ಅಮೆರಿಕದಲ್ಲಿ ಹೊಸ ಕೋವಿಡ್ ನಿರ್ಬಂಧಗಳ ಸಾಧ್ಯತೆ: ಬಿಡೆನ್

ವಾಶಿಂಗ್ಟನ್: ಕೋವಿಡ್-19 ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳು ಅಥವಾ ನಿರ್ಬಂಧಗಳು ಜಾರಿಗ ಬರುವ ಎಲ್ಲ ಸಾಧ್ಯತೆಗಳಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಹೇಳಿದ್ದಾರೆ.
ವಾರಾಂತ್ಯದ ವಿಶ್ರಾಂತಿಗಾಗಿ ಶ್ವೇತಭವನದಿಂದ ಹೆಲಿಕಾಪ್ಟರಿನಲ್ಲಿ ಹೊರಡುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೆರಿಕದ ಜನತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಅಥವಾ ನಿರ್ಬಂಧಗಳನ್ನು ನಿರೀಕ್ಷಿಸಬೇಕೇ ಎಂಬ ಪ್ರಶ್ನೆಗೆ, ಈ ಎಲ್ಲ ಸಾಧ್ಯತೆಗಲೂ ಇವೆ ಎಂದು ಅವರು ಉತ್ತರಿಸಿದರು.
ಆದರೆ, ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂಬ ಬಗ್ಗೆ ಅವರು ಸ್ಪಷ್ಟಪಡಿಸಲಿಲ್ಲ. ಆದರೆ, ಗುರುವಾರ ಸಾಕಷ್ಟು ಸಂಖ್ಯೆಯಲ್ಲಿ ಜನರಿಗೆ ಲಸಿಕೆಗಳನ್ನು ಕೊಡಲಾಗಿದೆ ಎಂದು ಅವರು ಹೇಳಿದರು.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ : ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ ಪೊಲೀಸರು

ನಿಮ್ಮ ಕಾಮೆಂಟ್ ಬರೆಯಿರಿ

advertisement