ರಾಜ್ ಕುಂದ್ರಾ ಪ್ರಕರಣ:ಶಿಲ್ಪಾ ಶೆಟ್ಟಿಯಿಂದ ಮಾಧ್ಯಮಗಳ ವಿರುದ್ಧ ಬಾಂಬೆ ಹೈಕೋರ್ಟ್​​ನಲ್ಲಿ ಮಾನಹಾನಿ ಮೊಕದ್ದಮೆ

ಮುಂಬೈ: ರಾಜ್ ಕುಂದ್ರಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾನಹಾನಿಕರ ವಿಷಯವನ್ನು ಪ್ರಕಟಿಸದಂತೆ ತಡೆ ಕೋರಿ ವಿವಿಧ ಮಾಧ್ಯಮ ಸಂಸ್ಥೆಗಳು / ಸುದ್ದಿ ವಾಹಿನಿಗಳ ವಿರುದ್ಧ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಪರಿಣಾಮ್ ಲಾ ಅಸೋಸಿಯೇಟ್ಸ್ ಮೂಲಕ ಸಲ್ಲಿಸಿದ ತನ್ನ ಮೊಕದ್ದಮೆಯಲ್ಲಿ, ಮಾಧ್ಯಮಗಳು ಸುದ್ದಿಗಳನ್ನು ಸಂವೇದನಾಶೀಲಗೊಳಿಸುವ ಮೂಲಕ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಆಕ್ಷೇಪಾರ್ಹ ಲೇಖನಗಳನ್ನು ಅಪ್‌ಲೋಡ್ ಮಾಡಿವೆ. ಆಕೆಯ ಬಗ್ಗೆ ಸುಳ್ಳು ಸಂಗತಿ ಮತ್ತು ಅವಳ ವಿರುದ್ಧ ನಡೆಯುತ್ತಿರುವ ಕ್ರಿಮಿನಲ್ ತನಿಖೆಯನ್ನು ವರದಿ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರತಿವಾದಿಗಳು ತನ್ನ ವಿರುದ್ಧ ಪ್ರಕಟಿಸಿರುವ ಮಾನಹಾನಿ ವಿಷಯವನ್ನು ತೆಗೆದುಹಾಕಬೇಕು ಮತ್ತು ಆಪಾದಿತ ಲೇಖನಗಳು ಮತ್ತು ವಿಡಿಯೊಗಳು, ಆಧಾರರಹಿತ ಮತ್ತು ಅನಗತ್ಯ ಎಂದು ಬೇಷರತ್ ಕ್ಷಮೆಯಾಚಿಸಬೇಕೆಂದು ಶಿಲ್ಪಾ ಮನವಿ ಮಾಡಿದ್ದಾರೆ.
ಶಿಲ್ಪಾ ಶೆಟ್ಟಿ ಪ್ರತಿವಾದಿಗಳಿಗೆ ಜಂಟಿಯಾಗಿ ಮತ್ತು ಕಟ್ಟು ನಿಟ್ಟಾಗಿ ಆದೇಶಿಸಬೇಕು. ಅರ್ಜಿದಾರರಿಗೆ 25 ಕೋಟಿ ರೂ. ಮತ್ತು ಅದರೊಂದಿಗೆ ವರ್ಷಕ್ಕೆ ಶೇ 18 ಬಡ್ಡಿಯೊಂದಿಗೆ ಪಾವತಿಸಬೇಕು. ಮೊಕದ್ದಮೆ ಸಲ್ಲಿಸಿದ ದಿನಾಂಕದಿಂದ ಪಾವತಿ ಆಗುವವರೆಗೆ ಪಾವತಿ ಮಾಡಬೇಕು ಎಂದು ಅರ್ಜಿಯಲ್ಲಿ ಹೇಳಿದೆ.
ತನ್ನ ಜೀವನ ಮತ್ತು ಪತಿಯೊಂದಿಗಿನ ಸಂಬಂಧದ ಬಗ್ಗೆ ತಪ್ಪಾದ, ಅವಹೇಳನಕಾರಿ, ಸುಳ್ಳು ಮಾನಹಾನಿಕರ ಹೇಳಿಕೆಗಳನ್ನು ಪ್ರಕಟಿಸುವ ಮೂಲಕ ಮಾಧ್ಯಮಗಳು ತನ್ನ ಗೌಪ್ಯತೆ ಹಾಗೂ ವ್ಯಕ್ತಿತ್ವದ ಮೇಲೆ ದಾಳಿ ಮಾಡುತ್ತವೆ ಮತ್ತು ತನ್ನ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುತ್ತವೆ ಎಂದು ಅವರು ಆರೋಪಿಸಿದ್ದಾರೆ.
ಆ ಮಾಹಿತಿ ಸಂಪೂರ್ಣವಾಗಿ ಸುಳ್ಳು, ತಪ್ಪಾದ, ಅವಹೇಳನಕಾರಿ ಮತ್ತು ಮಾನಹಾನಿಕರ ಆಗಿರುವುದರಿಂದ, ಸರಿಪಡಿಸಲಾಗದ ಹಾನಿ, ನಷ್ಟವನ್ನುಂಟು ಮಾಡಿದ್ದು ಸಾರ್ವಜನಿಕರ ಮುಂದೆ ಆಕೆಯ ಖ್ಯಾತಿಗೆ ಹಾನಿ ಉಂಟುಮಾಡಲಾಗಿದೆ” ಎಂದು ಮನವಿಯಲ್ಲಿ ಹೇಳಿದ್ದಾರೆ.
ಶಿಲ್ಪಾ ಶೆಟ್ಟಿಯ ಪತಿ ರಾಜ್ ಕುಂದ್ರಾ ಅವರನ್ನು ಇತ್ತೀಚೆಗೆ ಪೋರ್ನೊಗ್ರಫಿ ದಂಧೆಯಲ್ಲಿ ಬಂಧಿಸಲಾಗಿದ್ದು, ಪ್ರಸ್ತುತ ಜೈಲಿನಲ್ಲಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ರಸ್ತೆಬದಿ ರೋಲ್‌ ಮಾರುವ 10 ವರ್ಷದ ಬಾಲಕನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ; ಸ್ಫೂರ್ತಿಯೂ ಹೌದು; ಸಹಾಯ ಮಾಡುವೆ ಎಂದ ಆನಂದ ಮಹೀಂದ್ರಾ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement