ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಮತ್ತೊಂದು ಪದಕ: ಬ್ಯಾಡ್ಮಿಂಟನ್ ನಲ್ಲಿ ಕಂಚಿನ ಪದಕ ಗೆದ್ದ ಸಿಂಧು

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಕಂಚಿನ ಪದಕ ಗೆದ್ದಿದ್ದಾರೆ.
ಭಾನುವಾರ ನಡೆದ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಚೀನಾದ ಹೀ ಬಿಂಗ್ಜಿಯಾವೊ ( ಅವರನ್ನು 21-13, 12-21 ಸೆಟ್​ಗಳಿಂದ ಮಣಿಸುವ ಮೂಲಕ ಪದಕ ಗೆದಿದ್ದಿದ್ದಾರೆ.ಈ ಪಂದ್ಯದಲ್ಲಿ ಬಿಂಗ್ಜಿಯಾವೊ ವಿರುದ್ದ ಮೊದಲ ಸುತ್ತಿನ ಆರಂಭದಲ್ಲೇ ಸಿಂಧು ಮೇಲುಗೈ ಸಾಧಿಸಿದ್ದರು . ಸಿಂಧು ಅವರ ಭರ್ಜರಿ ಟೈಮಿಂಗ್ ಹಾಗೂ ನಿಖರತೆ ಮುಂದೆ ಮೊದಲ ಸುತ್ತಿನಲ್ಲಿ 21-13 ಗೆಲುವು ಸಾಧಿಸಿದರು. ಸಿಂಧು 2ನೇ ಸುತ್ತಿನಲ್ಲೂ ಭರ್ಜರಿ ಪ್ರದರ್ಶನ ನೀಡಿದರು.
ಈ ಮೂಲಕ ಸಿಂಧು ಒಲಿಂಪಿಕ್ಸ್​ನಲ್ಲಿ 2ನೇ ಬಾರಿ ಪದಕ ಗೆದ್ದ ಸಾಧನೆ ಮಾಡಿದರು. ಈ ಹಿಂದೆ 2016ರಲ್ಲಿ ರಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದರು. ಇದೀಗ ಕಂಚಿನ ಪದಕದೊಂದಿಗೆ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ.
ಒಲಿಂಪಿಕ್ಸ್ ಆರಂಭಕ್ಕೂ ಮುನ್ನವೇ ಸಿಂಧು ಅವರಿಂದ ಪದಕ ನಿರೀಕ್ಷಿಸಲಾಗಿತ್ತು. ಅದರಂತೆ ಸೆಮಿ ಫೈನಲ್ ಪ್ರವೇಶಿಸಿದ್ದ ಅವರು ತೈ ಜು ಯಿಂಗ್​ ವಿರುದ್ಧ 18-21, 12-21 ಸೆಟ್​ಗಳಿಂದ ಪರಾಜಯಗೊಂಡಿದ್ದರಿಂದ ಚಿನ್ನದ ಕನಸು ಭಗ್ನಗೊಂಡಿತು. ಇದೀಗ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.

ಪ್ರಮುಖ ಸುದ್ದಿ :-   ಬೆಂಬಲ ಹಿಂಪಡೆದ ಮೂವರು ಪಕ್ಷೇತರ ಶಾಸಕರು : ಸಂಕಷ್ಟದಲ್ಲಿ ಹರಿಯಾಣದ ಬಿಜೆಪಿ ಸರ್ಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement