ಗಮನಿಸಿ…: ದ್ವಿತೀಯ ಪಿಯುಸಿ ದಾಖಲಾತಿ ದಿನಾಂಕ ವಿಸ್ತರಣೆ

ಬೆಂಗಳೂರು:2021-22ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿ ದಾಖಲಾತಿಗೆ ( Second PU Admission ) ಶುಕ್ರವಾರ ಕೊನೆಗೊಂಡಂತ ದಾಖಲಾತಿ ದಿನಾಂಕವನ್ನು, ಯಾವುದೇ ದಂಡ ಶುಲ್ಕವಿಲ್ಲದೇ ಆಗಸ್ಟ್‌ 28ರ ವರೆಗೆ ವಿಸ್ತರಿಸಲಾಗಿದೆ.
ಈ ಕುರಿತು ಪದವಿ ಪೂರ್ವ ಶಿಕ್ಷಣ ಇಲಾಖೆಯ ( PU Board ) ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, 2021-22ನೇ ಶೈಕ್ಷಣಿಕ ಸಾಲಿಗೆ ದ್ವಿತೀಯ ಪಿಯುಸಿ ದಾಖಲಾತಿಯನ್ನು ದಂಡ ಶುಲ್ಕವಿಲ್ಲದೆ ದಿನಾಂಕ 13-08-2021ರವರೆಗೆ ನಿಗದಿ ಪಡಿಸಲಾಗಿತ್ತು.
ಆದರೆ ಪೋಷಕರು, ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳು, ಸರ್ಕಾರಿ ಮತ್ತು ಅನುದಾನಿತ ಪ್ರಾಂಶುಪಾಲರು ಮುಂತಾದವರು ಇಲಾಖೆಯನ್ನು ಸಂಪರ್ಕಿಸಿ, ದ್ವಿತೀಯ ಪಿಯುಸಿ ( PU Admission ) ವಿದ್ಯಾರ್ಥಿಗಳು ದಾಖಲಾತಿ ಆಗಿಲ್ಲವೆಂದು ತಿಳಿಸಿ, ದಂಡ ಶುಲ್ಕವಿಲ್ಲದೆ ದಾಖಲಾತಿ ದಿನಾಂಕವನ್ನು ವಿಸ್ತರಿಸುವಂತೆ ಕೋರಿದ್ದರು.
ಹೀಗಾಗಿ ಯಾವುದೇ ದಂಡ ಶುಲ್ಕವಿಲ್ಲದೇ ದ್ವಿತೀಯ ಪಿಯುಸಿಗೆ ದಾಖಲಾಗಲು 28-08-2021ರವರೆಗೆ ವಿಸ್ತರಿಸಲಾಗಿದೆ. ವಿಳಂಬ ದಾಖಲಾತಿ ಶುಲ್ಕ 670 ರೂ.ಗಳನ್ನು ಪಾವತಿಸಿ ದಾಖಲಾಗಲು ದಿನಾಂಕ 30-08-2021 ರಿಂದ 11-09-2021ರ ವರೆಗೆ ಅವಕಾಶವಿದೆ. ವಿಶೇಷ ದಂಡ ಶುಲ್ಕ ರೂ.2,890 ಪಾವತಿಯೊಂದಿಗೆ ದಿನಾಂಕ 13-09-2021 ರಿಂದ 25-09-2021ರ ವರೆಗೆ ದಾಖಲಾತಿಗೆ ಅವಕಾಶವಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement