ಬೆಂಗಳೂರು: ಕಳೆದ ಹತ್ತು ದಿನಗಳಿಂದ ರಾಜ್ಯದಲ್ಲಿ ನೆರೆ ಹಾವಳಿಯಿಂದ ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಅನೇಕ ಜಿಲ್ಲೆಗಳು ತತ್ತರಿಸಿದೆ. ಈ ನಡುವೆ ಕೋವಿಡ್ ಸೋಂಕು ಕೂಡ ಹೆಚ್ಚಿರುವುದು ಸಾಕಷ್ಟು ಆತಂಕ ಮೂಡಿಸಿ ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೂತನ ಸಚಿವರಿಗೆ ಮೊದಲ ದಿನವೇ ಖಡಕ್ ಆದೇಶ ನೀಡಿದ್ದು,, ಪ್ರತಿ ಜಿಲ್ಲೆಗಳಿಗೂ ತೆರಳಿ ಅಲ್ಲಿನ ಸ್ಥಿತಿಗತಿ ಕುರಿತು ಅವಲೋಕಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಎಲ್ಲ 29 ಸಚಿವರಿಗೆ ಜಿಲ್ಲೆಗಳತ್ತ ಮುಖ ಮಾಡುವಂತೆ ಆದೇಶ ನೀಡಲಾಗಿದೆ. ಈ ಸಂಬಂದ ಸಚಿವರಿಗೆ ಜಿಲ್ಲೆಗಳನ್ನು ಕೂಡ ತಾತ್ಕಲಿಕವಾಗಿ ಹಂಚಿಕೆ ಮಾಡಲಾಗಿದೆ. ಸಚಿವರು ಹಂಚಿಕೆಯಾದ ಜಿಲ್ಲೆಗಳಿಗೆ ತೆರಳಿ ಕೋವಿಡ್ ನಿರ್ವಹಣೆ ಮತ್ತು ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ನಿರ್ವಹಿಸಲು ಸಚಿವರಿಗೆ ಸೂಚನೆ ನೀಡಲಾಗಿದ್ದು, ಮುಂದಿನ ಆದೇಶದವರೆಗೆ ಉಸ್ತುವಾರಿ ಜಿಲ್ಲೆಗಳ ಕಾರ್ಯ ನಿರ್ವಹಣೆ ಮಾಡಬೇಕು ಎಂದು ತಿಳಿಸಲಾಗಿದೆ.
ಸಚಿವರಿಗೆ ಹಂಚಿಕೆಯಾದ ಜಿಲ್ಲೆಗಳ ವಿವರ..:
ಗೋವಿಂದ ಕಾರಜೋಳ -ಬೆಳಗಾವಿ, ಕೆ. ಎಸ್. ಈಶ್ವರಪ್ಪ – ಶಿವಮೊಗ್ಗ, ಹೆಬ್ಬಾರ್ ಶಿವರಾಮ್- ಉತ್ತರ ಕನ್ನಡ, ಆರ್ ಅಶೋಕ್ -ಬೆಂಗಳೂರು ನಗರ, ಬಿ ಶ್ರೀರಾಮುಲು- ಚಿತ್ರದುರ್ಗ, ವಿ ಸೋಮಣ್ಣ- ರಾಯಚೂರು, ಉಮೇಶ್ ವಿ ಕತ್ತಿ- ಬಾಗಲಕೋಟೆ, ಎಸ್ ಅಂಗಾರ- ದಕ್ಷಿಣ ಕನ್ನಡ, ಜೆ.ಸಿ. ಮಾಧುಸ್ವಾಮಿ- ತುಮಕೂರು, ಅರಗ ಜ್ಞಾನೇಂದ್ರ- ಚಿಕ್ಕಮಗಳೂರು, ಡಾ.ಸಿ ಎನ್ ಅಶ್ವತ್ಥ್ ನಾರಾಯಣ- ರಾಮನಗರ ಸಿ. ಸಿ. ಪಾಟೀಲ- ಗದಗ, ಆನಂದ್ ಸಿಂಗ್ – ಬಳ್ಳಾರಿ ಮತ್ತು ವಿಜಯ ನಗರ, ಕೋಟ ಶ್ರೀನಿವಾಸ ಪೂಜಾರಿ – ಕೊಡಗು, ಪ್ರಭು ಚವ್ಹಾಣ್- ಬೀದರ್, ಮುರುಗೇಶ್ ನಿರಾಣಿ -ಕಲಬುರಗಿ, ಎಸ್ ಟಿ ಸೋಮಶೇಖರ್ -ಮೈಸೂರು, ಬಿ ಸಿ ಪಾಟೀಲ್- ಹಾವೇರಿ, ಬೈರತಿ ಬಸವರಾಜ್- ದಾವಣಗೆರೆ, ಡಾ ಕೆ ಸುಧಾಕರ್- ಚಿಕ್ಕಬಳ್ಳಾಪುರ, ಕೆ ಗೋಪಾಲಯ್ಯ- ಹಾಸನ, ಶಶಿಕಲಾ ಜೊಲ್ಲೆ – ವಿಜಯಪುರ, ಎಂಟಿಬಿ ನಾಗರಾಜ- ಬೆಂಗಳೂರು ಗ್ರಾಮಾಂತರ, ಕೆ ಸಿ ನಾರಾಯಣ ಗೌಡ- ಮಂಡ್ಯ, ಬಿ ಸಿ ನಾಗೇಶ್- ಯಾದಗಿರಿ, ಸುನೀಲ್ ಕುಮಾರ್- ಉಡುಪಿ, ಹಾಲಪ್ಪ ಆಚಾರ್ – ಕೊಪ್ಪಳ, ಶಂಕರ್ ಪಾಟೀಲ್ ಮುನೇನಕೊಪ್ಪ- ಧಾರವಾಡ, ಮುನಿರತ್ನ – ಕೋಲಾರ
ಸಚಿವರು ನಾಳೆಯಿಂದಲೇ (ಗುರುವಾರದಿಂದ) ಈ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಅಧಿಕಾರಿಗಳೊಂದಿಗೆ ಪರಿಸ್ಥಿತಿಯ ಕುರಿತು ಅವಲೋಕಿಸಬೇಕಿದೆ. ಅಲ್ಲದೇ ನೆರೆ ಪೀಡಿತ ಪ್ರದೇಶಗಳಲ್ಲಿ ಆದ ಹಾನಿ ಸಂಬಂಧ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕಿದೆ. ಈ ವರದಿ ಸಲ್ಲಿಕೆ ಬಳಿಕ ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಪರಿಹಾರ ಬಿಡುಗಡೆ ಕುರಿತು ನಿರ್ಧಾರ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ