ನಿಸರ್ಗ ರಮಣೀಯ ಸ್ಥಳದಲ್ಲಿ ಸಂಸ್ಕೃತಿಯೊಂದಿಗೆ ಶಿಕ್ಷಣ ಧ್ಯೇಯದ ಕೆನರಾ ಎಕ್ಸಲೆನ್ಸ್‌ ಪಿಯು ಕಾಲೇಜ್‌ ಪ್ರವೇಶ ಆರಂಭ

posted in: ರಾಜ್ಯ | 1

ಕುಮಟಾ; ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ನಿಸರ್ಗ ರಮಣೀಯ ಗೋರೆ ಗುಡ್ಡದ ಮೇಲೆ ಸ್ಥಾಪಿತವಾಗಿರುವ ಶಿಕ್ಷಣ ಸಂಸ್ಥೆ ಕೆನರಾ ಎಕ್ಸಲೆನ್ಸ್‌ ಪದವಿ ಪೂರ್ವ ಕಾಲೇಜು ವಿಭಿನ್ನ ದೃಷ್ಠಿಕೊನ, ಸಂಹವನ ಶಿಕ್ಷಣ, ಉತ್ಕೃಷ್ಟ ಅಧ್ಯಯನ, ಗುಣಮಟ್ಟದ ಪಾಠ ಧ್ಯೇಯದೊಂದಿಗೆ ಈ ವರ್ಷದಿಂದಲೇ ಆರಂಭವಾಗಿದೆ. ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೆಕ ಆಧುನಿಕ ಹಾಸ್ಟೇಲ್ ಸೌಲಭ್ಯದೊಂದಿಗೆ ಜಿಲ್ಲೆಯಲ್ಲಿಯೇ ಈ ತರಹದ ಸೌಲಭ್ಯ ಹಾಗೂ ಧ್ಯೇಯ ಹೊಂದಿರುವ ಪ್ರಥಮ ವಿದ್ಯಾಕೇಂದ್ರ ಎಂದು ಹೇಳಲಾಗಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದ ಚಟುವಟಿಕೆ ಆರಂಭವಾಗಿದ್ದು ಶಿಕ್ಷಣ ಸಂಸ್ಥೆಯಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಪ್ರವೇಶಾತಿ ಆರಂಭವಾಗಿದ್ದು ಆಸಕ್ತರು ತಕ್ಷಣ ವಿದ್ಯಾಸಂಸ್ಥೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಖ್ಯಾತ ವೈದ್ಯ ಡಾ.ಜಿ.ಜಿ. ಹೆಗಡೆಯವರು ಎರಡು ದಶಕಗಳ ಹಿಂದೆಯೇ ಜಿಲ್ಲೆಯ ಮಕ್ಕಳಿಗೆ ಅತ್ಯುತ್ತಮ ಶಿಕ್ಛಣ ನೀಡುವ ಸಂಕಲ್ಪ ಮಾಡಿದ್ದರು. ಶ್ರೀರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಸ್ವಾಮೀಜಿ ಹಾಗೂ ದಿವಗಿಯ ಶ್ರೀರಾಮಾನಂದರು ಹಾಗೂ ಈ ಮುಕ್ತಿ ಹೊಂದಿರುವ ಗೋರೆಯ ಶ್ರೀ ನಿರ್ಮಲಾನಂದ ಸ್ವಾಮೀಜಿಯವರಿಂದ ದಶಕಗಳ ಹಿಂದೆಯೇ ಶಿಕ್ಷಣ ಸಂಸ್ಥೆಯ ಕಟ್ಟಡದ ಶಿಲಾನ್ಯಾಸವು ನಡೆದಿತ್ತು. ಈಗ ಅದು ಸಾಕಾರಗೊಂಡಿದೆ.
ಜಿಲ್ಲೆಯಲ್ಲಿ ಪ್ರತ್ಯೇಕ ವಸತಿ ನಿಲಯ ಹೊಂದಿರುವ ಏಕೈಕ ಕಾಲೇಜು ಇದಾಗಿದ್ದು ರಮಣೀಯ ಪರಿಸರದಲ್ಲಿದೆ. ವಿದ್ಯೆಯ ಮೇಲೆ ಪ್ರೀತಿ ಇರುವವರಿಗೆ ನಮ್ಮ ಸಂಸ್ಥೆ ಎಲ್ಲ ರೀತಿಯ ಸಹಕಾರ ನೀಡಿ ಶಿಕ್ಷಣದ ಹಸಿವು ನೀಗಿಸಲಿದೆ ಎಂದು ಟ್ರಸ್ಟ್‌ ಅಧ್ಯಕ್ಷ ಡಾ.ಜಿ,ಜಿ ಹೆಗಡೆ ಹೇಳಿದ್ದಾರೆ.
ಮಕ್ಕಳು ಬೆಳಿಗ್ಗೆ ೭ ರಿಂದ ಸಂಜೆ ೭ ಗಂಟೆಯವರೆಗೆ ಶಿಕ್ಷಕರೊಂದಿಗೆ ನೇರ ಒಡನಾಟ ಹೊಂದಿರುತ್ತಾರೆ. ಶಿಕ್ಷಕರು ವಸತಿ ನಿಲಯದಲ್ಲೆಯೇ ಇರುವ ವ್ಯವಸ್ಥೆಯನ್ನ ಶಿಕ್ಷಣ ಸಂಸ್ಥೆ ಹೊಂದಿದೆ. ಅತ್ಯುತ್ತಮ ಗ್ರಂಥಾಲಯ, ಪ್ರಯೋಗಾಲಯ, ನುರಿತ ಉಪನ್ಯಾಸಕರನ್ನು ಒಳಗೊಂಡಿದೆ. ಕಾಲೇಜಿನಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ನೀಟ್, ಜೆಇಇ, ಸಿಎ, ಸಿಎಸ್ ಕೋರ್ಸುಗಳಿಗೆ ತರಬೇತಿ ನೀಡಲಾಗುತ್ತದೆ. ಅಲ್ಲದೆ ಎಸ್.ಎಸ್.ಎಲ್‌ಸಿ ಯಲ್ಲಿ ಶೇಕಡಾ ನೂರು ಅಂಕ ಪಡೆದವರಿಗೆ ಹಾಗೂ ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಷಾನದಲ್ಲಿ ನೂರಕ್ಕೆ ೧೦೦ ಅಂಕ ಪಡೆದವರಿಗೆ ಈ ಎಲ್ಲ ಕೋರ್ಸುಗಳನ್ನು ಉಚಿತವಾಗಿ ನೀಡಲಾಗುತ್ತದೆ. ಯೋಗ,ಕ್ರೀಡೆ ಇತ್ಯಾದಿ ವಿಷಯಗಳ ಬಗ್ಗೆ ವಿಶೇಷ ಒತ್ತು ನೀಡಲಾಗುತ್ತದೆ. ಅಲ್ಲದೆ, ವಸತಿ ನಿಲಯದಲ್ಲಿ ಇರದ ವಿದ್ಯಾಥಿಗಳಿಗೆ ವಾಹನ ಸೌಲಭ್ಯ ಸಹ ನೀಡಲಾಗುತ್ತದೆ ಎಂದು ಡಾ.ಜಿ.ಜಿ.ಹೆಗಡೆ ತಿಳಿಸಿದ್ದಾರೆ.
ನಮ್ಮ ವಿದ್ಯಾಲಯದಲ್ಲಿ ಅದ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಮಾಹಿತಿ, ಉದ್ಯೋಗವಕಾಶಗಳ ಲಭ್ಯತೆ, ಜಗತ್ತಿನಲ್ಲಿ ಸಾಧಕರಿಗೆ ಇರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ವಿಶಿಷ್ಟ ಪ್ರತಿಭೆಯನ್ನು ಗುರುತಿಸಿ ಅಂಥವರಿಗೆ ಅವಕಾಶ ಕಲ್ಪಿಸಿ ಕೊಡುವ ಉದ್ದೇಶ ಹೊಂದಿದ್ದೇವೆ. ಅತ್ಯುತ್ತಮ ಅಂಕ ಪಡೆದವರಿಗೆ ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ಶಿಷ್ಯ ವೇತನಗಳ ಬಗ್ಗೆಯೂ ನಿಖರ ಮಾಹಿತಿ ನೀಡುತ್ತೆವೆ ಎಂದು ಅವರು ಹೇಳಿದರು.
ಒಟ್ಟಾರೆಯಾಗಿ ನಿಸರ್ಗದ ಮಡಿಲಲ್ಲಿ ಜಿಲ್ಲೆಯ ಜನರಿಗೆ ಉತ್ಕೃಷ್ಟ ಸುಸಂಕೃತ ಬದುಕು ಕಟ್ಟಿ ಕೊಳ್ಳಲು ನಮ್ಮ ಶಿಕ್ಷಣ ಸಂಸ್ಥೆ ಕಟಿಬದ್ಧವಾಗಿದ್ದು ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು ಎಂದು ಡಾ.ಜಿ.ಜಿ.ಹೆಗಡೆ ಮನವಿ ಮಾಡಿಕೊಂಡಿದ್ದಾರೆ.
ಪ್ರಸಕ್ತ ಶೈಕ್ಷಣಿಕ ವರ್ಷದ ಚಟುವಟಿಕೆ ಆರಂಭವಾಗಿದ್ದು ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ನೊಂದಣಿ ಆರಂಭವಾಗಿದ್ದು ಆಸಕ್ತರು ತಕ್ಷಣ ವಿದ್ಯಾಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ. ಮಾಹಿತಿಗೆ ಡಾ.ಜಿ.ಜಿ.ಹೆಗಡೆ ಅಧ್ಯಕ್ಷರು -೯೪೪೮೨೦೬೩೮೦, ಪ್ರೊ.ಡಿ.ಎನ್.ಭಟ್‌ ಪ್ರಾಚಾರ್ಯರು -೯೪೪೯೪೭೭೪೭೩ . ಎಂ.ಕೆ.ಹೆಗಡೆ ವ್ಯವಸ್ಥಾಪಕರು-೯೪೮೨೧೮೭೨೨೫, ಜಗದೀಶ ಹರಿಕಂತ-೯೮೮೬೯೩೪೬೩೭ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4.3 / 5. ಒಟ್ಟು ವೋಟುಗಳು 4

ನಿಮ್ಮ ಕಾಮೆಂಟ್ ಬರೆಯಿರಿ