ಬೊಮ್ಮಾಯಿ ಸರ್ಕಾರದ ನೂತನ ಸಚಿವರಾಗಿ 29 ಶಾಸಕರು ಪ್ರಮಾಣ ವಚನ ಸ್ವೀಕಾರ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟಕ್ಕೆ ನೂತನ ಸಾರಥಿಗಳಾಗಿ ಇಂದು (ಬುಧವಾರ) 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ಮಧ್ಯಾಹ್ನ 2.15ಕ್ಕೆ ರಾಜಭವನದ ಗಾಜಿನ ಅರಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ, 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಒಂದು ಬಾರಿಗೆ ಐವರು ಶಾಸಕರಿಗೆ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸುವ ಮೂಲಕ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟಕ್ಕೆ 29 ಸಾರಥಿಗಳು ಸೇರ್ಪಡೆಗೊಂಡಿದ್ದಾರೆ. ಮೊದಲಿಗೆ ಹಿರಯ ಸಚಿವರಾದ ಹಗೋವಿಂದ ಕಾರಜೋಳ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರದಲ್ಲಿ ಕೆ,ಎಸ್‌.ಈಶ್ವರಪ್ಪ ಹೀಗೆ 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬುತೇಕ ಎಲ್ಲರೂ ದೇವರ ಹೆರ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಕೆಲವರು ದೇವರ ಜೊತೆಗೆ ರೈತರು ಹಾಗೂ ಕ್ಷೇತ್ರದ ಜನತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದವರ ಪಟ್ಟಿ
ಗೋವಿಂದ ಕಾರಜೋಳ – ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ಕೆ.ಎಸ್.ಈಶ್ವರಪ್ಪ – ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ಆರ್.ಅಶೋಕ್ – ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
ಬಿ.ಶ್ರೀರಾಮುಲು – ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ವಿ.ಸೋಮಣ್ಣ – ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ಉಮೇಶ ಕತ್ತಿ – ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ಎಸ್ ಅಂಗಾರ – ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ಡಾ.ಸಿ.ಎನ್.ಅಶ್ವತ್ಥನಾರಾಯಣ – ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
ಜೆಸಿ ಮಾಧುಸ್ವಾಮಿ – ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ಅರಗ ಜ್ಞಾನೇಂದ್ರ – ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ಸಿ.ಸಿ. ಪಾಟೀಲ – ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ
ಆನಂದ್ ಸಿಂಗ್ – ವಿಜಯನಗರ ಹಂಪಿ ವಿರೂಪಾಕ್ಷ ಮತ್ತು ತಾಯಿ ಭುವನೇಶ್ವರಿ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ಕೋಟಾ ಶ್ರೀನಿವಾಸ ಪೂಜಾರಿ – ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ಪ್ರಭು ಚೌಹಾಣ್ – ದೇವರು, ಗೋಮಾತೆ, ಸಂತ ಸೇವಾಲಾಲ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ಮರುಗೇಶ್ ನಿರಾಣಿ – ದೇವರ ಮತ್ತು ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ಶಿವರಾಂ ಹೆಬ್ಬಾರ್ – ದೇವರ ಹೆಸರಿನಲ್ಲಿ ಹಾಗೂ ಕ್ಷೇತ್ರದ ಜನರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ಎಸ್.ಟಿ.ಸೋಮಶೇಖರ್ – ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ
ಬಿ.ಸಿ ಪಾಟೀಲ್ – ರೈತರ ಹೆಸರಿನಲ್ಲಿ, ಜಗಜ್ಯೋತಿ ಬಸವೇಶ್ವರನ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ
ಬೈರತಿ ಬಸವರಾಜು – ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ
ಡಾ.ಕೆ.ಸುಧಾಕರ್ – ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ
ಕೆ.ಗೋಪಾಲಯ್ಯ – ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ
ಶಶಿಕಲಾ ಜೊಲ್ಲೆ – ದೇವರ ಮತ್ತು ತನ್ನ ಕ್ಷೇತ್ರದ ಜನರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕಾರ
ಎಂಟಿಬಿ ನಾಗರಾಜು – ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ
ಕೆ.ಸಿ. ನಾರಾಯಣ್ ಗೌಡ – ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ
ಬಿ.ಸಿ. ನಾಗೇಶ – ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ
ಸುನೀಲ್ ಕುಮಾರ್ – ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ
ಹಾಲಪ್ಪ ಆಚಾರ್ – ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ
ಶಂಕರ್ ಪಾಟೀಲ್ ಮುನೇನಕೊಪ್ಪ – ದೇವರ ಹೆ ಹಾಗೂ ರೈತನ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ
ನಿ.ಮುನಿರತ್ನ – ದೇವರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕಾರ
ಪ್ರಮಾಣವಚನ ಸ್ವೀಕರಿಸಲು ಲಂಬಾಣಿ ಉಡುಪು ಧರಿಸಿ ಆಗಮಿಸಿದ್ದ ಪ್ರಭುಚೌವ್ಹಾಣ್​ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ರಾಜಭವನ ಮುಂದೆ ಡಾ.ಕೆ. ಸುಧಾಕರ್ ಫೋಟೋ ಹಿಡಿದು ಅಭಿಮಾನಿಗಳು ಜೈಕಾರ ಹಾಕುತ್ತಿದ್ದ ದೃಶ್ಯ ಕಂಡು ಬಂತು. ಕಾರ್ಯಕ್ರಮಕ್ಕೆ ಶಶಿಕಲಾ ಜೊಲ್ಲೆ 25 ನಿಮಿಷ ತಡವಾಗಿ ಆಗಮಿಸಿದರು. ರಾಜಭವನದ ಹೊರಗಡೆ ಎಲ್​ಇಡಿ ಪರದೆ ಅಳವಡಿಸಿ, ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಯಿತು.

ಪ್ರಮುಖ ಸುದ್ದಿ :-   ಕರ್ನಾಟಕದ ಈ ಜಿಲ್ಲೆಗಳಲ್ಲಿ 3-4 ದಿನ ಬಿಸಿಗಾಳಿ : ಹವಾಮಾನ ಇಲಾಖೆ ಎಚ್ಚರಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement