ಕುಮಟಾ ಬಾಳಿಗಾ ವಾಣಿಜ್ಯ ಕಾಲೇಜಿನಲ್ಲಿ ಯಶಸ್ವಿಯಾದ ಕೋವಿಡ್ ಲಸಿಕಾ ಅಭಿಯಾನ

ಕುಮಟಾ; ಉತ್ತರ ಕನ್ನಡ ಜಿಲ್ಲೆ  ಕುಮಟಾದ ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಗುರುವಾರ ಕಾಲೇಜು ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಒಟ್ಟು ೨೦೬ ಜನರಿಗೆ ಎರಡನೆ ಡೋಸ್ ಕೋವಿಡ್ ಲಸಿಕೆ ನೀಡಲಾಯಿತು.
ಕಾಲೇಜಿನ ೧೮ ವರ್ಷ ಮೇಲ್ಪಟ್ಟ ಪದವಿ, ಬಿ.ಬಿ.ಎ ಮತ್ತು ಎಂ.ಕಾಮ್‌ ವಿದ್ಯಾರ್ಥಿಗಳು ಲಸಿಕಾ ಅಭಿಯಾನದಲ್ಲಿ ಭಾಗವಹಿಸಿದ್ದರು.
ಪದವಿ ಪ್ರಾಚಾರ್ಯ ಡಾ.ಎಸ್.ವಿ.ಶೇಣ್ವಿ ಮಾತನಾಡಿ, ಲಸಿಕೆ ಪಡೆದುಕೊಳ್ಳುವುದರಿಂದ ವಿದ್ಯಾರ್ಥಿಗಳು ಕೋವಿಡ್ ಸಾಂಕ್ರಾಮಿಕ ರೋಗದ ಪಿಡುಗಿನಿಂದ ಹೇಗೆ ಪಾರಾಗಬಹುದು ಎಂದು ಅನೇಕ ಉದಾಹರಣೆಯೊಂದಿಗೆ ಮನವರಿಕೆ ಮಾಡಿಕೊಟ್ಟರು.
ಅಭಿಯಾನದಲ್ಲಿ ಭಾಗವಹಿಸಿದ್ದ ಸರಕಾರಿ ಆಸ್ಪತ್ರೆಯ ಆರ್.ಜಿ.ನಾಯ್ಕ ಲಸಿಕೆಯ ಅಗತ್ಯತೆಯ ಕುರಿತು ಮಾಹಿತಿ ನೀಡಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ಜನರನ್ನು ಕಾಪಾಡಲು ಸರಕಾರವು ಲಸಿಕಾ ಅಭಿಯಾನವನ್ನು ಆರಂಭಿಸಿದೆ. ಇದರ ಪ್ರಯೋಜನವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳ ಬೇಕು.ಜನರ ಒಳಿತಿಗಾಗಿಯೆ ಈ ಅಭಿಯಾನವನ್ನು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಆಸ್ಪತ್ರೆಯ ಹೊರತಾದ ಪ್ರದೇಶದಲ್ಲಿಯೂ ಸರಕಾರ ಆರಂಭಿಸಿದೆ.ವಿದ್ಯಾರ್ಥಿಗಳು ಕೊರೋನಾ ತಡೆಗಟ್ಟುವ ಮಾರ್ಗಸೂಚಿಯನ್ನು ಕಟ್ಟು ನಿಟ್ಟಾಗಿ ಪಾಲಿಸ ಬೇಕು ಎಂದು ತಿಳಿಸಿದರು.
ಕೋವಿಡ್ ಲಸಿಕಾ ಅಭಿಯಾನದ ಯಶಸ್ಸಿನಲ್ಲಿ ಪ್ರಾಚಾರ್ಯ ಪ್ರೊ.ಎನ್.ಜಿ.ಹೆಗಡೆ, ಡಾ.ಅರವಿಂದ ನಾಯಕ, ಪ್ರೊ.ಶಿವಾನಂದ ಬುಳ್ಳ, ಪ್ರೊ.ಸುಷ್ಮಾ ಕಾಮತ್ ಮತ್ತಿತರರು ಭಾಗವಹಿಸಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement