ಕಾಬೂಲ್: ಅಫ್ಗಾನಿಸ್ತಾನದ ಎರಡನೇ ಅತಿದೊಡ್ಡ ನಗರ ಕಂದಹಾರ್ ವಶಪಡಿಸಿಕೊಂಡಿರುವುದಾಗಿ ತಾಲಿಬಾನ್ ಉಗ್ರರು ಹೇಳಿಕೊಂಡಿದ್ದಾರೆ.
ಕಂದಹಾರ್ ಅನ್ನು ಸಂಪೂರ್ಣ ವಶಕ್ಕೆ ತೆಗೆದುಕೊಂಡಿದ್ದೇವೆ. ಮುಜಾಹಿದೀನ್, ನಗರದ ಹುತಾತ್ಮರ ಚೌಕ ತಲುಪಿದೆ ಎಂದು ತಾಲಿಬಾನ್ ವಕ್ತಾರರು ಘೋಷಿಸಿದ್ದಾರೆ.
ಸದ್ಯ ರಾಜಧಾನಿ ಮತ್ತು ಇತರ ಕೆಲವೇ ಭೂಭಾಗಗಳು ಸರ್ಕಾರದ ನಿಯಂತ್ರಣದಲ್ಲಿವೆ. ಉಳಿದಂತೆ ಹೆಚ್ಚಿನ ಭೂಭಾಗ ತಾಲಿಬಾನ್ ಉಗ್ರರ ವಶವಾಗಿವೆ. ಸರ್ಕಾರದ ಸೇನಾ ಪಡೆಗಳು ನಗರದ ಹೊರವಲಯದ ನೆಲೆಗಳಿಗೆ ಸಂಪೂರ್ಣವಾಗಿ ಹಿಂದೆ ಸರಿದಿವೆ ಎನ್ನಲಾಗಿದೆ.
ಈಶಾನ್ಯ ಭಾಗದ ಬದಖ್‌ಷಾನ್ ಮತ್ತು ಪಶ್ಚಿಮ ಭಾಗದ ಬಘ್ಲಾನ್ ಹಾಗೂ ಫರಾಹ್ ಪ್ರಾಂತ್ಯಗಳ ರಾಜಧಾನಿಗಳನ್ನೂ ತಾಲಿಬಾನ್ ವಶಪಡಿಸಿಕೊಂಡಿತ್ತು. ಈಗ ದೇಶದ ಮೂರನೇ ಎರಡರಷ್ಟು ಭಾಗ ತಾಲಿಬಾನ್ ನಿಯಂತ್ರಣದಲ್ಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ