ತಾಂತ್ರಿಕ ದೋಷದಿಂದ ಇಸ್ರೋ ಜಿಎಸ್​ಎಲ್​ವಿ-ಎಫ್ ​10 ಮಿಷನ್ ಅಪೂರ್ಣ

ಬೆಂಗಳೂರು: ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ಇಂದು(ಗುರುವಾರ) ಬೆಳಗ್ಗೆ ಉಡಾವಣೆಗೊಂಡ ಜಿಎಸ್​ಎಲ್​ವಿ- ಎಫ್ 10 ರಾಕೆಟ್ ತಾಂತ್ರಿಕ ಕಾರಣದಿಂದ ತನ್ನೊಳಗಿದ್ದ ಉಪಗ್ರಹವನ್ನು ನಿಗದಿತ ಜಾಗಕ್ಕೆ ಸೇರಿಸಲು ವಿಫಲವಾಗಿದೆ.
ಇಒಎಸ್‌-3 ಎಂಬ ಭೂ ವೀಕ್ಷಣಾ ಸೆಟಲೈಟನ್ನು ಹೊತ್ತೊಯ್ದಿದ್ದ ರಾಕೆಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.

ಇಒಎಸ್‌-3 ಸೆಟಲೈಟ್ ಅನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‌ಫರ್ ಆರ್ಬಿಟ್‌ನಲ್ಲಿ ಇರಿಸಲು 51.70 ಮೀಟರ್​ ಎತ್ತರದ ಜಿಎಸ್​ಎಲ್​ವಿ-ಎಫ್​10 ರಾಕೆಟ್​ನಲ್ಲಿ ಯಶಸ್ವಿಯಾಗಿ ಮುಂಜಾನೆ 5.43ಕ್ಕೆ ಉಡಾವಣೆ ಮಾಡಲಾಗಿತ್ತು. ಲಿಫ್ಟ್-ಆಫ್‌ಗೆ ಮುಂಚಿತವಾಗಿ, ಲಾಂಚ್ ಆಥರೈಸೇಶನ್ ಬೋರ್ಡ್ ಯೋಜಿಸಿದಂತೆ ಸಾಮಾನ್ಯ ಲಿಫ್ಟ್-ಆಫ್‌ಗಾಗಿ ಡೆಕ್‌ಗಳನ್ನು ತೆರವುಗೊಳಿಸಿತು. ಮೊದಲ ಮತ್ತು ಎರಡನೇ ಹಂತಗಳಲ್ಲಿ ರಾಕೆಟ್​ನ ಕಾರ್ಯಕ್ಷಮತೆ ಸಾಮಾನ್ಯವಾಗಿತ್ತು. ಆದರೆ ಕೆಲವು ನಿಮಿಷಗಳ ನಂತರ ರಾಕೆಟ್​ನಲ್ಲಿ ತಾಂತ್ರಿಕ ಅಡಚಣೆ ಕಂಡು ಬಂದಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.
ಕ್ರಯೋಜೆನಿಕ್ ಹಂತದ ವೇಳೆ ಉಂಟಾದ ತಾಂತ್ರಿಕ ಅಡಚಣೆಯಿಂದಾಗಿ ಮಿಷನ್​ ಅಪೂರ್ಣವಾಗಿದೆ ಎಂದು ಇಸ್ರೋ ತಿಳಿಸಿದೆ.
ನೈಸರ್ಗಿಕ ವಿಕೋಪ ದುರಂತಗಳು ಸಂಭವಿಸಿದಾಗ ಬಹಳ ತ್ವರಿತವಾಗಿ ಪರಿಸ್ಥಿತಿ ಅವಲೋಕಿಸಲು ನೆರವಾಗಬಲ್ಲ ಸೆಟಲೈಟ್ ಇದಾಗಿತ್ತು. ದುರಂತದ ಪ್ರದೇಶಗಳ ಚಿತ್ರಗಳನ್ನ ಇದು ಆಗಾಗ್ಗೆ ಒದಗಿಸುವ ಕಾರ್ಯಕ್ಕೆ ಸಿದ್ಧ ಮಾಡಲಾಗಿತ್ತು. ಪ್ರಕೃತಿ ವಿಕೋಪ ಘಟನೆಗಳ ಮುನ್ಸೂಚನೆ, ಚಂಡಮಾರುತದ ಪರಿಶೀಲನೆ, ಮೇಘ ಸ್ಫೋಟ ಇತ್ಯಾದಿ ದುರಂತಗಳನ್ನ ಸಮರ್ಕಪವಾಗಿ ಪರಿಶೀಲನೆ ನಡೆಸಲು ಇದು ನೆರವಾಗುತ್ತದೆ ಎಂದು ತಿಳಿಸಲಾಗಿದೆ. ಆದರೆ ಸೆಟಲೈಟ್‌ ಹೊತ್ತ ರಾಕೆಟ್ ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ಅದು ನಿಗದಿತ ಕಕ್ಷೆ ಸೇರಲು ಸಾಧ್ಯವಾಗದ ಕಾರಣ ಈ ಮಿಷನ್‌ ಅಪೂರ್ಣವಾಗಿದೆ ಎಂದು ಇಸ್ರೋ ಹೇಳಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement