ಸಿಎಂ ಬೊಮ್ಮಾಯಿ-ಬಿಎಸ್‌ವೈ ಜೊತೆಗೆ ಸಭೆ ನಂತರ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿದ ಆನಂದ್ ಸಿಂಗ್

ಬೆಂಗಳೂರು: ಪ್ರಬಲ ಖಾತೆಗೆ ಬಿಗಿಪಟ್ಟು ಹಿಡಿದಿದ್ದ ಸಚಿವ ಆನಂದ್ ಸಿಂಗ್ ರಾಜೀನಾಮೆ ನಿರ್ಧಾರದಿಂದ ಈಗ ಹಿಂದೆ ಸರಿದಿದ್ದಾರೆ.
ಬುಧವಾರ ಸಂಜೆ ಮುಖ್ಯಮಂತ್ರಿ ಬೊಮ್ಮಾಯಿ ಜೊತೆ ನಡೆಸಿದ ಸಭೆ ಯಶಸ್ವಿಯಾಗಿದ್ದು, ಅದರ ನಂತರ ಅವರು ರಾಜೀನಾಮೆ ನಿರ್ದಾರದಿಂದ ಹಿಂದೆ ಸರದಿದ್ದಾರೆ.
ಈ ಹಿಂದೆ ಪ್ರತ್ಯೇಕ ಜಿಲ್ಲೆಗೆ ಪಟ್ಟು ಹಿಡಿದು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ಆನಂದ್ ಸಿಂಗ್ ಈಗ ಪ್ರಬಲ ಖಾತೆಗೆ ಪಟ್ಟು ಹಿಡಿದು ರಾಜೀನಾಮೆ ಬೆದರಿಕೆ ಒಡ್ಡುವ ಮೂಲಕ ಮುಖ್ಯಮಂತ್ರಿ ಬೊಮ್ಮಾಯಿ ಅವರ ತಲೆಬಿಸಿಗೆ ಕಾರಣವಾಗಿದ್ದರು.
ಮುಖ್ಯಮಂತ್ರಿ ಭೇಟಿಗೂ ಮೊದಲು ಅಖಾಡಕ್ಕೆ ಪ್ರವೇಶಿಸಿದ್ದ ಯಡಿಯೂರಪ್ಪ ಅವರು ಸುರಪುರದ ಶಾಸಕ ರಾಜು ಗೌಡ ಅವರಿಗೆ ಹೆಲಿಕ್ಯಾಪ್ಟರ್‌ ಕಳುಹಿಸಿ ಅವರಿಗೆ ಆನಂದ ಸಿಂಗ್‌ ಅವರನ್ನು ಬೆಂಗಳೂರಿಗೆ ಕರೆತರುವ ಜವಾಬ್ದಾರಿ ವಹಿಸಲಾಗಿತ್ತು. ಅದರಂತೆಯೇ ರಾಜು ಗೌಡ ಹೊಸಪೇಟೆಗೆ ಬಂದು ಆನಂದ ಸಿಂಗ್‌ ಅವರನ್ನು ಬೆಂಗಳೂರಿಹಗೆ ಕರೆದೊಯ್ದಿದ್ದರು. ನಂತರ ಯಡಿಯೂರಪ್ಪ ಅವರ ನಿವಾಸ ಕಾವೇರಿಯಲ್ಲಿ ಒಂದು ಸುತ್ತಿನ ಸಭೆ ನಡೆದಿತ್ತು. ಸಭೆಯಲ್ಲಿ ಯಾವುದೇ ದುಡುಕಿನ ತೀರ್ಮಾನ ತೆಗೆದುಕೊಳ್ಳುವುದು ಬೇಡ, ಬೊಮ್ಮಾಯಿ ಅವರನ್ನು ಕರೆದು ಮಾತಾಡೋಣ ಎಂದು ಈ ಸಂದರ್ಭದಲ್ಲಿ ಯಡಿಯೂರಪ್ಪ ಸಲಹೆ ನೀಡಿದರು ತಿಳಿದುಬಂದಿದೆ. ನಂತರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಅವರ ಜೊತೆ ಸಭೆ ನಡೆಯಿತು.
ಸಭೆ ನಂತರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಆನಂದ್ ಸಿಂಗ್, ನಾನು ರಾಜೀನಾಮೆ ನೀಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಖಾತೆ ಬದಲಾವಣೆ ಆಗಬೇಕೆಂದು ಹೇಳಿದ್ದು ನಿಜ. ಮುಕ್ಯಮಂತ್ರಿಗಳು ನನ್ನ ಮಾತುಗಳನ್ನ ಆಲಿಸಿದ್ದು, ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಖಾತೆಯ ಬದಲಾವಣೆಯ ತೀರ್ಮಾನವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಲಿದೆ. ಆನಂದ್ ಸಿಂಗ್ ಅವರ ಮನವಿಯನ್ನು ತಲುಪಿಸಬೇಕಾದವರಿಗೆ ತಲುಪಿಸುತ್ತೇನೆ ಎಂದು ಹೇಳಿದರು.
ಹೊಸಪೇಟೆಯ ಶಾಸಕ ಕಚೇರಿಯ ಬೋರ್ಡ್ ತೆಗೆಸಿ, ಬಾಗಿಲು ಮುಚ್ಚಿಸಿದ್ದ ಆನಂದ್ ಸಿಂಗ್ ಸಚಿವ ಸ್ಥಾನದ ಜೊತೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವ ಸುಳಿವು ನೀಡಿದ್ದರು. ಈ ಬೆಳವಣಿಗೆ ನಂತರದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ರಾತ್ರೋರಾತ್ರಿ ಯಡಿಯೂರಪ್ಪ ಮನೆಗೆ ಭೇಟಿ ನೀಡಿ ಚರ್ಚೆ ನಡೆಸಿದ್ದರು. ಆನಂದ್ ಸಿಂಗ್ ಸಂಪರ್ಕಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದ್ದರು..
ಇಂದು (ಬುಧವಾರ) ಬೆಳಗ್ಗೆ ಇಷ್ಟ ದೇವತೆ ವೇಣುಗೋಪಾಲ ಸ್ವಾಮಿ ದೇಗುಲದ ಜೀರ್ಣೋದ್ಧಾರ ಪೂಜೆಯಲ್ಲಿ ಆನಂದ್ ಸಿಂಗ್ ಪಾಲ್ಗೊಂಡರು. ಈ ಸಂದರ್ಭದಲ್ಲಿ ತಮ್ಮ ಆಪ್ತ ಹಾಗೂ ಆನಂದ ಸಿಂಗ್‌ ಅವರಿಗೂ ಆಪ್ತರಾಗಿರುವ ರಾಜೂಗೌಡ ಮೂಲಕ ಆನಂದ್ ಸಿಂಗ್ ಸಂಪರ್ಕ ಸಾಧಿಸಿದ ಯಡಿಯೂರಪ್ಪ ಕೂಡಲೇ ಬೆಂಗಳೂರಿಗೆ ಬರುವಂತೆ ಎಂಬ ಸಂದೇಶ ರವಾನಿಸಿದ್ದರು. ಆನಂದ್ ಸಿಂಗ್ ಅವರನ್ನು ರಾಜೂಗೌಡ ಹೆಲಿಕಾಪ್ಟರ್ ನಲ್ಲಿ ಬೆಂಗಳೂರಿಗೆ ಕರೆತಂದರು. ನಂತರ ನಡೆದ ಸಭೆಗಳು ಫಲ ನೀಡಿವೆ.
ಇದಕ್ಕೂ ಮೊದಲು ಹೊಸಪೇಟೆಯಲ್ಲಿ ಮಾರ್ಮಿಕವಾಗಿ ಮಾತನಾಡಿದ ಆನಂದ್ ಸಿಂಗ್, ಗೋಪಾಲಕೃಷ್ಣ ದೇಗುಲದಲ್ಲೇ ನನ್ನ ರಾಜಕೀಯ ಜೀವನ ಆರಂಭವಾಗಿತ್ತು. ಅದು ಇಲ್ಲಿಯೇ ಅಂತ್ಯವಾಗುತ್ತದೆಯೋ ಗೊತ್ತಿಲ್ಲ ಎಂದು ಹೇಳಿದ್ದರು. ಆ ಶ್ರೀಕೃಷ್ಣ ಪರಮಾತ್ಮಾನೇ ಮುಂದೆಯೂ ಕಾಪಾಡುತ್ತಾನೆ ಎಂದು ಹೇಳಿದ್ದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement