ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಶಿಷ್ಯ ವೇತನ, ವೃದ್ಧರು-ವಿಧವೆಯರು, ಅಂಗವಿಕಲರಿಗೆ ಮಾಸಾಶನ ಹೆಚ್ಚಳ:ಮೊದಲ ದಿನವೇ ನೂತನ ಸಿಎಂ ಘೋಷಣೆ

ಬೆಂಗಳೂರು : ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಮೊದಲ ದಿನವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಬಳಿಕ ಬಸವರಾಜ ಬೊಮ್ಮಾಯಿ ಮೊದಲ ರಾಜ್ಯದ ಪ್ರಮುಖ ಅಧಿಕಾರಿಗಳ ಜೊತೆ ಸಭೆ ಮಾಡಿ ಹಲವು ನಿರ್ಧಾರಗಳನ್ನು ಕೈಗೊಂಡಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೊಮ್ಮಾಯಿ, ಆಡಳಿತದಲ್ಲಿ ತೊಂದರೆ ಆಗದಂತೆ ಕಾರ್ಯನಿರ್ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸರ್ಕಾರದ ದಿಕ್ಸೂಚಿ ಯಾವ ರೀತಿ ಇದೆ ಎಂದು ನಾನು ಹೇಳಿದ್ದೇನೆ. ಪ್ರತಿಯೊಂದು ಸಮಾಜದ ಪರವಾಗಿ ನಮ್ಮ ಸರ್ಕಾರ ಇದೆ ಎಂದು ಹೇಳಿದರು.
ನಮ್ಮ ಆಡಳಿತ ಮೈಕ್ರೋ ಹಂತಕ್ಕೆ ಹೋಗಬೇಕು. ಒಟ್ಟಾರೆ ಕಾರ್ಯಕ್ರಮ ಯಶಸ್ವಿಯಾಗುವ ರೀತಿ ಕೆಲಸ ಮಾಡಬೇಕು. ಯಾವುದೇ ಕೆಲಸ ವಿಳಂಬ ಆಗಬಾರದು. ನಾನೂ ಕೂಡ ನಿಮ್ಮ ಜೊತೆ ಒಬ್ಬ ಟೀಂ ಮೆಂಬರ್ ಎಂದು ಹೇಳಿದ್ದೇನೆ ಎಂದರು..
ಅಧಿಕಾರಿಗಳು ಏನೇ ಮಾಡಿದರೂ ನಡೆಯುತ್ತದೆ ಎಂಬುದನ್ನು ನಾನು ಒಪ್ಪುವುದಿಲ್ಲ. ಅಧಿಕಾರಿಗಳು ಯಾವುದೇ ಸಮಯದಲ್ಲೂ ನನ್ನ ಜೊತೆ ಸಲಹೆ ಸೂಚನೆಗಳ ಬಗ್ಗೆ ಚರ್ಚಿಸಬಹುದು. ಕೋವಿಡ್ ವೇಳೆ ಹಣಕಾಣಿಸಿನ ಶಿಸ್ತು ಮುಖ್ಯವಾಗಿದೆ. ಪ್ರತೀ ಇಲಾಖೆಯಲ್ಲಿ ಕನಿಷ್ಠ ಶೆ.5ರಷ್ಟು ಖರ್ಚು ರಷ್ಟು ಕಡಿಮೆ ಮಾಡಬೇಕು ಎಂದು ಸೂಚಿಸಿದ್ದೇನೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಗೋಕರ್ಣ : ಸಮುದ್ರದ ಅಲೆಗೆ ಸಿಲುಕಿದ್ದ ಮೂವರು ಪ್ರವಾಸಿಗರ ರಕ್ಷಣೆ

ಬೊಮ್ಮಾಯಿ ಸಂಪುಟ ಸಭೆಯ ನಿರ್ಣಯಗಳು :
ರೈತ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ಶಿಷ್ಯ ವೇತನ ಯೋಜನೆಗೆ ಒಂದು ಸಾವಿರ ಕೋಟಿ ರೂ.ನಿಗದಿ.
ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 1000 ರೂ.ಗಳಿಂದ 1200 ರೂ.ಗಳಿಗೆ ಹೆಚ್ಚಳ.. ಇದರಿಂದ 862 ಕೋಟಿ ರೂ.ವಾರ್ಷಿಕವಾಗಿ ಹೆಚ್ಚಳವಾಗಲಿದೆ
ವಿಧವಾ ವೇತನ 600 ರಿಂದ 800ಕ್ಕೆ ಏರಿಕೆ.. ಇದರಿಂದ 400 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.
ಶೇ.60-75ರಷ್ಟು ಅಂಗವಿಕಲವಿರುವವರಿಗೆ ಅಂಗವಿಕಲರ ವೇತನ ಯೋಜನೆಯಡಿ 600-800ರೂ ಗೆ ಹೆಚ್ಚಳ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement