ಇದು ಯಶಸ್ಸಿನ ಕಥೆ: ಕಿವುಡುತನದ ಮಧ್ಯೆ ಮೊದಲೇ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣ, 9ನೇ ಸ್ಥಾನ ಪಡೆದ ಸೌಮ್ಯ ಶರ್ಮಾ..!

ಆಕೆಯ ತಂದೆ ಮತ್ತು ತಾಯಿ ಇಬ್ಬರೂ ವೈದ್ಯರು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಆಕೆಗೆ ಬಾಲ್ಯದಲ್ಲಿ ಯಾವ ಕಷ್ಟವೂ ಇರಲಿಲ್ಲ. ಆದರೆ, ಆಕೆ 16 ವರ್ಷದವಳಿದ್ದಾಗ, ಆಕೆಯ ಕಿವಿ ಇದ್ದಕ್ಕಿದ್ದಂತೆ ಕಿವುಡಾಯಿತು. ವೈದ್ಯನಾಗಿದ್ದ ಅವಳ ಮಾವ ವೈದ್ಯರನ್ನು ಸಂಪರ್ಕಿಸಿದರು ಮತ್ತು ಸಾಕಷ್ಟು ಪ್ರಯತ್ನದ ಹೊರತಾಗಿಯೂ ಅವಳು ಕೇಳುವ ಶಕ್ತಿಗೆ ಮರಳಲಿಲ್ಲ. ನಂತರ ಎಲ್ಲರೂ ಆಕೆಯ ಬಗ್ಗೆ ಮಾತನಾಡಲು ಆರಂಭಿಸಿದರು. ವ್ಯಂಗ್ಯದ ಮಾತುಗಳನ್ನಾಡಿದರು. ಆದರೆ ಮೂದಲಿಕೆಗೆ ಬಾಲಕಿ ಹೆದರಲಿಲ್ಲ. ದೃಢ ನಿರ್ಧಾರದಿಂದ ಮುಂದೆ ಸಾಗಿದರು. ಚಿಕ್ಕ ವಯಸ್ಸಿನಲ್ಲಿಯೇ, ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಐಎಎಸ್ ಅಧಿಕಾರಿಯಾದರು..!. ಅವರ ಹೆಸರೇ ಸೌಮ್ಯ ಶರ್ಮಾ.
ಸೌಮ್ಯ ಶರ್ಮಾ 2017 ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಯುವತಿ. 16ನೇ ವರ್ಷದಲ್ಲಿ ಶ್ರವಣ ಸಾಮರ್ಥ್ಯ ಕಳೆದುಕೊಂಡ ಸೌಮ್ಯ ತನ್ನ ಜೀವನ ಮುಗಿಯಿತು ಎಂದು ಹೆದರಲಿಲ್ಲ. ಬದಲಾಗಿ, ಅಂಗವೈಕಲ್ಯಕ್ಕೆ ಸವಾಲೊಡ್ಡುವ ಮೂಲಕ ತಾಯಿಯ ಪ್ರೋತ್ಸಾಹದಿಂದ ಮೊದಲ ಪ್ರಯತ್ನದಲ್ಲಿಯೇ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದರು. ಆಕೆ ತನ್ನ ಮೊದಲ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ 9 ನೇ ಸ್ಥಾನ ಪಡೆದಿದ್ದರು. ದೆಹಲಿಯ ಸೌಮ್ಯ ಸುಂದರ ಬಾಲ್ಯವನ್ನು ಹೊಂದಿದ್ದರು. ಅಪ್ಪ ಮತ್ತು ಅಮ್ಮ ಇಬ್ಬರೂ ವೈದ್ಯರಾಗಿದ್ದರಿಂದ ಮನೆಯಲ್ಲಿ ಏನೂ ಕೊರತೆ ಇರಲಿಲ್ಲ.
ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಅವರು ಓದುವುದರಲ್ಲಿ ತುಂಬಾ ಚುರುಕಾಗಿದ್ದರು. ಆದರೆ 16 ವರ್ಷದವರಿದ್ದಾಗ, ಅಂದರೆ ಎಸ್ಸೆಸ್ಸೆಲ್ಸಿ (SSLC) ಯಲ್ಲಿದ್ದಾಗ, ಕಿವಿ ಇದ್ದಕ್ಕಿದ್ದಂತೆ ಕೇಳಲಿಲ್ಲ. ಏನೇ ಆಪರೇಷನ್ ಮಾಡಿದರೂ ಸರಿಯಾಗಲಿಲ್ಲ. ಶೇ.95 ರಷ್ಟು ಕಿವುಡು ಉಂಟಾಯಿತು. ಈ ಆಘಾತದಿಂದ ಹೊರಬರಲು ಆಕೆಯ ಕುಟುಂಬಕ್ಕೆ ಬಹಳ ಸಮಯ ಹಿಡಿಯಿತು. ಈ ಮಧ್ಯೆ, ಕುಟುಂಬ ಮತ್ತು ನೆರೆಹೊರೆಯವರ ಟೀಕೆಗಳು ಅವರ ಮನಸ್ಸನ್ನು ಘಾಸಿಗೊಳಿಸಿತು. ಕಿವುಡುತನ ಬದುಕಿನಲ್ಲಿ ಒಂದು ದೊಡ್ಡ ಕಪ್ಪು ಚುಕ್ಕೆಯಾಗಿತ್ತು. ಆದರೆ ಸೌಮ್ಯ ಧೈರ್ಯ ಕಳೆದುಕೊಳ್ಳಲಿಲ್ಲ.
ಅವರು ದೆಹಲಿಯ ರಾಷ್ಟ್ರೀಯ ಕಾನೂನು ಶಾಲೆಯಿಂದ ಹಿಯರಿಂಗ್ ಏಡ್ ಬಳಸಿ ಕಾನೂನು ಪದವಿ ಪಡೆದಿದ್ದಾರೆ. ನಂತರ ತನ್ನ ಮೊದಲ ಯುಪಿಎಸ್‌ಸಿ ಪರೀಕ್ಷೆಯನ್ನು 23 ನೇ ವಯಸ್ಸಿನಲ್ಲಿ ಬರೆದಿದ್ದಾರೆ. ಆ ಪರೀಕ್ಷೆಯಲ್ಲಿ 9 ನೇ ಶ್ರೇಣಿಯಲ್ಲಿ ಉತ್ತೀರ್ಣರಾದರು ಮತ್ತು ಐಎಎಸ್‌ಗೆ ಆಯ್ಕೆಯಾದರು. ಯಾವುದೇ ಕೋಚಿಂಗ್ ತೆಗೆದುಕೊಳ್ಳದೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸೌಮ್ಯ ಇನ್ನೂ ಅನೇಕ ಕಾಲೇಜುಗಳಿಗೆ ಹೋಗಿ ಯುಪಿಎಸ್‌ಸಿ ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು ಎಂದು ಸಲಹೆ ನೀಡುತ್ತಾರೆ. ಈ ಮೂಲಕ, ವಿದ್ಯಾರ್ಥಿಗಳು ಮತ್ತು ವಿಕಲಾಂಗ ವಿದ್ಯಾರ್ಥಿಗಳಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಬಿಹಾರದಲ್ಲಿ ಇಂಡಿಯಾ ಮೈತ್ರಿಕೂಟ ಸೀಟು ಹಂಚಿಕೆ ಅಂತಿಮ; ಆರ್‌ಜೆಡಿ 26, ಕಾಂಗ್ರೆಸ್‌ 9 ಸ್ಥಾನಗಳಲ್ಲಿ ಸ್ಪರ್ಧೆ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement