ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ಬೆಂಗಳೂರು: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆ ಅಂಗಳದಲ್ಲಿ ನಿಲ್ಲಿಸಿದ ಎರಡು ಕಾರುಗಳಿಗೆ ದುಷ್ಕರ್ಮಿಗಳು ಬುಧವಾರ ತಡರಾತ್ರಿ ಬೆಂಕಿ ಹಚ್ಚಿದ್ದಾರೆ.
ಬುಧವಾರ ರಾತ್ರಿ ಒಂದೂವರೆ ಸುಮಾರಿಗೆ ಈ ಘಟನೆ ನಡೆದಿದ್ದು, ಫಾರ್ಚೂನರ್ ಕಾರು ಹಾಗೂ ಮಹೀಂದ್ರ ಥಾರ್ ಜೀಪ್ ಗಳಿಗೆ ಬೆಂಕಿ ಹಚ್ಚಲಾಗಿದೆ. ಮನೆಯ ಅಂಗಳದೊಳಗೆ ಈ ಕಾರುಗಳನ್ನ ನಿಲ್ಲಿಸಿದ್ದ ಕಾರುಗಳಿಗೆ ನಾಲ್ವರು ಪೆಟ್ರೋಲ್ ಕ್ಯಾನ್​ಗಳನ್ನ ತಂದು ಬೆಂಕಿ ಹಚ್ಚಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಂಕಿ ಹಚ್ಚಿರುವುದು ಯಾರು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ ತಿಳಿಸಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯಗಳನ್ನ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ದುಷ್ಕರ್ಮಿಗಳ ಚಲನವಲನಗಳ ಮೂಲಕ ಅವರನ್ನ ಪತ್ತೆ ಹಚ್ಚುವ ಪ್ರಯತ್ನ ಮಾಡುತ್ತಿದ್ದಾರೆ. ಹಳೇ ದ್ವೇಷದಿಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದು ಎಂಬುದು ಪೊಲೀಸರ ಶಂಕೆ ವ್ಯಕ್ತಪಡಿಸಿದ್ದಾರೆ.
ಶಾಸಕ ಸತೀಶ್ ರೆಡ್ಡಿ ಈ ಘಟನೆಯ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ರಾತ್ರಿ ‘1:23ಕ್ಕೆ ಇಬ್ಬರು ಒಳಗೆ ಬಂದಿದ್ದಾರೆ. ಎರಡು ಗಾಡಿಗಳಿಗೆ ಪೆಟ್ರೋಲ್ ಹಾಕಿ ಬೆಂಕಿ ಹಚ್ಚಿದ್ದಾರೆ. 1:30ಕ್ಕೆ ನಮಗೆ ಘಟನೆ ಬಗ್ಗೆ ಗೊತ್ತಾಗಿದೆ. ಬ್ಯಾಟರಿ ಸ್ಫೋಟಗೊಂಡಿದ್ದರಿಂದ ಶಬ್ದ ಬಂದು ನಮಗೆ ಎಚ್ಚರವಾಯಿತು. ಗೇಟ್ ಬಳಿ ಇದ್ದ ಪೊಲೀಸರು ಹಾಗೂ ನಮ್ಮ ವಾಚ್​ಮ್ಯಾನ್ ಓಡಿ ಬಂದರು. ಅರ್ಧಗಂಟೆ ಕಾಲ ಬೆಂಕಿಯನ್ನ ಆರಿಸುವ ಕೆಲಸ ನಡೆಯಿತು’ ಎಂದು ಹೇಳಿದ್ದಾರೆ.
ದುಷ್ಕರ್ಮಿಗಳು ಎರಡು ಬೈಕ್​ಗಳಲ್ಲಿ ಬಂದಿರುವುದು ಗೊತ್ತಾಗಿದೆ. ಆದರೆ, ಸಿಸಿಟಿವಿಯಲ್ಲಿ ಮುಖ ಸರಿಯಾಗಿ ಗೊತ್ತಾಗಿಲ್ಲ. ಸತೀಶ್ ರೆಡ್ಡಿ ನಿವಾಸದ ಹಿಂಬದಿ ಗೇಟ್ ಮೂಲಕ ದುಷ್ಕರ್ಮಿಗಳು ಪ್ರವೇಶ ಮಾಡಿದ್ಧಾರೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪ್ರಧಾನಿ ಬಗ್ಗೆ ವಿವಾದಾತ್ಮಕ ಹೇಳಿಕೆ, ವಿದ್ಯುತ್‌ ಕಡಿತ ಬೆದರಿಕೆ: ಶಾಸಕ ರಾಜು ಕಾಗೆಗೆ ಚುನಾವಣೆ ಆಯೋಗದಿಂದ ನೋಟಿಸ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement