ಪ್ರವಾಹ-ಕೋವಿಡ್​ ನಿರ್ವಹಣೆಗೆ ನಾಳೆಯಿಂದಲೇ ಉಸ್ತುವಾರಿ ಜಿಲ್ಲೆಗಳಿಗೆ ಸಚಿವರು; ಜಿಲ್ಲೆಗಳ ಹಂಚಿಕೆ ಮಾಡಿ ಆದೇಶ

ಬೆಂಗಳೂರು: ಕಳೆದ ಹತ್ತು ದಿನಗಳಿಂದ ರಾಜ್ಯದಲ್ಲಿ ನೆರೆ ಹಾವಳಿಯಿಂದ ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಅನೇಕ ಜಿಲ್ಲೆಗಳು ತತ್ತರಿಸಿದೆ. ಈ ನಡುವೆ ಕೋವಿಡ್​ ಸೋಂಕು ಕೂಡ ಹೆಚ್ಚಿರುವುದು ಸಾಕಷ್ಟು ಆತಂಕ ಮೂಡಿಸಿ ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ನೂತನ ಸಚಿವರಿಗೆ ಮೊದಲ ದಿನವೇ ಖಡಕ್​ ಆದೇಶ ನೀಡಿದ್ದು,, ಪ್ರತಿ ಜಿಲ್ಲೆಗಳಿಗೂ ತೆರಳಿ ಅಲ್ಲಿನ ಸ್ಥಿತಿಗತಿ ಕುರಿತು ಅವಲೋಕಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಎಲ್ಲ 29 ಸಚಿವರಿಗೆ ಜಿಲ್ಲೆಗಳತ್ತ ಮುಖ ಮಾಡುವಂತೆ ಆದೇಶ ನೀಡಲಾಗಿದೆ. ಈ ಸಂಬಂದ ಸಚಿವರಿಗೆ ಜಿಲ್ಲೆಗಳನ್ನು ಕೂಡ ತಾತ್ಕಲಿಕವಾಗಿ ಹಂಚಿಕೆ ಮಾಡಲಾಗಿದೆ. ಸಚಿವರು ಹಂಚಿಕೆಯಾದ ಜಿಲ್ಲೆಗಳಿಗೆ ತೆರಳಿ ಕೋವಿಡ್​ ನಿರ್ವಹಣೆ ಮತ್ತು ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ನಿರ್ವಹಿಸಲು ಸಚಿವರಿಗೆ ಸೂಚನೆ ನೀಡಲಾಗಿದ್ದು, ಮುಂದಿನ ಆದೇಶದವರೆಗೆ ಉಸ್ತುವಾರಿ ಜಿಲ್ಲೆಗಳ ಕಾರ್ಯ ನಿರ್ವಹಣೆ ಮಾಡಬೇಕು ಎಂದು ತಿಳಿಸಲಾಗಿದೆ.

ಸಚಿವರಿಗೆ ಹಂಚಿಕೆಯಾದ ಜಿಲ್ಲೆಗಳ ವಿವರ..:
ಗೋವಿಂದ ಕಾರಜೋಳ -ಬೆಳಗಾವಿ, ಕೆ. ಎಸ್​. ಈಶ್ವರಪ್ಪ – ಶಿವಮೊಗ್ಗ, ಹೆಬ್ಬಾರ್​ ಶಿವರಾಮ್​- ಉತ್ತರ ಕನ್ನಡ, ಆರ್​ ಅಶೋಕ್​ -ಬೆಂಗಳೂರು ನಗರ, ಬಿ ಶ್ರೀರಾಮುಲು- ಚಿತ್ರದುರ್ಗ, ವಿ ಸೋಮಣ್ಣ- ರಾಯಚೂರು, ಉಮೇಶ್​ ವಿ ಕತ್ತಿ- ಬಾಗಲಕೋಟೆ, ಎಸ್​ ಅಂಗಾರ- ದಕ್ಷಿಣ ಕನ್ನಡ, ಜೆ.ಸಿ. ಮಾಧುಸ್ವಾಮಿ- ತುಮಕೂರು, ಅರಗ ಜ್ಞಾನೇಂದ್ರ- ಚಿಕ್ಕಮಗಳೂರು, ಡಾ.ಸಿ ಎನ್​ ಅಶ್ವತ್ಥ್​ ನಾರಾಯಣ- ರಾಮನಗರ ಸಿ. ಸಿ. ಪಾಟೀಲ- ಗದಗ, ಆನಂದ್​ ಸಿಂಗ್​ – ಬಳ್ಳಾರಿ ಮತ್ತು ವಿಜಯ ನಗರ, ಕೋಟ ಶ್ರೀನಿವಾಸ ಪೂಜಾರಿ – ಕೊಡಗು, ಪ್ರಭು ಚವ್ಹಾಣ್​- ಬೀದರ್​, ಮುರುಗೇಶ್​ ನಿರಾಣಿ -ಕಲಬುರಗಿ, ಎಸ್​ ಟಿ ಸೋಮಶೇಖರ್​ -ಮೈಸೂರು, ಬಿ ಸಿ ಪಾಟೀಲ್​​- ಹಾವೇರಿ, ಬೈರತಿ ಬಸವರಾಜ್​- ದಾವಣಗೆರೆ, ಡಾ ಕೆ ಸುಧಾಕರ್​- ಚಿಕ್ಕಬಳ್ಳಾಪುರ, ಕೆ ಗೋಪಾಲಯ್ಯ- ಹಾಸನ, ಶಶಿಕಲಾ ಜೊಲ್ಲೆ – ವಿಜಯಪುರ, ಎಂಟಿಬಿ ನಾಗರಾಜ- ಬೆಂಗಳೂರು ಗ್ರಾಮಾಂತರ, ಕೆ ಸಿ ನಾರಾಯಣ ಗೌಡ- ಮಂಡ್ಯ, ಬಿ ಸಿ ನಾಗೇಶ್​- ಯಾದಗಿರಿ, ಸುನೀಲ್​ ಕುಮಾರ್​- ಉಡುಪಿ, ಹಾಲಪ್ಪ ಆಚಾರ್​ – ಕೊಪ್ಪಳ, ಶಂಕರ್​ ಪಾಟೀಲ್​ ಮುನೇನಕೊಪ್ಪ- ಧಾರವಾಡ, ಮುನಿರತ್ನ – ಕೋಲಾರ
ಸಚಿವರು ನಾಳೆಯಿಂದಲೇ (ಗುರುವಾರದಿಂದ) ಈ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಅಧಿಕಾರಿಗಳೊಂದಿಗೆ ಪರಿಸ್ಥಿತಿಯ ಕುರಿತು ಅವಲೋಕಿಸಬೇಕಿದೆ. ಅಲ್ಲದೇ ನೆರೆ ಪೀಡಿತ ಪ್ರದೇಶಗಳಲ್ಲಿ ಆದ ಹಾನಿ ಸಂಬಂಧ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ. ಈ ವರದಿ ಸಲ್ಲಿಕೆ ಬಳಿಕ ಮುಂದಿನ ಕ್ಯಾಬಿನೆಟ್​ ಸಭೆಯಲ್ಲಿ ಪರಿಹಾರ ಬಿಡುಗಡೆ ಕುರಿತು ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಧಾನಸೌಧ ಸ್ಫೋಟದ ಎಐ ವಿಡಿಯೊ ಸೃಷ್ಟಿಸಿ ಹಂಚಿಕೊಂಡ ಆರೋಪ : ಕಿಡಿಗೇಡಿ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement