ಬರುವ ವರ್ಷ ಭಾರತದ ಸ್ವಾತಂತ್ರ್ಯಕ್ಕೆ 75 ವರ್ಷ: ಸಂಸದರಿಗೆ 75 ಹೊಸ ಟಾಸ್ಕ್​ ಕೊಟ್ಟ ಪ್ರಧಾನಿ ಮೋದಿ

ನವದೆಹಲಿ: ಭಾರತಕ್ಕೆ ಸ್ವಾತಂತ್ರ್ಯ ಬಂದು 2022ರಲ್ಲಿ 75 ವರ್ಷ ಪೂರ್ತಿಯಾಗಲಿದೆ. ಇದಕ್ಕೆ ಒಂದು ವರ್ಷ ಮಾತ್ರ ಬಾಕಿ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಪಕ್ಷದ ಸಂಸದರಿಗೆ 75 ಟಾಸ್ಕ್​ಗಳನ್ನು ನೀಡಿದ್ದಾರೆ.
ಮಂಗಳವಾರ ನಡೆದ ಸಂಸದರ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಿತು. ದೇಶಕ್ಕೆ ಸ್ವತಂತ್ರ ಬಂದು 75 ವರ್ಷ ಪೂರೈಸುತ್ತಿರುವ ಹಿನ್ನೆಲೆ ಪ್ರಧಾನಿ ಮೋದಿ ತಮ್ಮ ಸಂಸದರಿಗೆ ಈ ಟಾಸ್ಕ್ ನೀಡಿದ್ದಾರೆ.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷದ ಸಂಭ್ರಮಾಚರಣೆಯಲ್ಲಿ 75 ಗ್ರಾಮಗಳಿಗೆ ಭೇಟಿ ನೀಡಿ, ಅಲ್ಲಿ ಜನತೆಯೊಂದಿಗೆ 75 ಗಂಟೆ ಸಮಯ ಕಳೆಯಬೇಕು. ಈ ಸಮಯದಲ್ಲಿ ದೇಶದ ಸಾಧನೆಗಳು ಸೇರಿದಂತೆ ಎಲ್ಲ ಮಾಹಿತಿಯನ್ನು ಅಲ್ಲಿನ ಜನರ ಜೊತೆ ಹಂಚಿಕೊಳ್ಳಬೇಕು. ಆದರೆ ಇದು ಸರ್ಕಾರಿ ಕಾರ್ಯಕ್ರಮ ಆಗದಂತೆ ಎಚ್ಚರಿಕೆ ವಹಿಸಿ ಎಂದು ಪ್ರಧಾನಿ ಸಂಸದರಿಗೆ ಸೂಚಿಸಿದ್ದಾರೆ.
2047ಕ್ಕೆ ಭಾರತಕ್ಕೆ ಸ್ವಾತಂತ್ರ ಸಿಕ್ಕು 100 ವರ್ಷ ಆಗುವ ಸಂದರ್ಭದಲ್ಲಿ ಭಾರತ ಹೇಗೆ ಅಭಿವೃದ್ಧಿ ಹೊಂದಬೇಕು ಎಂಬ ಬಗ್ಗೆ ಸಾರ್ವಜನಿಕರಿಂದ ನೇರವಾಗಿ ಮಾಹಿತಿ ಸಂಗ್ರಹಿಸಿ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಇಬ್ಬರ ಕಾರ್ಯಕರ್ತರನ್ನು ನೇಮಕ ಮಾಡಬೇಕು. ಇವರು ಪ್ರತಿಕ್ಷೇತ್ರದ 75 ಗ್ರಾಮಗಳಿಗೆ ಪ್ರವಾಸ ಮಾಡಿ ಪಟ್ಟಿ ಸಿದ್ಧಪಡಿಸಬೇಕು. ಡಿಜಿಟಲ್ ಸಾಕ್ಷರತೆಯಲ್ಲಿ ಭಾರತ ಎಲ್ಲಿಯವರೆಗೂ ತಲುಪಿದೆ ಮತ್ತು ಎಲ್ಲಿಯವರೆಗೂ ತಲುಪಬಹುದು ಎಂಬ ಮಾಹಿತಿಯನ್ನು ಕಲೆ ಹಾಕಿ ಅದರ ಪಟ್ಟಿ ಮಾಡಿ. ಈ ವೇಳೆ ದೇಶಕ್ಕಾಗಿ ನಾನೇನು ಮಾಡಬಲ್ಲೆ ಅನ್ನೋ ಭಾವನೆಯನ್ನು ಜನರಲ್ಲಿ ಮೂಡುವಂತೆ ಮಾಡಬೇಕು ಎಂದು ಪ್ರಧಾನಿ ಮೋದಿ ಸಂಸದರಿಗೆ ಹೇಳಿದ್ದಾರೆ. ಇದು ಜನಾಂದೋಲನ ಆಗಬೇಕು ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   'ನಮ್ಮಲ್ಲಿಗೆ ಪ್ರವಾಸಕ್ಕೆ ಬನ್ನಿ, ನಮ್ಮ ಆರ್ಥಿಕತೆ ಬೆಂಬಲಿಸಿ' : ಹದಗೆಟ್ಟ ಸಂಬಂಧಗಳ ಮಧ್ಯೆ ಭಾರತದ ಪ್ರವಾಸಿಗರಿಗೆ ಮನವಿ ಮಾಡಿದ ಮಾಲ್ಡೀವ್ಸ್ ಸರ್ಕಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement