ಗದಿಗೆಪ್ಪಗೌಡರ ಒಳ ಬಿಟ್ಟವರು ಯಾರು: ವಿವರಣೆ ಕೇಳಿದ ಡಿಕೆಶಿ..?

posted in: ರಾಜ್ಯ | 0

ಹುಬ್ಬಳ್ಳಿ: ನಗರದ ಕ್ಯುಬಿಕ್ಸ್ ಹೊಟೇಲ್‌ನಲ್ಲಿ ನಡೆದ ಕಾಂಗ್ರೆಸ್ ಸಂಘಟನಾ ಸಭೆಗೆ ಯಾವುದೇ ಆಹ್ವಾನವಿಲ್ಲದೆ ಒಳಬಂದು ಗದ್ದಲಕ್ಕೆ ಮುಂದಾದ ಗಿರೀಶ ಗದಿಗೆಪ್ಪಗೌಡರನ್ನು ಒಳಗೆ ಬಿಟ್ಟವರು ಯಾರು ಎಂದು ವಿವರಣೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹುಬ್ಬಳ್ಳಿ-ಧಾರವಾಡ ಮಹಾನಗರ ಕಾಂಗ್ರೆಸ್ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ .ಆದರೆ ಅಧಿಕೃತವಾಗಿ ಯಾರೂ ತಿಳಿಸಿಲ್ಲ.
ಕೆಪಿಸಿಸಿ ಅಧ್ಯಕ್ಷರ ಎದುರೇ ಮುಜುಗರ ಆಗುವಂತೆ ನಡೆದುಕೊಂಡ ವ್ಯಕ್ತಿ ಯಾರು, ಅವರ ಹಿನ್ನೆಲೆ ಏನು, ಪಕ್ಷಕ್ಕೆ ಕೊಡುಗೆ ಏನೆಂದು ರಾಜ್ಯ ಅಧ್ಯಕ್ಷರು ಮಹಾನಗರ ಅಧ್ಯಕ್ಷರಿಗೆ ಕೇಳಿದ್ದಾರೆನ್ನಲಾಗಿದೆ.
ಪದಾಧಿಕಾರಿಗಳ ಸಭೆಯಲ್ಲಿ ಯಾವುದೇ ಆಹ್ವಾನವಿಲ್ಲದೇ ಸಭೆಯ ಒಳಕ್ಕೆ ಬಂದು ಸಭೆಯ ಮಧ್ಯೆ ಎದ್ದು ನಿಂತು ಗೊಂದಲ ಸೃಷ್ಟಿಸಿದ ಕಾಂಗ್ರೆಸ್‌ ಕಾರ್ಯಕರ್ತನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಚರ್ಚೆ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ