2 ವರ್ಷದ 45 ಕೆಜಿ ತೂಕವಿದ್ದ ಹೆಣ್ಣು ಮಗುವಿಗೆ ದೆಹಲಿ ಆಸ್ಪತ್ರೆಯಲ್ಲಿ ಬ್ಯಾರಿಯಾಟ್ರಿಕ್​ ಶಸ್ತ್ರಚಿಕಿತ್ಸೆ..!

ನವದೆಹಲಿ: ಎರಡು ವರ್ಷಕ್ಕೇ ಸುಮಾರು 45 ಕೆಜಿ ತೂಕವಿದ್ದ ಹೆಣ್ಣುಮಗುವಿಗೆ ದೆಹಲಿ ಆಸ್ಪತ್ರೆಯೊಂದರಲ್ಲಿ ಯಶಸ್ವಿಯಾಗಿ ಬ್ಯಾರಿಯಾಟ್ರಿಕ್​ ಶಸ್ತ್ರಚಿಕಿತ್ಸೆ (Bariatric Surgery) ಮಾಡಲಾಗಿದೆ. ಇದು ತೀರ ಅಪರೂಪದ ಹಾಗೂ ಅಸಹಜ ಪ್ರಕರಣವಾಗಿದೆ. ಬಾಲಕಿಗೆ ಅತಿಯಾಗಿ ತೂಕವಿದ್ದ ಕಾರಣದಿಂದ ಅವಳಿಗೆ ವೀಲ್​ಚೇರ್​​ ಬಿಟ್ಟು ಕೆಳಗೆ ಇಳಿಯಲು ಸಾಧ್ಯವಿರಲಿಲ್ಲ. ಹೀಗಾಗಿ ಬಾಲಕಿಗೆ ದೆಹಲಿಯ ಮ್ಯಾಕ್ಸ್ ಸೂಪರ್​ಸ್ಪೆಶಾಲಿಟಿ ಆಸ್ಪತ್ರೆಯಲ್ಲಿ ಬ್ಯಾರಿಯಾಟ್ರಿಕ್​ ಶಸ್ತ್ರಚಿಕಿತ್ಸೆ ಮಾಡಿ, ಹೊಟ್ಟೆಯ ಭಾಗ ತೆಗೆಯಲಾಗಿದೆ ಮತ್ತು ಈಕೆ ಕಳೆದೊಂದು ದಶಕದಲ್ಲಿ ಬ್ಯಾರಿಯಾಟ್ರಿಕ್​ ಶಸ್ತ್ರಚಿಕಿತ್ಸೆಗೆ ಒಳಗಾದ ದೇಶದ ಅತ್ಯಂತ ಕಿರಿಯ ರೋಗಿಯಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ತೂಕ ಇಳಿಸಲು ಬ್ಯಾರಿಯಾಟ್ರಿಕ್​ ಸರ್ಜರಿ ಮಾಡಲಾಗುತ್ತದೆ. ಆದರೆ ಈ ಶಸ್ತ್ರಚಿಕಿತ್ಸೆ ಮಕ್ಕಳಲ್ಲಿ ತೀರ ಕಡಿಮೆ.ಇದರಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹಸಿವು ಕಡಿಮೆ ಆಗುವಂತೆ ಮಾಡುತ್ತಾರೆ. ಇದರಿಂದ ತೂಕ ನಷ್ಟ ಆಗುವ ಜೊತೆ ಆರೋಗ್ಯದಲ್ಲೂ ಸುಧಾರಣೆಯಾಗುತ್ತದೆ.
ಬಾಲಕಿ ಜನಿಸಿದಾಗ 2.5 ಕೆಜಿ ಸಾಮಾನ್ಯ ತೂಕ ಹೊಂದಿದ್ದಳು. ಆದರೆ ಕೆಲವೇ ದಿನಗಳಲ್ಲೇ ವಿಪರೀತ ತೂಕ ಹೆಚ್ಚಾಯಿತು. ಆರು ತಿಂಗಳಾಗುವಷ್ಟರಲ್ಲಿ 14 ಕೆಜಿಯಾಗಿದ್ದಳು. 2 ವರ್ಷ ತುಂಬುವ ಹೊತ್ತಿಗೆ ಬರೋಬ್ಬರಿ 45 ಕೆಜಿ ತೂಕಕ್ಕೆ ಏರಿದ್ದಳು. ಆದರೆ ಆಕೆ ಸಹೋದರ 8 ವರ್ಷ. ಆತನ ತೂಕ ಸಹಜವಾಗಿದೆ ಎಂದು ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಮನ್​ಪ್ರೀತ್​ ಸೇಥಿ ಹೇಳಿದ್ದಾರೆ.
ಮಗುವಿನಲ್ಲಿ ಬೇರೆ ಕೆಲವು ಅಸಹಜತೆಗಳೂ ಇದ್ದವು. ಅದನ್ನೆಲ್ಲವನ್ನೂ ಮೀರಿ ಸರ್ಜರಿ ಮಾಡಲಾಗಿದೆ. ಆದರೆ ಬಾಲಕಿಗೆ ವಿಶೇಷ ವಿಶೇಷ ಡಯಟ್​ ಕಟ್ಟುನಿಟ್ಟಾಗಿ ಮಾಡಿಸಬೇಕು. ಅವಳಿಗೆ ಕೊಡುವ ಪೋಷಕಾಂಶಗಳ ಪ್ರಮಾಣದ ಗಮನ ಇಡಬೇಕು. ಮುಂದಿನ ವರ್ಷದ ಹೊತ್ತಿಗೆ ಅವಳ ತೂಕ ಕಡಿಮೆಯಾಗುತ್ತದೆ ಮತ್ತು ಅಲ್ಲಿಂದ ಆಕೆ ಸಹಜವಾಗಿ ಬೆಳೆಯುತ್ತಾಳೆಂದು ನಿರೀಕ್ಷೆ ಹೊಂದಲಾಗಿದೆ. ಆದರೆ ವೈದ್ಯಕೀಯ ತಂಡ ಕಾಲಕಾಲಕ್ಕೆ ತಪಾಸಣೆ ಆಗಬೇಕಾಗುತ್ತದೆ. ದೇಹದಲ್ಲಿ ಶಕ್ತಿಯೂ ಬರಬೇಕಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪುತ್ತೂರು | ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ ; ಬಿಜೆಪಿ ಮುಖಂಡನ ಪುತ್ರ ಅರೆಸ್ಟ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement