ನವದೆಹಲಿ: ಬ್ಯಾಂಕ್ಗಳಲ್ಲಿ ಹಣ ಠೇವಣಿ ಇಡುವ ಸಣ್ಣ ಠೇವಣಿದಾರರ ಹಿತಾಸಕ್ತಿ ರಕ್ಷಿಸುವ ಮಹತ್ವದ ಮಸೂದೆಗೆ ಇಂದು (ಸೋಮವಾರ) ಲೋಕಸಭೆ ಒಪ್ಪಿಗೆ ನೀಡಿದೆ.
ಡಿಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್(ತಿದ್ದುಪಡಿ) ಮಸೂದೆ -2021 (ಡಿಐಸಿಜಿಸಿ)ಕ್ಕೆ ಲೋಕಸಭೆ ಸೋಮವಾರ ಒಪ್ಪಿಗೆ ನೀಡಿದೆ. ಇದು ಜಾರಿಯಾಗುವುದರಿಂದ ಬ್ಯಾಂಕ್ ಠೇವಣಿದಾರರ ಹಿತಾಸಕ್ತಿ ರಕ್ಷಣೆಯಾಗಲಿದ್ದು, ಬ್ಯಾಂಕ್ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬಾಗಿಲು ಮುಚ್ಚಿದರೂ, ಠೇವಣಿದಾರರ ಹಣ ಸುರಕ್ಷಿತವಾಗಿ ಅವರ ಕೈ ಸೇರಲಿದೆ ಎಂದು ಸರ್ಕಾರ ಹೇಳಿದೆ.
ದೇಶದಲ್ಲಿ ಇತ್ತೀಚೆಗೆ ಬ್ಯಾಂಕ್ಗಳು ಅವ್ಯವಹಾರ, ಆರ್ಥಿಕ ನಷ್ಟ, ನಿಯಮಗಳ ಉಲಂಘನೆ ಸೇರಿದಂತೆ ಹಲವು ಕಾರಣಗಳಿಂದ ದಿಢೀರನೆ ಬಾಗಿಲು ಮುಚ್ಚುತ್ತಿದ್ದು, ಇದರಿಂದ ಠೇವಣಿದಾರರು ತೊಂದರೆಗೊಳಗಾಗುತ್ತಿದ್ದಾರೆ. ಇಂಥ ಬ್ಯಾಂಕ್ ಠೇವಣಿದಾರರ ಹಿತಾಸಕ್ತಿ ರಕ್ಷಿಸಲು ಈಗ ಕೇಂದ್ರ ಸರ್ಕಾರ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಿತ್ತು.
ಡಿಪಾಸಿಟ್ ಇನ್ಸೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್(DICGC) ತಿದ್ದುಪಡಿ ಮಸೂದೆಯನ್ನ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತ್ತು. ಗದ್ದಲದ ಮಧ್ಯೆಯೇ ಈ ಮಸೂದೆಗೆ ಅಂಗೀಕಾರ ದೊರೆತಿದೆ.
ಠೇವಣಿದಾರರಿಗೆ ಸಹಾಯವಾಗಲಿದೆ ಎಂದು ಸರ್ಕಾರ ಹೇಳುತ್ತದೆ..:
ಯಾವುದೇ ವಾಣಿಜ್ಯ ಬ್ಯಾಂಕ್ ಅಥವಾ ಸಹಕಾರ ಬ್ಯಾಂಕ್ ಆರ್ಥಿಕ ಚಟುವಟಿಕೆ ನಡೆಸದಂತೆ ರಿಸರ್ವ್ ಬ್ಯಾಂಕ್ ನಿರ್ಬಂಧ ವಿಧಿಸಿದಾಗ , ಡಿಪಾಸಿಟ್ ಇನ್ಷುರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೋರೇಷನ್ ಅಂಥ ಬ್ಯಾಂಕ್ಗಳ ಠೇವಣಿದಾರರಿಗೆ ತಲಾ 5 ಲಕ್ಷ ರೂಪಾಯಿ ಠೇವಣಿ ವಿಮೆಯನ್ನು ನೀಡಲಿದೆ. ಈ ಮೊದಲು ಸಂಕಷ್ಟಕ್ಕೆ ಸಿಲುಕಿದ್ದ ಬ್ಯಾಂಕ್ನ ನಗದೀಕರಣಕ್ಕೆ ಆದೇಶ ನೀಡಿದ್ದ ಬಳಿಕವಷ್ಟೇ ಇನ್ಸೂರೆನ್ಸ್ ಹಣ ನೀಡಲು ಅವಕಾಶ ಇತ್ತು. ಇದರಿಂದ ವರ್ಷಗಳೇ ಕಳೆದರೂ, ಬ್ಯಾಂಕ್ ಠೇವಣಿದಾರರಿಗೆ ತಮ್ಮ ಹಣ ವಾಪಸ್ ಸಿಗುತ್ತಿರಲಿಲ್ಲ. ಆದರೆ ಈಗ ಬ್ಯಾಂಕ್ ಆರ್ಥಿಕ ಚಟುವಟಿಕೆಗೆ ನಿರ್ಬಂಧ ವಿಧಿಸಿದ 90 ದಿನಗಳಲ್ಲಿ 5 ಲಕ್ಷ ರೂಪಾಯಿ ವಿಮಾ ಹಣವನ್ನು ಬ್ಯಾಂಕ್ ಠೇವಣಿದಾರರಿಗೆ ಡಿಐಸಿಜಿಸಿ ನೀಡಬೇಕಾಗುತ್ತದೆ. 90 ದಿನಗಳಲ್ಲಿ ಠೇವಣಿದಾರರಿಗೆ ಇನ್ಸೂರೆನ್ಸ್ ಹಣವನ್ನು ನೀಡಬೇಕಾಗುತ್ತೆ.
ಬ್ಯಾಂಕ್ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದಾಗ, ಆರ್ಬಿಐ ಒತ್ತಡಕ್ಕೆ ಒಳಗಾಗುವುದನ್ನು ಈ ಮಸೂದೆ ತಪ್ಪಿಸಲಿದೆ. ಈ ಮಸೂದೆಯಿಂದ ರಿಸರ್ವ್ ಬ್ಯಾಂಕ್ಗೆ ಸಂಕಷ್ಟಕ್ಕೆ ಸಿಲುಕಿದ್ದ ಬ್ಯಾಂಕ್ನ ನಗದು ನೀಡಿಕೆ ಪ್ರಕ್ರಿಯೆಯಲ್ಲಿ ಹೆಚ್ಚಿನ ಸ್ವಾತಂತ್ರ್ಯ ಸಿಗಲಿದೆ. ಜೊತೆಗೆ, ಈಗ ನೂರು ರೂಪಾಯಿ ಠೇವಣಿಗೆ 15 ಪೈಸೆ ಮಾತ್ರ ವಿಮಾ ಪ್ರೀಮಿಯಂ ಆಗಿ ಸಂಗ್ರಹಿಸಲು ಅವಕಾಶ ಇದೆ. ಈ ಮಿತಿಯನ್ನು ತೆಗೆದು ಹಾಕುವುದರಿಂದ ಡಿಐಸಿಜಿಸಿ ಹೆಚ್ಚಿನ ಇನ್ಸೂರೆನ್ಸ್ ಪ್ರೀಮಿಯಂ ಸಂಗ್ರಹಿಸಲು ಅವಕಾಶ ಸಿಗಲಿದೆ.
ಕೇಂದ್ರ ಸರ್ಕಾರ ಕಳೆದ ವರ್ಷ ಬ್ಯಾಂಕ್ಗಳ ವೈಯಕ್ತಿಕ ಠೇವಣಿದಾರರ ಠೇವಣಿ ವಿಮಾ ಮೊತ್ತವನ್ನು 1 ಲಕ್ಷದಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಇದಕ್ಕೆ ಈಗ ಡಿಐಸಿಜಿಸಿ ಅನುಮೋದನೆಯಿಂದ ಮತ್ತಷ್ಟು ಬಲ ಸಿಗಲಿದೆ ಎಂದು ಸರ್ಕಾರ ಹೇಳಿದೆ.
ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಅಪರೇಟೀವ್ ಬ್ಯಾಂಕ್ ಸೇರಿದಂತೆ ಕೆಲ ಬ್ಯಾಂಕ್ಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬಳಿಕ ಕೇಂದ್ರ ಸರ್ಕಾರ ಈ ಮಸೂದೆ ಸಿದ್ದಪಡಿಸಿ ಸಂಸತ್ನ ಉಭಯ ಸದನಗಳ ಒಪ್ಪಿಗೆ ಪಡೆದಿದೆ. ಕಳೆದ ವಾರವೇ ಈ ಮಸೂದೆಗೆ ರಾಜ್ಯಸಭೆಯ ಒಪ್ಪಿಗೆಯೂ ಸಿಕ್ಕಿದೆ. ಈ ಮಸೂದೆಯಿಂದ ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಅಪರೇಟೀವ್ ಬ್ಯಾಂಕ್ ಸೇರಿದಂತೆ 23 ಕೋ ಅಪರೇಟೀವ್ ಬ್ಯಾಂಕ್ ಠೇವಣಿದಾರರಿಗೆ ಅನುಕೂಲವಾಗಲಿದೆ ಎಂದು ಕಳೆದ ವಾರ ರಾಜ್ಯಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ