ಬೆಟ್ಟದಿಂದ ಉರುಳಿದ ದೊಡ್ಡದೊಡ್ಡ ಬಂಡೆಗಳು; ಮುರಿದು ಬಿದ್ದ ಬ್ರಿಡ್ಜ್, 9 ಜನರ ಸಾವು, ..ವಿಡಿಯೊದಲ್ಲಿ ಸೆರೆಯಾಯ್ತು ದೃಶ್ಯ

ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದ ಸಾಂಗ್ಲಾ ಕಣಿವೆಯಲ್ಲಿ ಭಾನುವಾರ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಕನಿಷ್ಠ ಒಂಭತ್ತು ಜನರು ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಶೇರ್ ಮಾಡಿರುವ ವಿಡಿಯೊದಲ್ಲಿ, ಬಂಡೆಗಳ ದೊಡ್ಡ ಭಾಗ ಕೆಳಗಿನ ಕಣಿವೆಯಲ್ಲಿ ಉರುಳುತ್ತಿರುವುದನ್ನು ಕಾಣಬಹುದು. ದೊಡ್ಡ ಬಂಡೆಗಳು ಉರುಳಿ ಸೇತುವೆಯ ಒಂದು ಭಾಗವು ಮುರಿದು ನದಿಗೆ ಬೀಳುತ್ತಿರುವುದು ಕೂಡಾ ವಿಡಿಯೊದಲ್ಲಿದೆ.

ಕಿನ್ನೌರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಸಾಜು ರಾಮ್ ರಾಣಾ ಪ್ರಕಾರ, ಈ ಘಟನೆಯಲ್ಲಿ ಒಂಭತ್ತು ಮಂದಿ ಮೃತಪಟ್ಟಿದ್ದಾರೆ, ಮೂವರು ಗಾಯಗೊಂಡಿದ್ದಾರೆ.  ಸ್ಥಳದಲ್ಲಿ ರಕ್ಷಣಾ ತಂಡಗಳನ್ನು ನಿಯೋಜಿಸಲಾಗಿದೆ.’ ಗಾಯಗೊಂಡವರನ್ನುಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಬಂಡೆಗಳು ಪರ್ವತದ ಬುಡದಲ್ಲಿ ಕಾರುಗಳ ಮೇಲೆ ಬೀಳುತ್ತಿರುವುದನ್ನು ಮತ್ತು ಧೂಳೆಬ್ಬಿಸುವುದನ್ನು  ಸಹ ವಿಡಿಯೋದಲ್ಲಿ ಕಾಣಬಹುದು.

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಈ ಘಟನೆಯ ಬಗ್ಗೆ ವಿವರಣೆ ಪಡೆದಿದ್ದಾರೆ, ತಕ್ಷಣದ ಪರಿಹಾರ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಠಾಕೂರ್ ಹೇಳಿದ್ದಾರೆ.

ಶನಿವಾರ ಹಿಮಾಚಲ ಪ್ರದೇಶದ ಡಿಜಿಪಿ ಸಂಜಯ್ ಕುಂಡು ಅವರು ಎಚ್ಚರಿಕೆ ನೀಡಿದ್ದು, ಜನರು ಜಲಮೂಲಗಳ ಹತ್ತಿರ ಹೆಚ್ಚು ಹತ್ತಿರ ಹೋಗದಂತೆ ಎಚ್ಚರಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement