ಉದ್ಯಮಿ ವಿಜಯ್ ಮಲ್ಯ ಅವರನ್ನು ಲಂಡನ್ ಹೈಕೋರ್ಟ್ ಸೋಮವಾರ ದಿವಾಳಿಯೆಂದು ಘೋಷಿಸಿತು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟವು ಮಲ್ಯ ಅವರ ಈಗ ಕಾರ್ಯನಿರ್ವಹಿಸದೆ ನಿಂತು ಹೋಗಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಸಾಲ ನೀಡಿದ್ದವು, ಈ ಸಾಲವನ್ನು ವಸೂಲಿ ಮಾಡುವುದೇ ಇವುಗಳಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿತ್ತು. ಈ ತೀರ್ಪಿನಿಂದಾಗಿ ಸಾಲ ವಸೂಲಿ ಮಾಡುವ ಕೇಸನ್ನು ಬ್ಯಾಂಕ್ಗಳ ಒಕ್ಕೂಟ ಗೆದ್ದಂತಾಗಿದೆ.
ಮಲ್ಯ ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಈ ತೀರ್ಪಿನಿಂದಾಗಿ ಅವಕಾಶ ಸಿಕ್ಕಂತಾಗಿದೆ. ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮಲ್ಯ ಇದೇ ವೇಳೆ ಹೇಳಿದ್ದಾರೆ, ಆದರೆ ಇದಕ್ಕೆ ಅನುಮತಿ ನಿರಾಕರಿಸಲಾಗಿದೆ. ಮೇನಲ್ಲಿ ಆನ್ಲೈನ್ ಮೂಲಕ ವಿಚಾರಣೆ ನಡೆಸಲಾಗಿತ್ತು, ಬ್ಯಾಂಕುಗಳು ಸಲ್ಲಿಸಿದ್ದ ದಿವಾಳಿತನದ ಅರ್ಜಿಯನ್ನು ತಿದ್ದುಪಡಿ ಮಾಡುವ ಕಾನೂನನ್ನು ಲಂಡನ್ ಹೈಕೋರ್ಟ್ ಎತ್ತಿಹಿಡಿದಿತ್ತು, ಭಾರತದಲ್ಲಿ ಇರುವ ಆಸ್ತಿಗಳ ಮೇಲೆ ತಮ್ಮ ಆಸ್ತಿಗೆ ಭದ್ರತೆ ನೀಡಬೇಕು ಎಂದು ವಿಜಯ್ ಮಲ್ಯ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
65 ವರ್ಷದ ಉದ್ಯಮಿ ವಿಜಯ್ ಮಲ್ಯ ಅವರ ದಿವಾಳಿತನದ ಅರ್ಜಿಯನ್ನು ಒಂದು ತಾರ್ಕಿಕ ಅಂತ್ಯಕ್ಕೆ ತರಬೇಕು ಎಂದು ಬ್ಯಾಂಕ್ಗಳ ಒಕ್ಕೂಟವು ಒತ್ತಾಯಿಸಿತ್ತು.
ಎಸ್‌ಬಿಐ ನೇತೃತ್ವದ 13 ಭಾರತೀಯ ಬ್ಯಾಂಕುಗಳ ಒಕ್ಕೂಟ, ಇದರಲ್ಲಿ ಬ್ಯಾಂಕ್ ಆಫ್ ಬರೋಡಾ, ಕಾರ್ಪೊರೇಶನ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಯುಸಿಒ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜೆಎಂ ಫೈನಾನ್ಷಿಯಲ್ ಅಸೆಟ್ ರೀಕನ್ಸ್ಟ್ರಕ್ಷನ್ ಕೋ ಪ್ರೈವೇಟ್ ಲಿಮಿಟೆಡ್ ಇವುಗಳೇ ವಿಜಯ್ ಅವರಿಗೆ ಸಾಲ ನೀಡಿರುವ ಬ್ಯಾಂಕ್ಗಳಾಗಿವೆ, ಈ ತೀರ್ಪಿನ ಅನ್ವಯ ಒಟ್ಟು ವಿಜಯ್ ಮಲ್ಯ, 1 ಬಿಲಿಯನ್ ಯುಕೆ ಪೌಂಡ್ಗಳಿಗಿಂತಲೂ ಹೆಚ್ಚು ಹಣ ಪಾವತಿಸಬೇಕಾಗುತ್ತದೆ.
14 ವಿವಿಧ ಬ್ಯಾಂಕ್‌ಗಳಿಗೆ ವಿಜಯ್ ಮಲ್ಯ 9 ಸಾವಿರ ಕೋಟಿ ರೂ.ಗಳ ಸಾಲ ಮರುಪಾವತಿಸದೇ ವಿದೇಶಕ್ಕೆ ಪರಾರಿಯಾಗಿದ್ದರು. 2020ರ ಮೇ 14ರಂದು ಲಂಡನ್ ಸುಪ್ರೀಂ ಕೋರ್ಟ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.
ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ನ್ಯಾಯಾಲಯವು ಬ್ಯಾಂಕುಗಳಿಗೆ ವಿಜಯ್ ಮಲ್ಯಗೆ ಸೇರಿದ ಕೆಲವು ರಿಯಲ್ ಎಸ್ಟೇಟ್ ಆಸ್ತಿಗಳು ಮತ್ತು ಸೆಕ್ಯೂರಿಟಿಗಳನ್ನು ಮಾರಾಟ ಮಾಡಲು ಜೂನ್ 5 ರಂದು ಅವಕಾಶ ಮಾಡಿಕೊಟ್ಟಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ