ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು

ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ: ಸೇನೆಯ 6 ಯೋಧರಿಗೆ ಶೌರ್ಯ ಚಕ್ರ

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಶೌರ್ಯ ಪ್ರದರ್ಶಿಸಿದ ಭಾರತೀಯ ಸೇನೆಯ 6 ಯೋಧರಿಗೆ ಈ ಸಲದ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗುತ್ತಿದೆ.
ಈ ಯೋಧರು ಕಳೆದ ವರ್ಷ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹೋರಾಡಿ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದ ತಂಡದ ಭಾಗವಾಗಿದ್ದರು
ಮೇಜರ್ ಅರುಣ್ ಕುಮಾರ್ ಪಾಂಡೆ, ಮೇಜರ್ ರವಿ ಕುಮಾರ್ ಚೌಧರಿ, ಕ್ಯಾಪ್ಟನ್ ಅಶುತೋಷ್ ಕುಮಾರ್ (ಮರಣೋತ್ತರ) ಕ್ಯಾಪ್ಟನ್ ವಿಕಾಸ್ ಖತ್ರಿ, ರೈಫಲ್ ಮ್ಯಾನ್ ಮುಖೇಶ್ ಕುಮಾರ್ ಹಾಗೂ ಸಿಪಾಯಿ ನೀರಜ್ ಅಹ್ಲಾವತ್ ಅವರಿಗೆ ಶೌರ್ಯ ಚಕ್ರ ನೀಡಿ ಗೌರವಿಸಲಾಗುತ್ತಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.2020 ರ ಜೂನ್ 09 ಹಾಗೂ 10 ರಂದು ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗೆ ರಾಷ್ಟ್ರೀಯ ರೈಫಲ್ಸ್ ನ 44 ನೇ ಬೆಟಾಲಿಯನ್ ನ ಮೇಜರ್ ಪಾಂಡೇ ಅವರು ನೇತೃತ್ವ ವಹಿಸಿ ಇಬ್ಬರು ಕಟ್ಟರ್ ಉಗ್ರರನ್ನು ಹತ್ಯೆ ಮಾಡಿದ್ದರು.
ನಾಲ್ವರು ಸೇನಾ ಸಿಬ್ಬಂದಿಗೆ ಸೇನೆಯ ಪದಕ ದೊರೆತಿದ್ದರೆ, 116 ಮಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ದಿನ ಪದಕಗಳನ್ನು ಘೋಷಿಸಲಾಗಿದೆ.

ಪ್ರಮುಖ ಸುದ್ದಿ :-   ಕೈಗೂಡದ ಸಂಖ್ಯಾಬಲದ ಲೆಕ್ಕಾಚಾರ, ಬೆಂಬಲದ ಭರವಸೆ ಹುಸಿ, ʼಅಪ್ರಾಮಾಣಿಕ' ನಾಯಕ: 1999ರ ಸರ್ಕಾರ ರಚನೆ ಪ್ರಯತ್ನದ ಕುರಿತು ಸೋನಿಯಾ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement