ಟೋಕಿಯೊ:ಮಹಿಳೆಯರ ಬಾಕ್ಸಿಂಗ್ನಲ್ಲಿ ಭಾರತದ ಭರವಸೆಯಾಗಿದ್ದ ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್, ಟೋಕಿಯೊ ಒಲಿಂಪಿಕ್ಸ್ ಪ್ರಿ-ಕ್ವಾರ್ಟರ್ಫೈನಲ್ನಲ್ಲಿ ಸೋಲು ಅನುಭವಿಸಿ ಹೊರಬಿದ್ದಿದ್ದಾರೆ.
ಮಹಿಳೆಯರ 51 ಕೆ.ಜಿ.ವಿಭಾಗದಲ್ಲಿ 16ರ ಸುತ್ತಿನ ಹೋರಾಟದಲ್ಲಿ ಮೇರಿ ಕೋಮ್, ಕೊಲಂಬಿಯಾದ ಇಂಗ್ರಿಟ್ ವಲೆನ್ಸಿಯಾ ವಿರುದ್ಧ 2-3 ಅಂತರದಿಂದ ಸೋಲು ಅನುಭವಿಸಿದರು.
ಬಹುತೇಕ ತಮ್ಮ ಕೊನೆಯ ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿರುವ 38 ವರ್ಷದ ಮೇರಿ ಕೋಮ್ ಅವರಿಗೆ ಎದುರಾಳಿ ಸವಾಲನ್ನು ಮೆಟ್ಟಿ ನಿಲ್ಲಲು ಸಾಧ್ಯವಾಗಲಿಲ್ಲ.
ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿರುವ ಮೇರಿ ಕೋಮ್ ಮೊದಲ ರೌಂಡ್ನಲ್ಲಿ 1-4ರ ಹಿನ್ನಡೆ ಅನುಭವಿಸಿದರು. ಬಳಿಕ ದಿಟ್ಟ ಹೋರಾಟ ನೀಡಿದರೂ 2-3 ಅಂತರದಿಂದ ಸೋಲನುಭವಿಸಬೇಕಾಯಿತು. 32 ವರ್ಷದ ವಲೆನ್ಸಿಯಾ ಮೊದಲ ಬಾರಿಗೆ ಮೇರಿ ವಿರುದ್ಧ ಗೆಲುವು ದಾಖಲಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ