ಬೆಂಗಳೂರು: ಟೋಕಿಯೊ ಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ನೀರಜ್ ಚೋಪ್ರಾಗೆ ಅವರ ಸಾಧನೆಗೆ ಕೆಎಸ್ಆರ್ಟಿಸಿ ಜೀವಿತಾವಧಿ ಕೊಡುಗೆ ನೀಡಿದೆ. ಪದಕ ಜಸ್ಟ್ ಮಿಸ್ ಆದ ಗಾಲ್ಫರ್ ಕನ್ನಡತಿ ಅದಿತಿ ಅಶೋಕ್ಗೂ ಗೌರವ ನೀಡಿದೆ.
ಕೆಎಸ್ಆರ್ಟಿಸಿ ಕೊಡಮಾಡುವ ಗೋಲ್ಡನ್ ಪಾಸ್ ಪ್ರಕಟಸಿದ್ದು, ಬಸ್ಸಿನಲ್ಲಿ ರಾಜ್ಯ ಹಾಗೂ ಅಂತಾರಾಜ್ಯಗಳಲ್ಲಿ ಜೀವಿತಾವಧಿವರೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ಟೋಕಿಯೋ ಒಲಿಂಪಿಕ್ಸ್ನ (Tokyo Olympics) ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಶತಮಾನದ ಅಥ್ಲಟಿಕ್ಸ್ನಲ್ಲಿ ಶತಮಾನದ ಭಾರತದ ಪದಕ ಕಾಯುವಿಕೆ ಕೊನೆಗಾಣಿಸಿದ ನೀರಜ್ ಚೋಪ್ರಾ (Neeraj Chopra) ಅವರಿಗೆ ಕೆಎಸ್ಆರ್ಟಿಸಿ ಕೂಡ ಚಿನ್ನದ ಹುಡುಗನಿಗೆ ಅಭಿನಂದನೆ ಸಲ್ಲಿಸಿ ವಿಶೇಷ ಸೌಲಭ್ಯ ಪ್ರಕಟಿಸಿದೆ.
ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದಿರುವ ನೀರಜ್ ಚೋಪ್ರಾಗೆ ಕೆಎಸ್ಆರ್ಟಿಸಿ ಗೋಲ್ಡನ್ ಪಾಸ್ ನೀಡುವ ಮೂಲಕ ಸಾಧನೆಗೆ ಗೌರವ ನೀಡಿದೆ. ಸಂಸ್ಥೆಯ 60 ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲೇ ಈ ವಿಶೇಷ ಗೌರವವನ್ನು ಚೋಪ್ರಾಗೆ ಸಲ್ಲಿಸಲಾಗಿದ್ದು, ಈ ಬಗ್ಗೆ ಕೆಎಸ್ಆರ್ಟಿಸಿ ಅಧಿಕೃತ ಟ್ವಿಟರ್ ಅಕೌಂಟ್ನಲ್ಲಿ ಟ್ವೀಟ್ ಮಾಡಿದೆ.
ಅನಂತ ಅನಂತ ಅಭಿನಂದನೆಗಳು. ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ಅತ್ಯುನ್ನತ ಸಾಧನೆಯನ್ನು ಸಂಭ್ರಮಿಸಿ ಹಾರೈಸುತ್ತ, ಕೆಎಸ್ಆರ್ಟಿಸಿಯು 60 ವಸಂತಗಳನ್ನು ಪೂರೈಸಿರುವ ಸವಿನೆನಪಿನಲ್ಲಿ ನೀರಜ್ ಚೋಪ್ರಾ ಅವರಿಗೆ ಕೆಎಸ್ಆರ್ಟಿಸಿ ಗೋಲ್ಡನ್ ಪಾಸ್ ನೀಡಲಾಗುತ್ತದೆ ಎಂದು ಟ್ವೀಟ್ ಮಾಡಲಾಗಿದೆ. ಅವರ ಸಾಧನೆಗೆ ಕೆಎಸ್ಆರ್ಟಿಸಿ ಅಭಿನಂದನೆ ಸಲ್ಲಿಸಿದೆ.
ಕೆಎಸ್ಆರ್ಟಿಸಿ ಕೊಡಮಾಡುವ ಗೋಲ್ಡನ್ ಪಾಸ್ ಮೂಲಕ ನಿಗಮದ ಯಾವುದೇ ಬಸ್ಸಿನಲ್ಲಿ ರಾಜ್ಯ ಹಾಗೂ ಅಂತಾರಾಜ್ಯಗಳಲ್ಲಿ ಜೀವಿತಾವಧಿವರೆಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಇದು ಗೌರವ ಸೂಚಕವಾಗಿ ಕೊಡಲಾಗುವ ಸವಲತ್ತಾಗಿದೆ.
ಅದಿತಿ ಅಶೋಕ್ಗೂ ಉಚಿತ ಪಾಸ್
ಪದಕ ಗೆಲ್ಲುವುದು ಸಾಧ್ಯವಾಗದಿದ್ದರೂ ಗಾಲ್ಫ್ ಕ್ರೀಡೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹೃದಯ ಗೆದ್ದ ಕನ್ನಡತಿ ಅದಿತಿ ಅಶೋಕ್ ಅವರಿಗೂ ಕೆಎಸ್ಆರ್ಟಿಸಿ ಉಚಿತ ಪಾಸ್ ನೀಡುವುದಾಗಿ ಘೋಷಿಸಿದೆ. ಒಲಿಂಪಿಕ್ನಲ್ಲಿ ಅದ್ಭುತ ಆಟವಾಡಿದ ಕನ್ನಡದ ಕುವರಿ, ಅರ್ಜುನ ಪ್ರಶಸ್ತಿ ವಿಜೇತೆ ಅದಿತಿ ಅಶೊಕ್ ಅವರಿಗೆ ಕೆಎಸ್ಆರ್ಟಿಸಿ ಉಚಿತ ಪಾಸ್ ನೀಡುವ ಮೂಲಕ ಅಭಿನಂದನೆ ಸಲ್ಲಿಸುತ್ತದೆ ಎಂದು ಟ್ವೀಟ್ ಮೂಲಕ ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ