ಕೇಂದ್ರದ ಹೊಸ ಕೃಷಿ ಕಾನೂನು ವಿರೋಧಿಸಿ ಸಂಸತ್ತಿಗೆ ರಾಹುಲ್ ಗಾಂಧಿ ಟ್ರ್ಯಾಕ್ಟರ್ ಸವಾರಿ

ನವದೆಹಲಿ: ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸುವ ಸಲುವಾಗಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಸೋಮವಾರ ಸಂಸತ್ತಿಗೆ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದು ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು ಮತ್ತು ಈ ಮೂರು ಕೆಟ್ಟ ಕಾನೂನುಗಳನ್ನು ರದ್ದುಗೊಳಿಸುವಂತೆ ಕೇಂದ್ರದ ಬಿಜೆಪಿ ಸರ್ಕಾರವನ್ನು ಆಗ್ರಹಿಸಿದರು.
ನಾನು ರೈತರ ಸಂದೇಶವನ್ನು ಹೊತ್ತು ಸಂಸತ್ತಿಗೆ ಬಂದಿದ್ದೇನೆ. ಸರ್ಕಾರ ರೈತರ ಧ್ವನಿಯನ್ನು ನಿಗ್ರಹಿಸುತ್ತಿದೆ ಮತ್ತು ಈ ಕಪ್ಪು ಕಾನೂನುಗಳನ್ನು ರದ್ದುಗೊಳಿಸ ಬೇಕಾಗುತ್ತದೆ ಎಂದು ಸಂಸತ್ತಿನಲ್ಲಿ ಚರ್ಚೆ ನಡೆಯಲು ಬಿಡುತ್ತಿಲ್ಲ. ಈ ಕಾನೂನುಗಳು 2-3 ದೊಡ್ಡ ಉದ್ಯಮಿಗಳಿಗೆ ಅನುಕೂಲಕರವೆಂದು ಜಾರಿಗೆ ತರಲು ಹೊರಟಿದೆ. ” “ಸರ್ಕಾರವು ರೈತರು ತುಂಬಾ ಸಂತೋಷವಾಗಿದ್ದು ಮತ್ತು ಹೊರಗೆ ಭಯೋತ್ಪಾದಕರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಹೇಳುತ್ತಿದೆ. ಆದರೆ ವಾಸ್ತವದಲ್ಲಿ ಈ ಮೂರು ಕೃಷಿ ಕಾನೂನುಗಳ ಮೂಲಕ ರೈತರ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ರಾಹುಲ್​ ಗಾಂಧಿ ಆರೋಪಿಸಿದರು.
ರಾಹುಲ್​ ಗಾಂಧಿ ವಿಜಯ್ ಚೌಕ್ ಮೂಲಕ ಸಂಸತ್ತಿಗೆ ಟ್ರಾಕ್ಟರ್​ ಚಲಾಯಿಸಿಕೊಂಡು ಬಂದರು. ಅವರ ಜೊತೆ ಪಂಜಾಬ್ ಮತ್ತು ಹರಿಯಾಣದ ಕಾಂಗ್ರೆಸ್ ಸಂಸದರಾದ ದೀಪೇಂದ್ರ ಹೂಡಾ, ರಣ್​ವೀತ್​ ಸಿಂಗ್ ಬಿಟ್ಟು ಮತ್ತು ಪ್ರತಾಪ್ ಸಿಂಗ್ ಬಜ್ವಾ ಸಾಥ್​​ ನೀಡಿದರು.
“ರೈತರ ಭೂಮಿಯನ್ನು ಮಾರಾಟ ಮಾಡುವಂತೆ ಸರ್ಕಾರ ಒತ್ತಾಯಿಸಿದರೆ, ಸಂಸತ್ತಿನಲ್ಲಿ ಟ್ರಾಕ್ಟರುಗಳು ಓಡಾಡುತ್ತವೆ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರೈತರನ್ನು ರಾಜಕೀಯ ದಾಳವಾಗಿ ಪ್ರತಿಪಕ್ಷಗಳು ಬಳಸುತ್ತಿವೆ ಎಂದು ಬಿಜೆಪಿ ಹೇಳಿದೆ. “ರಾಹುಲ್ ಗಾಂಧಿ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ರೈತರನ್ನು ರಾಜಕೀಯ ಸಾಧನವಾಗಿ ಬಳಸಲಾಗುತ್ತಿದೆ. ಕಾನೂನುಗಳಲ್ಲಿ ಸಮಸ್ಯೆಗಳಿದ್ದರೆ ಅವುಗಳನ್ನು ತಿದ್ದುಪಡಿ ಮಾಡಲು ಒಕ್ಕೂಟ ಸರ್ಕಾರ ಸಿದ್ಧವಾಗಿದೆ. ರೈತರು ಕೂಡ ಮಾತುಕತೆಗೆ ಸಿದ್ಧರಾಗಿದ್ದಾರೆ” ಎಂದು ಬಿಜೆಪಿ ಸಂಸದ ವಿನಯ ಸಹಸ್ರಬುದ್ಧೆ ಹೇಳಿದ್ದಾರೆ.
ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರು ಕಾಯ್ದೆಯಲ್ಲಿರುವ ಸಮಸ್ಯೆಗಳನ್ನು ತೋರಿಸಿದರೆ ಅವುಗಳನ್ನು ಚರ್ಚಿಸಬಹುದು.ಆದರೆ ಇಲ್ಲಿ ಕುರುಡಾಗಿ ಸರ್ಕಾರದ ವಿರುದ್ದ ಮಾತನಾಡಲಾಗುತ್ತಿದೆ, ಪ್ರತಿಭಟನೆಯನ್ನು ರೈತರು ಅದಷ್ಟು ಬೇಗ ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ಮುಂಗಾರು ಅಧಿವೇಶನ ಪ್ರಾರಂಭವಾದಾಗಿನಿಂದ, ಕೃಷಿ ಕಾನೂನುಗಳ ಕುರಿತ ಚರ್ಚೆ ವಿಷಯವನ್ನು ಸಂಸತ್ತಿನಲ್ಲಿ ಹಲವಾರು ಬಾರಿ ಮುಂದೂಡಲಾಗಿದೆ. ಕೆಲವು ಕಾಂಗ್ರೆಸ್ ಸಂಸದರು ಈ ವಿಷಯ ಬಗೆಹರಿಯುವವರೆಗೂ ಸದನ ಕಾರ್ಯನಿರ್ವಹಿಸಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಶಿರೋಮಣಿ ಅಕಾಲಿ ದಳವೂ ಸಂಸತ್ತಿನ ಹೊರಗಡೆ ಪ್ರತಿಭಟನೆ ನಡೆಸಿದೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement