ನಾಗರಹೊಳೆಯಲ್ಲಿ ಎದೆ ಝಲ್‌ ಎನಿಸುವ ಹುಲಿಗಳ ಭಯಾನಕ ಕಾದಾಟದ ವಿಡಿಯೋ ವೈರಲ್‌

ಎಚ್.ಡಿ.ಕೋಟೆ: ತಮ್ಮ ಪ್ರದೇಶದ ಹಕ್ಕು ಸ್ಥಾಪಿಸುವ ಸಲುವಾಗಿ ಎರಡು ಹುಲಿಗಳು ಭಯಾನಕವಾಗಿ   ಕಾದಾಟ ನಡೆಸಿರುವ ಅಪರೂಪದ ದೃಶ್ಯವೊಂದು ಇಂದು (ಸೋಮವಾರ) ನಾಗರಹೊಳೆಯ ಸಫಾರಿಯ ವೇಳೆ‌ ಕ್ಯಾಮರಾ ಕಣ್ಣಿಗೆ ಸೆರೆಯಾಗಿದೆ.

ನಾಗರಹೊಳೆ ಅರಣ್ಯದಲ್ಲಿ ಸಫಾರಿ ಮಾಡುವ ವೇಳೆ ಈ ಎರಡು ಬೃಹತ್‌ ಹುಲಿಗಳು ಪ್ರದೇಶದ ಮೇಲೆ ತಮ್ಮ ಸ್ವಾಮ್ಯ ಸ್ಥಾಪಿಸಲು ಕಾದಾಟ ನಡೆಸಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದ್ದು ಎದೆ ಝಲ್ ಎನಿಸುವಂತಿದೆ.
ತಮ್ಮ ನೆಲೆಯ ವಿಚಾರವಾಗಿ ಇಂತಹ ಕಾದಾಟಗಳು ಹುಲಿಗಳಲ್ಲಿ ನಡೆಯುವುದು ಸಾಮಾನ್ಯ. ಇಂಥ ಭಾರೀ ಕಾಳಗದಲ್ಲಿ ಸಾಕಷ್ಟು ಹುಲಿಗಳು ಗಾಯಗೊಂಡಿರುವೆ ಅಥವ ಎಷ್ಟೋ ಸಂದರ್ಭದಲ್ಲಿ ಮೃತಪಟ್ಟ ಬಗ್ಗೆ ಸಾಕಷ್ಟು ವರದಿಗಳಾಗಿವೆ. ಆದರೆ ಅಪರೂಪಕ್ಕೆ ಎಂಬಂತೆ ನಿರದಿಷ್ಟ ಪ್ರದೇಶದಲ್ಲಿ ತಮ್ಮ ಪಾರಮ್ಯ ಸ್ಥಾಪಿಸುವ ಸಲುವಾಗಿ ನಡೆದ ಕಾದಾಟವೊಂದು ನಾಗರಹೊಳೆಯಲ್ಲಿ ಈಗ ಕ್ಯಾಮೆರಾಗೆ ಸೆರೆಯಾಗಿರುವುದು ವಿಶೇಷವಾಗಿದೆ.ವಿಡಿಯೋದಲ್ಲಿ ಎರಡು ಬೃಹತ್‌ ಹುಲಿಗಳು ಭಯನಾಕವಾಗಿ ಕಾದಾಟ ನಡೆಸಿರುವುದು ಸೆರೆಯಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement