ಬೆಂಗಳೂರಿನಲ್ಲಿ ಸೆಪ್ಟೆಂಬರ್‌ನಿಂದ ರಸ್ತೆಗಿಳಿಯಲಿದೆ ಎಲೆಕ್ಟ್ರಿಕಲ್ ಬಸ್ ..!

ಬೆಂಗಳೂರು; ತನ್ನ ಮಹತ್ವಾಕಾಂಕ್ಷೆ ಕಾರ್ಯರೂಪಕ್ಕೆ ತರುವಲ್ಲಿ ಬಿಎಂಟಿಸಿ ಯಶಸ್ವಿಯಾಗಿದ್ದು, ಮುಂದಿನ ತಿಂಗಳಿನಿಂದ ಬೆಂಗಳೂರು ನಗರದಲ್ಲಿ ಎಲೆಕ್ಟ್ರಿಕಲ್ ಬಸ್ ಗಳು ಸಂಚಾರ ಆರಂಭಿಸಲಿವೆ…!
ಮೊದಲ ಹಂತದಲ್ಲಿ ಬಿಎಂಟಿಸಿ ನಗರದ ಕೆಲವೇ ಕೆಲವು ಪ್ರದೇಶದಲ್ಲಿ ಮಾತ್ರ ಎಲೆಕ್ಟ್ರಿಕಲ್ ಬಸ್ ಸಂಚಾರ ಆರಂಭಿಸಲಿದೆ. ಕೆ.ಆರ್.ಪುರಂ,ಕೆಂಗೇರಿ ಹಾಗೂ ಯಶ್ವಂತಪುರ ಡಿಪೋಗಳಿಂದ ಎಲೆಕ್ಟ್ರಿಕಲ್ ಬಸ್ ಗಳು ಓಡಾಡಲಿವೆ ಎಂದು ತಿಳಿಸಲಾಗಿದೆ.
ಎನ್‌ ಟಿಪಿಸಿ ಹಾಗೂ ಜೆಎಂಬಿ ಜಂಟಿಯಾಗಿ 9 ಮೀಟರ್ ಉದ್ದದ ಬಸ್ ಗಳನ್ನು ಪೊರೈಕೆ ಮಾಡಲಿದ್ದು, ಮೊದಲ ಹಂತದಲ್ಲಿ ನಾನ್ ಎಸಿ ಬಸ್ಸುಗಳು ರಸ್ತೆಗಿಳಿಯಲಿವೆ. ಒಟ್ಟು 90 ಬಸ್ ಗಳನ್ನು ಬಿಎಂಟಿಸಿ ಖರೀದಿಸಿದ್ದು, 2021 ರ ಡಿಸೆಂಬರ್ ಅಂತ್ಯಕ್ಕೆ ಎಲ್ಲ ಬಸ್ ಗಳು ಪೂರೈಕೆಯಾಗಲಿದೆ ಎಂದು ಹೇಳಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಎಲೆಕ್ಟ್ರಿಕಲ್ ಬಸ್ಸುಗಳನ್ನು ರಸ್ತೆಗಿಳಿಸಲು ಬಿಎಂಟಿಸಿಯಿಂದ ವಿಳಂಬವಾಗಿದೆ. ಬಸ್ ಗಳನ್ನು ಪೂರೈಕೆ ಮಾಡುವ ಕಂಪನಿಯೇ ಚಾಲಕರನ್ನು ನೇಮಿಸಲಿದ್ದು, ಚಾಲಕರ ವೇತನ, ಬಸ್ ನಿರ್ವಹಣಾ ವೆಚ್ಚ ಹಾಗೂ ವಿದ್ಯುತ್ ಶುಲ್ಕವನ್ನು ಕಂಪನಿಯೇ ಭರಿಸಲಿದೆ. ಕೇವಲ ನಿರ್ವಾಹಕರನ್ನು ಮಾತ್ರ ಬಿಎಂಟಿಸಿ ನೇಮಿಸುತ್ತದೆ.
ಈ ಪ್ರಾಯೋಗಿಕ ಎಲೆಕ್ಟ್ರಿಕಲ್ ಬಸ್ ಸಂಚಾರ ಯಶಸ್ವಿಯಾದಲ್ಲಿ ಡಿಸೇಲ್ ದರ ಏರಿಕೆಯಿಂದ ನಷ್ಟದಲ್ಲಿರುವ ಬಿಎಂಟಿಸಿ ಮತ್ತಷ್ಟು ಬಸ್ ಗಳನ್ನು ಖರೀದಿಸುವ ಲೆಕ್ಕಾಚಾರದಲ್ಲಿದೆ.

ಪ್ರಮುಖ ಸುದ್ದಿ :-   ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ರಾಜು ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement