ಶ್ರೀಲಂಕಾದಲ್ಲಿ ವಿಶ್ವದ ಅತೀ ದೊಡ್ಡ ನೀಲಮಣಿ ಪತ್ತೆ..!

ಕೊಲಂಬೋ : ವಿಶ್ವದ ಅತೀ ದೊಡ್ಡ ನಕ್ಷತ್ರ ನೀಲಮಣಿ ಶ್ರೀಲಂಕಾದಲ್ಲಿ ಪತ್ತೆಯಾಗಿದೆ. ಬಾವಿಯನ್ನು ಅಗೆಯುವಾಗ ಈ ನೀಲಮಣಿ ಪತ್ತೆಯಾಗಿದ್ದು,ಇದು ವಿಶ್ವದ ಅತಿದೊಡ್ಡ ನಕ್ಷತ್ರ ನೀಲಮಣಿ ಎಂದು ಹೇಳಲಾಗಿದ್ದು, ಈ ಕುರಿತು ಅಧ್ಯಯನ ನಡೆಯುತ್ತಿದೆ.
ರತ್ನಪುರದ ರತ್ನ ಸಮೃದ್ಧ ಪ್ರದೇಶದಲ್ಲಿ ಮನೆ ಬಾವಿ ಅಗೆಯುವಾಗ ಬಂಡೆಯಾಕಾರದ ಕಲ್ಲು ಪತ್ತೆಯಾಗಿದೆ. ಇದನ್ನು ಅಗೆದು ಹೊರತೆಗೆದಾಗ ಅದು ಅತ್ಯಂತ ಬೆಲೆಬಾಳುವ ನೀಲ ಮಣಿ ಎಂಬುದು ಗೊತ್ತಾಗಿದೆ. ಸುಮಾರು 510 ಕೆ.ಜಿ ತೂಕವನ್ನುಈ ನಿಲಮಣಿ ಹೊಂದಿದೆ. ಆದರೆ ಭದ್ರತಾ ಕಾರಣದಿಂದಾಗಿ ಸಂಪೂರ್ಣ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಾಗುತ್ತಿಲ್ಲ ಎಂದು ಈ ಕುರಿತು ವರದಿ ಪ್ರಕಟಿಸಿದ ಬಿಬಿಸಿ ತಿಳಿಸಿದೆ.
ನೀಲಮಣಿ ಪತ್ತೆಯಾಗುತ್ತಿದ್ದಂತೆಯೇ ವಿಷಯವನ್ನು ಅಧಿಕಾರಿಗಳಿಗೆ ತಿಳಿಸಿದ್ದಾರೆ. ನಂತರದ ಕಲ್ಲಿನ ಕುರಿತು ಸಂಶೋಧನೆಯನ್ನು ನಡೆಸಲಾಗಿದ್ದು, ಅದು ವಿಶ್ವದ ಅತೀ ದೊಡ್ಡ ನೀಲಮಣಿ ಎನ್ನುವುದು ಬಹಿರಂಗವಾಗಿದೆ. ಕಲ್ಲನ್ನು ಸಂಪೂರ್ಣವಾಗಿ ಶುಚಿಗೊಳಿಸಲು ಸುಮಾರು ಒಂದು ವರ್ಷಗಳ ಕಾಲಾವಕಾಶವನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೇ ತಜ್ಞರ ಪ್ರಕಾರ ಈ ನೀಲಮಣಿಯು ಸುಮಾರು ನೂರು ಮಿಲಿಯನ್ ಡಾಲರ್‌ಗಿಂತಲೂ ಹೆಚ್ಚಿನ ಮೌಲ್ಯವನ್ನು ಹೊಂದಿದೆ ಎನ್ನಲಾಗುತ್ತಿದೆ.

ಪ್ರಮುಖ ಸುದ್ದಿ :-   ಸಿಂಗಾಪುರದಲ್ಲಿ ಮತ್ತೆ ವಿಜೃಂಭಿಸುತ್ತಿರುವ ಕೋವಿಡ್‌-19 ; 6 ದಿನಗಳಲ್ಲಿ 25,900 ಪ್ರಕರಣಗಳು ದಾಖಲು : ಮಾಸ್ಕ್‌ ಧರಿಸಲು ಶಿಫಾರಸು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement