ಇಂದು ಅಧಿಕೃತವಾಗಿ ಬೇರ್ಪಟ್ಟ ಬಿಲ್​ ಗೇಟ್ಸ್​-ಮೆಲಿಂಡಾ : 27 ವರ್ಷದ ದಾಂಪತ್ಯ ಜೀವನ ಅಂತ್ಯ

ವಾಷಿಂಗ್ಟನ್‌: ಜಗತ್ತಿನ ಶ್ರೀಮಂತ ಉದ್ಯಮಿ ಬಿಲ್ ಗೇಟ್ಸ್ ಮತ್ತು ಪತ್ನಿ ಮೆಲಿಂಡಾ ಫ್ರೆಂಚ್​ ಗೇಟ್ಸ್ ಈಗ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ.
ತಾವಿಬ್ಬರೂ ಬೇರೆಯಾಗುತ್ತಿರುವುದಾಗಿ ಮೂರು ತಿಂಗಳ ಹಿಂದೆ ಘೋಷಿಸಿದ್ದರು. ಇದೀಗ ಅಧಿಕೃತವಾಗಿ ವಿಚ್ಛೇದನ​ ಪಡೆಯವ ಮೂಲಕ, 27ವರ್ಷದ ದಾಂಪತ್ಯ ಮುರಿದುಕೊಂಡಿದ್ದಾರೆ.
ವಾಷಿಂಗ್ಟನ್​​ನ ಕಿಂಗ್​ಕೌಂಟಿ ಕೋರ್ಟ್​ನಲ್ಲಿ ಇಂದು (ಮಂಗಳವಾರ) ಈ ದಂಪತಿಯ ವಿಚ್ಛೇದನಕ್ಕೆ ಸಂಬಂಧಪಟ್ಟ ಅಂತಿಮ ವಿಚಾರಣೆ ಇತ್ತು. ಇವರಿಬ್ಬರೂ ಪರಸ್ಪರರಿಂದ ಯಾವುದೇ ಆರ್ಥಿಕ ಬೆಂಬಲ ಪಡೆಯುವುದಿಲ್ಲ ಮತ್ತು ತಮ್ಮ ಹೆಸರನ್ನೂ ಬದಲಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾಗಿ ಕೋರ್ಟ್ ತಿಳಿಸಿದೆ. ಅಲ್ಲದೆ, ವಿಚ್ಛೇದನ ನಿಯಮದಲ್ಲಿ ಉಲ್ಲೇಖ ಆಗಿರುವ ನಿಯಮದ ಅನುಸಾರ ನಿಮ್ಮ ಆಸ್ತಿಯನ್ನು ಬದಲಿಸಿಕೊಳ್ಳಿ ಎಂದು ಬಿಲ್​ ಗೇಟ್ಸ್​ ಮತ್ತು ಮೆಲಿಂಡಾ ಫ್ರೆಂಚ್​ಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.
ಅಮೆರಿಕದ​ ಕಾನೂನಿನ ಪ್ರಕಾರ, ಯಾವುದೇ ಜೋಡಿ ವಿಚ್ಛೇದನಕ್ಕೆ ಅರ್ಜಿ ಹಾಕಿದರೆ ಅವರು ಸುಮಾರು 90 ದಿನಗಳ ಕಾಲ ಕಾಯಬೇಕು. ಅಂದರೆ ಅಷ್ಟು ದಿನ ಜೋಡಿಗೆ ಕಾಲಾವಕಾಶ ನೀಡಲಾಗುತ್ತದೆ. ಅಂತೆಯೇ ಬಿಲ್​ಗೇಟ್ಸ್​ ಮತ್ತು ಮೆಲಿಂಡಾ ಕೂಡ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿ ಮೂರು ತಿಂಗಳಾಗಿತ್ತು. ಅದು ಮುಗಿದು ಇಂದು ಅಂತಿಮ ವಿಚಾರಣೆ ನಡೆದು, ಅವರು ಬೇರ್ಪಟ್ಟಿದ್ದಾರೆ.
ಮೇ ತಿಂಗಳಲ್ಲಿ ಇವರು ತಮ್ಮ ವಿಚ್ಛೇದನ ನಿರ್ಧಾರವನ್ನು ಬಹಿರಂಗಪಡಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಗೇಟ್ಸ್​ ಕಾಸ್ಕೇಡ್​ ಇನ್​ವೆಸ್ಟ್​ಮೆಂಟ್​ನಿಂದ 3 ಬಿಲಿಯನ್​ ಡಾಲರ್​ಗೂ ಹೆಚ್ಚು ಮೌಲ್ಯದ ಶೇರುಗಳನ್ನು ಮೆಲಿಂಡಾ ಗೇಟ್ಸ್​ ಹೆಸರಿಗೆ ವರ್ಗಾಯಿಸಲಾಗಿದೆ. ಇವರ ಖಾಸಗಿ ಆಸ್ತಿ ಹೇಗೆ ವಿಭಜನೆ ಆಗಲಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಪ್ರಮುಖ ಸುದ್ದಿ :-   ಸಿಂಗಾಪುರದಲ್ಲಿ ಮತ್ತೆ ವಿಜೃಂಭಿಸುತ್ತಿರುವ ಕೋವಿಡ್‌-19 ; 6 ದಿನಗಳಲ್ಲಿ 25,900 ಪ್ರಕರಣಗಳು ದಾಖಲು : ಮಾಸ್ಕ್‌ ಧರಿಸಲು ಶಿಫಾರಸು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement