ಸ್ವಾಭಿಮಾನ, ಗೌರವ ಬಿಟ್ಟು ಸಂಪುಟ ಸೇರುವುದಿಲ್ಲ: ಶೆಟ್ಟರ ಪುನರುಚ್ಚಾರ

ಹುಬ್ಬಳ್ಳಿ: ತಾನು ಸಚಿವ ಸಂಪುಟ ಸೇರುವುದಿಲ್ಲ ಎಂದು ನಿನ್ನೆಯೂ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತೇನೆ. ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ನಾನು ಸೇರಬಾರದು ಎಂದು ನಿರ್ಧರಿಸಿದ್ದೇನೆ ಎಂದು ಜಗದೀಶ ಶೆಟ್ಟರ ಹೇಳಿದರು.

ಹುಬ್ಬಳ್ಳಿ ಆರ್​ಎಸ್​ಎಸ್​ ಕಚೇರಿ ಕೇಶವ ಕುಂಜಕ್ಕೆ ಗುರುವಾರ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು,ನನ್ನ ನಿರ್ಧಾರ ಸ್ಪಷ್ಟವಾಗಿದೆ. ಯಡಿಯೂರಪ್ಪ ಅವರು ಹಿರಿಯರಿದ್ದರು ಹೀಗಾಗಿ ಮಾಜಿ ಮುಖ್ಯಮಂತ್ರಿಯಾದರೂ ಸಚಿವನಾಗಿದ್ದೆ. ಇಗ ನಾನು ಹಿರಿಯನಿರುವುದರಿಂದ, ಮಾಜಿ ಮುಖ್ಯಮಂತ್ರಿಯಾಗಿದ್ದರಿಂದ ಸಚಿವ ಸಂಪುಟ ಸೇರಬಾರದೆಂದು ನಿರ್ಧರಿಸಿದ್ದೇನೆ ಎಂದರು.
ನಾನು ರಾಜ್ಯಾಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ನಾನು ನಾಯಕನಾಗಿರುವುದರಿಂದ ಸ್ವಾಭಿಮಾನಕ್ಕೆ ಧಕ್ಕೆ ತಂದುಕೊಂಡು ಸಚಿವರಾಗಿ ಮುಂದುವರಿಯುವುದಕ್ಕೆ ಸಾಧ್ಯವಿಲ್ಲ. ಸ್ವಾಭಿಮಾನ  ಹಾಗೂ ಗೌರವ ಬಿಟ್ಟು ಹೇಗೆ ಸಂಪುಟ ಸೇರಲಿ. ನನಗೂ ಕಾನ್ಶಿಯಸ್‌ನೆಸ್‌ ಇರುತ್ತದಲ್ಲ. ಧಕ್ಕೆ ಆಗಿದೆ ಎಂದಲ್ಲ, ಆದರೆ ಅದು ಸರಿಯಲ್ಲ ಎಂಬುದು ನನ್ನ ನಿಲುವು. ಇದಕ್ಕಾಗಿ ಈ ತೀರ್ಮಾನ ತೆಗೆದುಕೊಂಡಿದ್ದೇನೆ. ನಾನು ಶಾಸಕನಾಗಿದ್ದೇನೆ. ಅಧಿಕಾರ ಇಲ್ಲದಿದ್ದರೂ ಅಭಿವೃದ್ಧಿ ಮಾಡಬಹುದು. ಈ ಹಿಂದೆ ಅಧಿಕಾರ ಇಲ್ಲದಿದ್ದಾಗ, ಪ್ರತಿಪಕ್ಷದ ನಾಯಕನಾಗಿದ್ದಾಗ ನಾನು ಕೆಸ ಮಾಡಲಿಲ್ಲವೇ..? ಅದೇರೀತಿ ಈಗಲೂ ಕೆಲಸ ಮಾಡುತ್ತೇನೆ. ಶಾಸಕನಾಗಿಯೇ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು
ಶೆಟ್ಟರ್​ ಮೇಲೆ ಪ್ರೀತಿ, ವಿಶ್ವಾಸವಿದೆ..:
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೆಟ್ಟರ ಮನೆಗೆ ಹೋಗುವುದು ರದ್ದಾಗಿದೆ. ಅದಕ್ಕೆ ಬೊಮ್ಮಾಯಿ ಅವರು ಪ್ರತಿಕ್ರಯೆ ನೀಡಿದ್ದು, ರಾತ್ರಿ 9 ಗಂಟೆಯೊಳಗೆ ವಿಮಾನ ಹೊರಡಬೇಕೆಂದು ಹೇಳಿದರು. ಹೀಗಾಗಿ ಜಗದೀಶ್ ಶೆಟ್ಟರ್​ ನಿವಾಸಕ್ಕೆ ಭೇಟಿ ಮಾಡಲು ಸಾಧ್ಯವಾಗಿಲ್ಲ. ಜಗದೀಶ್ ಶೆಟ್ಟರ ಮೇಲೆ ನಮಗೆ ಅಪಾರ ಪ್ರೀತಿ, ವಿಶ್ವಾಸವಿದೆ. ಅವರ ಜತೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಅವರು ಬೆಂಗಳೂರಿಗೆ ಬಂದ ಮೇಲೆ ಭೇಟಿಯಾಗುವೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement