ಸಚಿವರು, ಡಿಸಿಎಂ ಬಗ್ಗೆ ಇಂದು ಸಂಜೆ ಗೊತ್ತಾಗಲಿದೆ, ವರಿಷ್ಠರ ತೀರ್ಮಾನ ಅಂತಿಮ: ಬೊಮ್ಮಾಯಿ

ನವದೆಹಲಿ: ರಾಜ್ಯ ಸಚಿವ ಸಂಪುಟ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಜೊತೆ ಚರ್ಚೆ ನಡೆಸಿದ್ದೇನೆ. ಬಿಜೆಪಿ ಅಧ್ಯಕ್ಷರು ಕೆಲವಷ್ಟು ಸಲಹೆ ನೀಡಿದ್ದಾರೆ. ಹೈಕಮಾಂಡ್‌ ಒಳ್ಳೆಯ ತೀರ್ಮಾನ ಮಾಡುವ ವಿಶ್ವಾಸವಿದೆ. ಮಂಗಳವಾರ (ಆಗಸ್ಟ್ 3) ಸಂಜೆ ನೂತನ ಸಚಿವರ ಪಟ್ಟಿ ಪ್ರಕಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ದೆಹಲಿ ಜೆಪಿ ನಡ್ಡಾ ನಿವಾಸದ ಬಳಿ ಹೇಳಿಕೆ ನೀಡಿದ್ದಾರೆ.
ಯಾರು, ಎಷ್ಟು ಜನ ಸಚಿವರಾಗುತ್ತಾರೆಂದು ನಾಳೆ ಗೊತ್ತಾಗಲಿದೆ. ಉಪಮುಖ್ಯಮಂತ್ರಿಗಳ ಸ್ಥಾನಗಳ ಬಗ್ಗೆಯೂ ನಾಳೆಯೇ ಅಂತಿಮವಾಗಲಿದೆ. 2-3 ಪಟ್ಟಿ ಕೊಟ್ಟಿದ್ದೇವೆ, ವರಿಷ್ಠರಿಂದ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಬೊಮ್ಮಾಯಿ ಹೇಳಿಕೆ ನೀಡಿದ್ಧಾರೆ.
ಮಂಗಳವಾರ ಸಂಸತ್ ಅಧಿವೇಶನ ಬಳಿಕ ವರಿಷ್ಠರು ಸಭೆ ಸೇರುತ್ತಾರೆ. ಸಭೆ ನಡೆಸಿ ವರಿಷ್ಠರು ಸಚಿವರ ಪಟ್ಟಿ ಫೈನಲ್ ಮಾಡುತ್ತಾರೆ. ಬಳಿಕ ಮಂಗಳವಾರ ಸಂಜೆ ವರಿಷ್ಠರು ಸಚಿವರ ಪಟ್ಟಿ ಪ್ರಕಟಿಸಲಿದ್ದು, ರಾಜ್ಯಾಧ್ಯಕ್ಷರ ಜೊತೆ ಚರ್ಚೆ ನಡೆಸಲಾಗುವುದು. ರಾಜ್ಯಾಧ್ಯಕ್ಷರ ಜತೆ ಚರ್ಚಿಸಿ ಪ್ರಮಾಣವಚನ ಸಮಯ ನಿಗದಿಪಡಿಸುತ್ತೇವೆ. ಸಚಿವರ ಪ್ರಮಾಣವಚನ ದಿನಾಂಕ, ಸಮಯ ಪ್ರಕಟಿಸುತ್ತೇವೆ. ಎಲ್ಲದಕ್ಕೂಮಂಗಳವಾರ ಸಂಜೆ ಬಳಿಕವೇ ಉತ್ತರ ಸಿಗಲಿದೆ ಎಂದು ಹೇಳಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಯ ಮೋತಿಲಾಲ್​ ನೆಹರು ಮಾರ್ಗ್​ನಲ್ಲಿರುವ ಜೆ.ಪಿ.ನಡ್ಡಾ ನಿವಾಸದಲ್ಲಿ ಭೇಟಿಯಾಗಿ ಸಂಪುಟ ರಚನೆಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ನಡ್ಡಾ ಅವರನ್ನು ಭೇಟಿಯಾಗಿದ್ದಾರೆ.

ಪ್ರಮುಖ ಸುದ್ದಿ :-   ಧರ್ಮಸ್ಥಳ ಪ್ರಕರಣದ ತನಿಖಾ ತಂಡದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ

ಪೊಲೀಸರು ಬಹಳ ತಾಳ್ಮೆಯಿಂದ ವರ್ತಿಸಿದ್ದಾರೆ..:
ಜೆ.ಸಿ.ನಗರ ಠಾಣೆ ಬಳಿ ಆಫ್ರಿಕಾ ಪ್ರಜೆಗಳ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಬೊಮ್ಮಾಯಿ ಪ್ರತಿಕ್ರಿಯಿಸಿ, ಕಳೆದ 2 ವರ್ಷಗಳಿಂದ ಡ್ರಗ್ಸ್​ ವಿಚಾರದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದೊಡ್ಡಮಟ್ಟದಲ್ಲಿ ಪೊಲೀಸರು ಡ್ರಗ್ಸ್​ ಜಪ್ತಿ ಮಾಡಿದ್ದರು. ಡ್ರಗ್ಸ್​ ಧಂದೆ ಪ್ರಕರಣದಲ್ಲಿ ಆಫ್ರಿಕಾ ಪ್ರಜೆ ಬಂಧಿಸಿದ್ದರು ಎಂದು ನವದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ.
ಪೊಲೀಸರ ವಶದಲ್ಲಿದ್ದ ವ್ಯಕ್ತಿ ಮೃತಪಟ್ಟ ಬಗ್ಗೆ ಸಿಐಡಿ ತನಿಖೆ ನಡೆಯಲಿದೆ. ವೀಸಾ ಅವಧಿ ಮುಗಿದಿದ್ದರೂ ಅಕ್ರಮವಾಗಿ ನೆಲೆಸಿದ್ದಾರೆ. ಕ್ವಿಟ್​ ಎನ್​ಡಿಪಿಎಸ್ ಕಾಯ್ದೆಯಡಿ ಹಲವರನ್ನು ಬಂಧಿಸಿದ್ದೆವು. ಠಾಣೆ ಎದುರು ಬಹಳ ಅಮಾನವೀಯವಾಗಿ ವರ್ತಿಸಿದ್ದಾರೆ. ಪೊಲೀಸರು ಬಹಳ ತಾಳ್ಮೆಯಿಂದ ವರ್ತಿಸಿದ್ದಾರೆ. ಅಮಾನವೀಯವಾಗಿ ವರ್ತಿಸಿದ್ದರಿಂದ ಲಘುಲಾಠಿ ಪ್ರಹಾರ ನಡೆಸಿ ಪರಿಸ್ಥಿತಿ ನಿಭಾಯಿಸಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement