ಸಿನೆಮಾ ಶೂಟಿಂಗ್ ವೇಳೆ ಖ್ಯಾತ ನಟ ಪ್ರಕಾಶ್​ ರೈಗೆ ಗಾಯ

ಚೆನ್ನೈ : ಚೆನ್ನೈನಲ್ಲಿ ನಟ ಧನುಷ್ ನಾಯಕನಾಗಿ ಅಭಿವನಯಿಸಿರುವ ಚಿತ್ರದ ಸಾಹಸ ಶೂಟಿಂಗ್ ಚಿತ್ರೀಕರಣದ ಸಂದರ್ಭದಲ್ಲಿ ಸೋಮವಾರ ನಟ ಪ್ರಕಾಶ್ ರೈ ಗಂಭೀರವಾಗಿ ಗಾಯಗೊಂಡಿದ್ದಾರೆ.
ಆಗಸ್ಟ್ 5ರಂದು ಆರಂಭಗೊಂಡಂತ ನಟ ಧನುಷ್ ನಾಯಕನಾಗಿ ನಟಿಸಿರುವ ಚಿತ್ರದ ಶೂಟಿಂಗ್ ಚೆನ್ನೈನಲ್ಲಿ ನಡೆಯುತ್ತಿತ್ತು. ಈ ಶೂಟಿಂಗ್ ನ ಸಾಹಸ ದೃಶ್ಯದ ಚಿತ್ರೀಕರಣದ ಸಂದರ್ಭದಲ್ಲಿ ನಟ ಪ್ರಕಾಶ್ ರೈ( Prakash Raj suffers injuries) ಕೈಗೆ ಗಂಭೀರವಾಗಿ ಪೆಟ್ಟುಬಿದ್ದಿದೆ. ಕೂಡಲೇ ಅವರನ್ನು ಚೈನ್ನೈನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಶಸ್ತ್ರ ಚಿಕಿತ್ಸೆಗೆ ಸಲಹೆ ಮಾಡಿದ್ದಾರೆ.
ತಕ್ಷಣ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಅಲ್ಲಿ ಪ್ರಥಮ ಚಿಕಿತ್ಸೆ ಪಡೆದುಕೊಂಡ ಬಳಿಕ ಅವರು ಹೈದರಾಬಾದ್​ಗೆ ತೆರಳಿದ್ದಾರೆ. ಹೈದರಾಬಾದ್​ನಲ್ಲಿ ಪ್ರಕಾಶ್​ ರೈಗೆ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ.
ಈ ಕುರಿತಂತೆ ಟ್ಟಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವಂತ ನಟ ಪ್ರಕಾಶ್ ರೈ ಅವರು, ಒಂದು ಘಟನೆ ನಡೆದಿದೆ. ಹೀಗಾಗಿ ಶಸ್ತ್ರ ಚಿಕಿತ್ಸೆಗಾಗಿ ಹೈದರಾಬಾದ್ ಗೆ ಬಂದಿದ್ದೇನೆ. ಗೆಳೆಯ ಡಾ.ಗುರುವ ರೆಡ್ಡಿ ಶಸ್ತ್ರ ಚಿಕಿತ್ಸೆಗೆ ಒಳಪಡಿಸಿದ್ದಾರೆ. ಯಾವುದೇ ಭಯವಿಲ್ಲ. ಯಾರೂ ಆತಂಕ ಪಡುವುದು ಬೇಡ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರಲ್ಲಿ 'ಸಿಮ್ ಬಾಕ್ಸ್' ಜಾಲ ಪತ್ತೆ ; ನಾಲ್ವರ ಬಂಧನ, 320 ಸಿಮ್‌ ಕನೆಕ್ಷನ್‌ ಸಾಮರ್ಥ್ಯದ 10 ಸಾಧನ ವಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement