ಲೋಕಸಭೆಯಲ್ಲಿ ಆದಾಯ ತೆರಿಗೆ ಕಾಯ್ದೆ ತಿದ್ದುಪಡಿ ಮಸೂದೆ ಮಂಡನೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಲೋಕಸಭೆಯಲ್ಲಿ ಆದಾಯ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ, 2021 ಮಂಡಿಸಿದರು.
ಇದು ಹಿಂದಿನ ಆದಾಯ ತೆರಿಗೆ ಕಾನೂನನ್ನು ರದ್ದುಗೊಳಿಸಲು ನೆರವಾಗುತ್ತದೆ. ಇದರೊಂದಿಗೆ, ಈ ಮಸೂದೆ ಜಾಗತಿಕ ಕಾರ್ಪೊರೇಟ್ ದೈತ್ಯ ಕಂಪನಿಗಳಾದ ಕೆರ್ನ್ ಎನರ್ಜಿ ಮತ್ತು ವೊಡಾಫೋನ್ ಜೊತೆಗಿನ ವಿವಾದಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.
ಈ ಮಸೂದೆ ಆದಾಯ ತೆರಿಗೆ ಕಾಯ್ದೆ, 1961 ಕ್ಕೆ ತಿದ್ದುಪಡಿ ತರಲಿದೆ. ಇದರ ಪ್ರಕಾರ, 2021ರ ಮೇ 28ರಕ್ಕೂ ಮೊದಲು ನಡೆಸಿದ ವಹಿವಾಟುಗಳಿಗೆ ಅದರ ಮೇಲೆ ಭವಿಷ್ಯದಲ್ಲಿ ಯಾವುದೇ ತೆರಿಗೆ ಬೇಡಿಕೆ ಹೆಚ್ಚಿಸಲಾಗುವುದಿಲ್ಲ. (ಅಂದರೆ, ಹಣಕಾಸು ಮಸೂದೆ, 2012 ರ ಅಧ್ಯಕ್ಷರ ಒಪ್ಪಿಗೆ ಪಡೆದ ದಿನಾಂಕ). ಆದರೆ, ಈ ಮಸೂದೆಗೆ ವಿಪಕ್ಷಗಳ ಭಾರಿ ವಿರೋಧ ವ್ಯಕ್ತವಾಯಿತು. ಕಾಂಗ್ರೆಸ್ ಪಕ್ಷದ ಅಧೀರ್ ರಂಜನ್ ಚೌಧರಿ, ಈ ಸದನವು ಪ್ರತಿ ಮಸೂದೆಯನ್ನು ಕೇವಲ ಏಳು ನಿಮಿಷಗಳ ಅವಧಿಯಲ್ಲಿ ಅಂಗೀಕರಿಸುವ ಮೂಲಕ ದಾಖಲೆ ನಿರ್ಮಿಸಿದೆ. ಇದು ಸಂಸದೀಯ ಪ್ರಜಾಪ್ರಭುತ್ವದ ಮೇಲೆ ಅತಿರೇಕದ ದಾಳಿ ಎಂದು ಆರೋಪಿಸಿದರು.
2012 ರ ಮೇ 28 ರ ಮೊದಲು ಮಾಡಿದ ಭಾರತೀಯ ಸ್ವತ್ತುಗಳನ್ನು ಪರೋಕ್ಷವಾಗಿ ವರ್ಗಾಯಿಸುವ ಬೇಡಿಕೆಯನ್ನು ಹಿಂತೆಗೆದುಕೊಳ್ಳುವುದು ಅಥವಾ ಬಾಕಿ ಇರುವ ವ್ಯಾಜ್ಯಗಳನ್ನು ಹಿಂಪಡೆಯಲು ಮತ್ತು ಒದಗಿಸುವಿಕೆ ಮುಂತಾದ ಷರತ್ತುಗಳನ್ನು ಈ ಮಸೂದೆ ಒಳಗೊಂಡಿದೆ.
ವಿದೇಶಿ ಕಂಪನಿಯ ಷೇರುಗಳ ವರ್ಗಾವಣೆಯ ಮೂಲಕ ಭಾರತದಲ್ಲಿ ಇರುವ ಸ್ವತ್ತುಗಳ ವರ್ಗಾವಣೆಯಿಂದ ಉಂಟಾಗುವ ಲಾಭಗಳ ತೆರಿಗೆಯ ಸಮಸ್ಯೆಯು ದೀರ್ಘಾವಧಿ ವ್ಯಾಜ್ಯದ ವಿಷಯವಾಗಿದೆ. ಅಂತಿಮವಾಗಿ, ಸುಪ್ರೀಂ ಕೋರ್ಟ್ 2012 ರಲ್ಲಿ ಒಂದು ತೀರ್ಪನ್ನು ನೀಡಿತ್ತು, ಭಾರತೀಯ ಸ್ವತ್ತುಗಳ ಪರೋಕ್ಷ ವರ್ಗಾವಣೆಯಿಂದ ಉಂಟಾಗುವ ಲಾಭಗಳು ಕಾಯಿದೆಯ ಪ್ರಸ್ತುತ ನಿಬಂಧನೆಗಳ ಅಡಿಯಲ್ಲಿ ತೆರಿಗೆಗೆ ಒಳಪಡುವುದಿಲ್ಲ.

ಪ್ರಮುಖ ಸುದ್ದಿ :-   ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement