ವಾರದೊಳಗೆ ರಾಜ್ಯ ಸಚಿವ ಸಂಪುಟ ರಚನೆ ಸಾಧ್ಯತೆ; ನಡ್ಡಾ ಭೇಟಿ ಬಳಿಕೆ ಸಿಎಂ ಬೊಮ್ಮಾಯಿ ಹೇಳಿಕೆ

ನವದೆಹಲಿ: ವಾರದೊಳಗೆ ರಾಜ್ಯ ಸಚಿವ ಸಂಪುಟದ ರಚನೆಯಾಗಬಹುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಹೇಳಿದ್ದಾರೆ.
ಇಂದು ೯ಶುಕ್ರವಾರ) ಪ್ರಧಾನಿ ಭೇಟಿ ಬಳಿಕೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿನಡ್ಡಾ ಅವರ ಜೊತೆಗೆ
ಸಂಪುಟ ರಚನೆ ಕುರಿತು ಚರ್ಚಿಸಿದ್ದೇನೆ. ಮತ್ತೆ ದೆಹಲಿಗೆ ಬರಬೇಕೋ ಬೇಡವೋ ಎಂಬುದನ್ನು ಅವರು ತಿಳಿಸುತ್ತಾರೆ. ಕೆಲವೆ ದಿನಗಳಲ್ಲಿ ಸಂಪುಟ ರಚನೆ ಬಗ್ಗೆ ಚರ್ಚೆ ಮಾಡಲಾಗುವುದು. ವಾರದೊಳಗೆ ಸಂಪುಟ ರಚನೆ ಮಾಡಬಹುದು. ಅದಕ್ಕೋಸ್ಕರ ಮತ್ತೆ ದೆಹಲಿಗೆ ಬರಬೇಕಾಗಬಹುದು, ಬರದೆಯೂ ಸಂಪುಟಕ್ಕೆ ಒಪ್ಪಿಗೆ ಸಿಗಬಹುದು ಎಂದು ಬೊಮ್ಮಾಯಿ ತಿಳಿಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅವರ ಬಳಿ ಸಂಪುಟ ರಚನೆ ಬಗ್ಗೆ ಮಾರ್ಗದರ್ಶನ ಪಡೆಯಲಾಗುವುದು. ಬಿಜೆಪಿ ರಾಷ್ಟ್ರೀಯ ಪಕ್ಷವಾಗಿರುವ ಹಿನ್ನಲೆ ಹೈ ಕಮಾಂಡ್​ನೊಂದಿಗೆ ಈ ಸಂಬಂಧ ಚರ್ಚೆ ನಡೆಸಲೇ ಬೇಕಾಗುತ್ತದೆ ಎಂದರು.
ಇಂದು ಬೆಳಗ್ಗೆ ಕೇಂದ್ರ ನೀರಾವರಿ ಸಚಿವ ಗಜೇಂದ್ರ ಸಿಂಗ್​ ಶೇಖಾವತ್​ ಅವರನ್ನು ಭೇಟಿಯಾದ ಮುಖ್ಯಮಂತ್ರಿಗಳು ಹಲವು ನೀರಾವರಿ ಯೋಜನೆಗಳ ಕುರಿತು ಚರ್ಚೆ ನಡೆಸಿದರು. ಈ ಹಿಂದೆ ಜಲ ಸಂಪನ್ಮೂಲ ಸಚಿವರಾಗಿ ಬಸವರಾಜ ಬೊಮ್ಮಾಯಿ ಕಾರ್ಯ ನಿರ್ವಹಿಸಿದ್ದರು. ಹೀಗಾಗಿ ಮೇಕೆದಾಟು, ಮಹದಾಯಿ ಸೇರಿದಂತೆ ಪ್ರಮುಖ ಯೋಜನೆಗಳ ಕುರಿತು ಅವರು ಚರ್ಚೆ ನಡೆಸಿದರು.
ಎತ್ತಿನಹೊಳೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಲು ಮನವಿ ಮಾಡಲಾಗಿದೆ. ಕಳಸಾ ಬಂಡೂರಿ ಎಂಓಫ್ ಕ್ಲಿಯರೆನ್ಸ್ ಆಗಬೇಕು. ಅದನ್ನು ಬೇಗ ಮಾಡಿ ಎಂದು ಕೇಳಿದ್ದೇನೆ. ಮುಂದಿನ ಭೇಟಿ ವೇಳೆ ಯೋಜನೆ ಆಧರಿಸಿ ಮನವಿ ಮಾಡುತ್ತೇನೆ. ಕೇಂದ್ರದ ಯೋಜನೆಗಳನ್ನು ಪಡೆದುಕೊಳ್ಳಲು ತಂಡ ರೂಪಿಸುತ್ತೇನೆ ಎಂದರು.
ಜನ ಆಡಳಿತದಲ್ಲಿ ಚುರುಕನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಆರ್ಥಿಕತೆಯೂ ಸೇರಿದಂತೆ ಹಲವು ಸಮಸ್ಯೆಗಳಿಗೆ ಅವುಗಳನ್ನು ಸಮರ್ಥವಾಗಿ ಎದುರಿಸುತ್ತೇವೆ. ಸದ್ಯಕ್ಕೆ ಕೋವಿಡ್ ಮತ್ತು ಪ್ರವಾಹದ ಬಗ್ಗೆ ಗಮನಹರಿಸುತ್ತೇವೆ. ನಂತರ ರೈತರು, ಮಹಿಳೆಯರ ಆದಾಯ ಹೆಚ್ಚಿಸುವ ಪ್ರಯತ್ನ ಮಾಡುತ್ತೇವೆ. ಉತ್ತಮ ಆಡಳಿತ ನೀಡಿದರೆ ಭ್ರಷ್ಟಾಚಾರ ಕಡಿಮೆ ಆಗುತ್ತದೆ. ಕೆಲಸವನ್ನು ನಿಧಾನ ಮಾಡಿದರೆ ಭ್ರಷ್ಟಾಚಾರ ಹೆಚ್ಚಾಗುತ್ತದೆ. ಸದ್ಯದ ಕ್ಲಿಷ್ಟ ಪರಿಸ್ಥಿತಿಯಲ್ಲೂ ಉತ್ತಮ ಸಂಪುಟ ರಚಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಶಿವಕುಮಾರ್​ ಉದಾಸಿ, ಉಮೇಶ್​ ಜಾಧವ್​, ಮಾಜಿ ಸಚಿವರಾದ ಆರ್​ ಅಶೋಕ್​, ಉಮೇಶ್​ ಕತ್ತಿ ಕೂಡ ಬೊಮ್ಮಾಯಿ ಅವರ ಜೊತೆಗಿದ್ದರು. ಹಾಜರಿದ್ದರು.

ಪ್ರಮುಖ ಸುದ್ದಿ :-   ರೇಷನ್ ಕಾರ್ಡುದಾರರಿಗೆ ಗುಡ್ ನ್ಯೂಸ್: ರೇಷನ್‌ ಕಾರ್ಡ್‌ ಇ ಕೆವೈಸಿ ಗಡುವು ವಿಸ್ತರಿಸಿದ ಸರ್ಕಾರ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement