ಭಾರತದಲ್ಲಿ 130 ದಿನಗಳಲ್ಲಿ ಅತಿ ಕಡಿಮೆ ಏಕದಿನ ಕೋವಿಡ್‌ ಪ್ರಕರಣ ದಾಖಲು

ನವದೆಹಲಿ: ಕೊರೊನಾ ವೈರಸ್   29,689 ಹೊಸ ಪ್ರಕರಣಗಳನ್ನು ಭಾರತ ದಾಖಲಿಸಿದೆ,  130 ದಿನಗಳಲ್ಲಿ ಭಾರತದ ಅತಿ ಕಡಿಮೆ ಏಕದಿನ ಕೋವಿಡ್‌ ಪ್ರಕರಣವಾಗಿದೆ.ಜೊತೆಗೆ ಕಳೆದ 24 ಗಂಟೆಗಳಲ್ಲಿ ಸೋಂಕಿನಿಂದಾಗಿ 415 ಸಾವುಗಳು ಸಂಭವಿಸಿವೆ.

ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ಹಂಚಿಕೊಂಡ ಮಾಹಿತಿಯ ಪ್ರಕಾರ, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ  ಒಟ್ಟು 42,363 ಸೋಂಕಿತರು ಗುಣಮುಖರಾಗಿದ್ದು,  ಒಟ್ಟು ಚೇತರಿಕೆ 3,06,21,469 ಕ್ಕೆ ತಲುಪಿದೆ. ಭಾರತದಲ್ಲಿ ಕೋವಿಡ್‌-19 ನ ಸಕ್ರಿಯ ಪ್ರಕರಣಗಳು ಈಗ 3,98,100 ರಷ್ಟಿದೆ. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ ಈಗ 4,21,382 ಆಗಿದೆ.

ದೇಶಾದ್ಯಂತ ಈವರೆಗೆ ಒಟ್ಟು 44,19,12,395 ಜನರಿಗೆ ಲಸಿಕೆ ನೀಡಲಾಗಿದೆ.

ಭಾರತದ ಕೋವಿಡ್ -19 ಮೊತ್ತವು ಕಳೆದ ವರ್ಷ ಆಗಸ್ಟ್ 7 ರಂದು 20 ಲಕ್ಷ, ಆಗಸ್ಟ್ 23 ರಂದು 30 ಲಕ್ಷ, ಸೆಪ್ಟೆಂಬರ್ 5 ರಂದು 40 ಲಕ್ಷ ಮತ್ತು ಸೆಪ್ಟೆಂಬರ್ 16 ರಂದು 50 ಲಕ್ಷ ದಾಟಿದೆ.

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement