ ಬಳಿಕ ತಾಯಿ ನಿಸಾನಳನ್ನು ಬಂಧಿಸಲಾಗಿದೆ. ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಚುನಾವಣಾ ಭಾಷಣ ಮಾಡುವ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement