ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬರೋಬ್ಬರಿ 7 ಪದಕ ಗೆದ್ದು ದಾಖಲೆ ಬರೆದ ಈಜುಗಾರ್ತಿ..!

ಟೋಕಿಯೋ ಒಲಂಪಿಕ್ಸ್‌ನಲ್ಲಿ ಬರೋಬ್ಬರಿ ಏಳು ಪದಕ ಗೆದ್ದು ಆಸ್ಟ್ರೇಲಿಯಾದ ಈಜುಗಾರ್ತಿ ಎಮ್ಮಾ ಮೆಕಿಯನ್ ಮಹಿಳಾ ಕ್ರೀಡಾಪಟುವಾಗಿ ಇತಿಹಾಸ ನಿರ್ಮಿಸಿದ್ದಾರೆ. ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಅತೀ ಹೆಚ್ಚು ಪದಕಗಳಿಸಿದ ಮಹಿಳೆ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.
ಭಾನುವಾರ ನಡೆದ 4X100 ಮಹಿಳೆಯರ ಫ್ರೀ ಸ್ಟೈಲ್ ರಿಲೆಯಲ್ಲಿ ಚಿನ್ನ ಗಳಿಸುವ ಮೂಲಕ ಎಮ್ಮಾ ಮೆಕಿಯನ್ ದಾಖಲೆ ನಿರ್ಮಿಸಿದರು. ಇದಕ್ಕೂ ಮೊದಲು 1952ರಲ್ಲಿ ಸೋವಿಯತ್ ಒಕ್ಕೂಟದ ಜಿಮ್ನಾಸ್ಟ್ ಪಟು ಮರಿಯ ಗೊರೊವೊವಿಸ್ಕ ಒಲಿಂಪಿಕ್ಸ್​ನಲ್ಲಿ ಏಳು ಪದಕಗಳನ್ನು ಜಯಿಸಿ ಇತಿಹಾಸ ನಿರ್ಮಿಸಿದ್ದರು. ಇದೀಗ ಎಮ್ಮಾ ಮೆಕಿಯನ್ ಒಂದೇ ಒಲಿಂಪಿಕ್ಸ್​ನಲ್ಲಿ ಏಳು ಪದಕಗಳನ್ನು ಗೆಲ್ಲುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ.
ಈ 7 ಪದಕದಲ್ಲಿ ನಾಲ್ಕು ಚಿನ್ನದ ಪದಕಗಳು ಸೇರಿವೆ. ಉಳಿದ ಮೂರು ಕಂಚಿನ ಪದಕಗಳು.
2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಮೈಕಲ್ ಫೆಲ್ಪ್ಸ್ ಒಟ್ಟು 8 ಪದಕಗಳನ್ನು ಗೆದ್ದಿದ್ದರು. ಇದೀಗ ಒಲಿಂಪಿಕ್ಸ್​ವೊಂದರಲ್ಲಿ ಏಳು ಪದಕ ಮೊದಲ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆ ಎಮ್ಮಾ ಪಾತ್ರರಾಗಿದ್ದಾರೆ.

ಎಮ್ಮಾ ಮೆಕಿಯನ್ ಗೆದ್ದ ಪದಕಗಳ ವಿವರಗಳು..:
50 ಮೀ. ಫ್ರೀಸ್ಟ್ರೈಲ್ (ಚಿನ್ನ), 100 ಮೀ. ಫ್ರೀಸ್ಟೈಲ್(ಚಿನ್ನ), 100 ಮೀ. ಬಟರ್ ಫ್ಲೈ (ಕಂಚು), 4×200 ಮೀ. ಫ್ರೀ ಸ್ಟೈಲ್ ರಿಲೇ (ಕಂಚು), 4×100 ಮೀ. ಮಿಕ್ಸೆಡ್ ಮೆಡ್ಲಿ ರಿಲೇ (ಕಂಚು), 4×100 ಮೀ. ಪ್ರೀಸ್ಟೈಲ್ ರಿಲೇ(ಚಿನ್ನ), 4×100 ಮೀ. ಮೆಡ್ಲಿ ರಿಲೇ (ಚಿನ್ನ)
ಒಟ್ಟು 7 ಪದಕಗಳನ್ನು ಗೆದ್ದು ಎಮ್ಮಾ ಆಸ್ಟ್ರೇಲಿಯಾದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ.

ಪ್ರಮುಖ ಸುದ್ದಿ :-   ಕೋಟಿಗಟ್ಟಲೆ ಬೆಲೆಗೆ ಮಾರಾಟವಾಗಿ ನೂತನ ದಾಖಲೆ ನಿರ್ಮಿಸಿದ ಭಾರತದ ಮೂಲದ ಈ ತಳಿಯ ಹಸು..! ಬೆಲೆ ಕೇಳಿದ್ರೆ ದಂಗಾಗ್ತೀರಾ...!!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement