ಭಾರತಕ್ಕೆ ಮತ್ತೊಂದು ಪದಕದ ಭರವಸೆ: ಬಾಡ್ಮಿಂಟನ್‌ನಲ್ಲಿ ಸೆಮಿ ಫೈನಲ್ ಪ್ರವೇಶಿಸಿದ ಪಿ.ವಿ.ಸಿಂಧು

ಟೊಕಿಯೊ ಒಲಂಪಿಕ್ಸ್​ನಲ್ಲಿ ಪದಕದ ಬೇಟೆಗೆ ಮುನ್ನುಗ್ಗುತ್ತಿರುವ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಕ್ವಾರ್ಟರ್​ ಫೈನಲ್​ನಲ್ಲಿ ಜಪಾನ್​ನ ಅಕನೆ ಯಾಮಗುಚಿ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಮುಸಾಷಿನೊ ಫಾರೆಸ್ಟ್ ಪ್ಲಾಜಾದಲ್ಲಿ ನಡೆದ ಪಂದ್ಯದಲ್ಲಿ 21-13, 22-20ರ ಅಂತರದಿಂದ ಸಿಂಧು ಯಾಮಗುಚಿ ವಿರುದ್ಧ ಗೆಲುವು ದಾಖಲಿಸಿದ್ದಾರೆ.
ಮೊದಲಿಗೆ ಅಕನೆ ಯಾಮಗುಚಿ ಆಕ್ರಮಣಕಾರಿ ಆಟವಾಡುತ್ತಾ 6-5 ರ ಅಂತರದಲ್ಲಿ ಮುಂದಿದ್ದರು. ಆದರೆ ನಂತರ ಲಯ ಕಂಡುಕೊಂಡ ಸಿಂಧು ಅವರಿಗೆ ಯಾಮಗುಚಿ ಸರಿಸಾಟಿಯಾಗಲೇ ಇಲ್ಲ. ಕೇವಲ 23 ನಿಮಿಷಗಳಲ್ಲಿ ಮೊದಲ ಸೆಟ್​ ಅನ್ನು 21-13 ಅಂತರದಲ್ಲಿ ಸಿಂಧು ವಶಪಡಿಸಿಕೊಂಡರು. ಎರಡನೇ ಸೆಟ್​ನಲ್ಲಿ ಮೊದಲಿಗೆ ಸಿಂಧು ಅವರು 11-6ರಿಂದ ಮುಂದಿದ್ದರು. ಆದರೆ ಅಲ್ಲಿಂದ ತಿರುಗಿ ಬಿದ್ದ ಯಾಮಗುಚಿ ತೀವ್ರ ಪೈಪೋಟಿ ನೀಡಿದರು. ಕೊನೆಗೆ 20-20ರಲ್ಲಿ ಸೆಟ್ ಸಮಬಲವಾಗಿತ್ತು. ಆದರೆ ಸಿಂಧು ಎರಡನೇ ಸೆಟ್​ 22-20ರಿಂದ ಗೆದ್ದರು. ಪಂದ್ಯದ ಗೆಲುವಿನಿಂದ ಪಿ.ವಿ.ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ