ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರಿಯಾ ಮಲಿಕಗೆ ಚಿನ್ನ

ಹಂಗೇರಿ : ಹಂಗೇರಿಯಿಂದ ನಡೆಯುತ್ತಿರುವ ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಿಯಾ ಮಲಿಕ್ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಭಾರತದ ಕೀರ್ತಿ ಪತಾಕೆ ಯನ್ನು ಹಾರಿಸಿದ್ದಾರೆ.
ವಿಶ್ವ ಕೆಡೆಟ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಿಯಾ ಮಲಿಕ್ ಅವರು ಮಹಿಳೆಯರ 73 ಕೆಜಿ ತೂಕ ವಿಭಾಗದ ಅಂತಿಮ ಸ್ಪರ್ಧೆಯಲ್ಲಿ 5-0 ಅಂತರದಿಂದ ಬೆಲಾರೂಸ್ ಕುಸ್ತಿಪಟು ಕ್ಸೆನಿಯಾ ಪಟಪೋವಿಚ್ ಸೋಲಿಸಿ ಚಿನ್ನದ ಪದಕ ಗೆದ್ದಿದ್ದಾರೆ.
ಪ್ರಿಯಾ ಮಲಿಕ್ ಅವರು 2019 ರಲ್ಲಿ ಪುಣೆಯಲ್ಲಿ ನಡೆದ ಖೇಲೋ ಇಂಡಿಯಾದ ಆವೃತ್ತಿಯಲ್ಲಿ ಚಿನ್ನದ ಪದಕ ಗೆದ್ದವರು ಮತ್ತು ನಂತರ ದೆಹಲಿಯಲ್ಲಿ ನಡೆದ 17 ನೇ ಶಾಲಾ ಕ್ರೀಡಾಕೂಟದಲ್ಲಿ ಅದೇ ವರ್ಷ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದರು. ಪ್ರಿಯಾ ಮಲಿಕ್ ವಿಶ್ವ ಕುಸ್ತಿ ಚಾಂಪಿಯನ್‌ ಶಿಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇನ್ನೋರ್ವ ಭಾರತೀಯ ಕುಸ್ತಿಪಟು ವರ್ಷಾ 65 ಕೆಜಿ ವಿಭಾಗದಲ್ಲಿ ಟರ್ಕಿಯ ಡುಗು ಜನರಲ್ ಅವರನ್ನು ಹಿಂದಿಕ್ಕಿ ಕಂಚಿನ ಪದಕ ಗೆದ್ದಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement