ಫ್ಲಿಪ್‌ಕಾರ್ಟಿಗೆ 10,600 ಕೋಟಿ ರೂ. ಫೆಮಾ ಕಾಂಟ್ರಾವೆನ್ಶನ್ ನೋಟಿಸ್ ನೀಡಿದ ಇಡಿ..!

ನವದೆಹಲಿ: ವಿದೇಶಿ ವಿನಿಯಮ ನಿಯಮ (FEMA) ಉಲ್ಲಂಘನೆ ಆರೋಪದಡಿ ವಿಶ್ವದ ಅತಿದೊಡ್ಡ ಆನ್ ಲೈನ್ ಮಾರಾಟ ಸಂಸ್ಥೆ ಫ್ಲಿಪ್ ಕಾರ್ಟ್ ಗೆ ಇಡಿ ನೊಟೀಸ್ ಜಾರಿ ಮಾಡಿದೆ. ಮಾತ್ರವಲ್ಲ 10,600-ಕೋಟಿ ರೂ.ಗಳ ದಂಡ ವಿಧಿಸುವ ಎಚ್ಚರಿಕೆ ನೀಡಿದೆ.
ಫ್ಲಿಪ್ ಕಾರ್ಟ್ ನ ಸಂಸ್ಥಾಪಕ ಹಾಗೂ ಇತರೇ 9 ಜನರಿಗೆ ಇಡಿ ನೊಟೀಸ್ ಜಾರಿ ಮಾಡಿದ್ದು, ವಿದೇಶಿ ಹೂಡಿಕೆ ಕಾನೂನು ಉಲ್ಲಂಘಿಸಿದ ನಿಮ್ಮ ಮೇಲೆ 110,600-ಕೋಟಿ ರೂ.ಗಳ ದಂಡವನ್ನು ಯಾಕೆ ವಿಧಿಸಬಾರದು ಎಂದು ಪ್ರಶ್ನಿಸಿದೆ.
2009 ರಿಂದ 2015 ರವರೆಗಿನ ಅವಧಿಯಲ್ಲಿ ವಿದೇಶಿ ಹೂಡಿಕೆಗಳನ್ನು ಸೆಳೆಯುವ ವೇಳೆ ಫ್ಲಿಪ್ ಕಾರ್ಟ್ ಫೇಮಾ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಇಡಿ ಆರೋಪಿಸಿದೆ. ಫ್ಲಿಪ್ ಕಾರ್ಟ್ ತನಗೆ ಹಾಗೂ ತನಗೆ ಸಂಬಂಧಿಸಿದ ಡಬ್ಲೂ ಎಸ್ ರಿಟೇಲ್ ವಿದೇಶ ಬಂಡವಾಳವನ್ನು ಸೆಳೆದುಕೊಂಡು ಬಳಿಕ ತನ್ನ ವೆಬ್ ಸೈಟ್ ನಲ್ಲಿ ವಸ್ತುಗಳನ್ನು ಮಾರಾಟ ಮಾಡಿದೆ. ಇದು ಭಾರತದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಇಡಿ ಹೇಳಿದೆ.
ಫೆಮಾ ಅಡಿಯಲ್ಲಿ ಪ್ರಕ್ರಿಯೆಗಳು ನಾಗರಿಕ ಸ್ವರೂಪದ್ದಾಗಿರುತ್ತವೆ ಮತ್ತು ಅಂತಿಮ ದಂಡ, ತೀರ್ಪಿನ ನಂತರ, ಕಾನೂನಿನ ಅಡಿಯಲ್ಲಿ ಉಲ್ಲಂಘಿಸಿದ ಮೊತ್ತಕ್ಕಿಂತ ಕನಿಷ್ಠ ಮೂರು ಪಟ್ಟು ಹೆಚ್ಚಾಗಬಹುದು
ಫ್ಲಿಪ್ ಕಾರ್ಟ್ ಸಂಸ್ಥಾಪಕ ಸಚಿನ್ ಬನ್ಸಾಲ್, ಬಿನ್ನಿ ಬನ್ಸಾಲ್ ಹಾಗೂ ಇತರ 9 ಜನ ಹೂಡಿಕೆದಾರರ ಮೇಲೆ ಕ್ರಮಕೈಗೊಳ್ಳುವುದಾಗಿ ಇಡಿ ಹೇಳಿದೆ. ವಿದೇಶಿ ನೇರ ಹೂಡಿಕೆ ನಿಯಮವನ್ನು ಫ್ಲಿಪ್ ಕಾರ್ಟ್ ಪಾಲಿಸಿದೆ. ಇಡಿ ಅಧಿಕಾರಿಗಳಿಗೆ ಅಗತ್ಯ ಮಾಹಿತಿ ಸಹಕಾರ ನೀಡುತ್ತೇವೆ ಎಂದು ಫ್ಲಿಪ್ ಕಾರ್ಟ್ ಹೇಳಿದೆ.
ಫ್ಲಿಪ್‌ಕಾರ್ಟ್ ಎಫ್‌ಡಿಐ ನಿಯಮಗಳು ಸೇರಿದಂತೆ ಭಾರತೀಯ ಕಾನೂನುಗಳು ಮತ್ತು ನಿಬಂಧನೆಗಳಿಗೆ ಅನುಸಾರವಾಗಿದೆ. ಅವರ ಸೂಚನೆ ಪ್ರಕಾರ 2009-2015ರ ಅವಧಿಗೆ ಸಂಬಂಧಿಸಿದ ಈ ಸಮಸ್ಯೆಯನ್ನು ಅವರು ನೋಡುತ್ತಿರುವಂತೆ ನಾವು ಅಧಿಕಾರಿಗಳಿಗೆ ಸಹಕಾರ ನೀಡುತ್ತೇವೆ” ಎಂದು ಇ-ಕಾಮರ್ಸ್ ಪ್ರಮುಖರ ವಕ್ತಾರರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ ಠಾಕ್ರೆ ಸಂಕಲ್ಪ, ಉದ್ಧವರಿಂದ ದೊಡ್ಡ ಸುಳಿವು : 20 ವರ್ಷಗಳ ನಂತರ ಠಾಕ್ರೆ ಸಹೋದರರ ಪುನರ್ಮಿಲನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement