ಅಫ್ಘನ್‌ ಪಡೆಗಳ ವಾಯು ದಾಳಿ: 200ಕ್ಕೂ ಹೆಚ್ಚು ತಾಲಿಬಾನ್‌ ಉಗ್ರರ ಸಾವು

ಕಾಬೂಲ್: ಆಫ್ಘಾನಿಸ್ತಾನದ ಕೆಲಪ್ರದೇಶವನ್ನು ಆಕ್ರಮಿಸಿಕೊಂಡಿರುವ ತಾನಿಬಾನ್ ಉಗ್ರರ ನಿಗ್ರಹಕ್ಕಾಗಿ ಸೇನಾ ಕಾರ್ಯಾಚರಣೆ ತೀವ್ರಗೊಂಡಿದ್ದು, ಅಫ್ಘಾನ ವಾಯು ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ೨೦೦ಕ್ಕೂ ಹೆಚ್ಚು ತಾಲಿಬಾನಿಗಳು ಮೃತಪಟ್ಟಿದ್ದಾರೆ ಹಾಗೂನೂರಾರು ಬಂಡುಕೋರರು ತೀವ್ರವಾಗಿ ಗಾಯಗೊಂಡಿದ್ದಾರೆ.
ಶೆಬರ್ಗನ್ ಪಟ್ಟಣದ ಜವ್‌ಜನ್ ಪಟ್ಟಣದಲ್ಲಿ ತಾಲಿಬಾನ್ ಉಗ್ರಗಾಮಿಗಳ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ವೈಮಾನಿಕ ದಾಳಿ ನಡೆಸಲಾಗಿದೆ. ಬಿ-೫೨ ಬಾಂಬ್ ದಾಳಿಯಲ್ಲಿ ೨೦೦ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿದ್ದಾರೆ ಎಂದು ಆಫ್ಘಾನಿಸ್ತಾನ ರಕ್ಷಣಾ ಸಚಿವಾಲಯದ ಉನ್ನತಾಧಿಕಾರಿ ಫವದ ಅಮನ ತಿಳಿಸಿದ್ದಾರೆ.
ಅಲ್ಲದೆ ಈ ದಾಳಿಯಲ್ಲಿ ನೂರಾರು ಜನರು ಗಾಯಗೊಂಡಿದ್ದು, ಉಗ್ರರ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ನಾಶವಾಗಿವೆ. ತಾಲಿಬಾನಿಗಳ ೧೦೦ಕ್ಕೂ ಹೆಚ್ಚು ವಾಹನಗಳು ಧ್ವಂಸಗೊಂಡಿವೆ. ಅಫ್ಘನ್‌ನ ಅನೇಕ ಪ್ರದೇಶಗಳನ್ನು ತಾಲಿಬಾನ್ ಉಗ್ರರು ಆಕ್ರಮಿಸಿಕೊಂಡಿದ್ದು, ಅವರನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಮುಂದುವರಿದಿದೆ ಎಂದು ಫವದ್ ಅಮನ್ ಟ್ವೀಟ್ ಮಾಡಿದ್ದಾರೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement