ಕೋವಿಡ್​ ವಿರುದ್ಧದ ಹೋರಾಟ ಮುಗಿದಿಲ್ಲ, ಎಲ್ಲರೂ ಲಸಿಕೆ ಪಡೆಯರಿ:75ನೇ ಸ್ವಾತಂತ್ರ್ಯೋತ್ಸವದ ಮುನ್ನಾದಿನದ ಭಾಷಣದಲ್ಲಿ ರಾಷ್ಟ್ರಪತಿ ಕೋವಿಂದ

ನವದೆಹಲಿ: 75ನೇ ಸ್ವಾತಂತ್ರ್ಯೋತ್ಸವಕ್ಕೂ ಮುನ್ನಾದಿನ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ರಾಮನಾಥ್​ ಕೋವಿಂದ್‌ ಅನೇಕ ತಲೆಮಾರುಗಳ ಹೋರಾಟದ ಕನಸು ಸ್ವಾತಂತ್ರ್ಯವಾಗಿತ್ತು. ಹೋರಾಟಗಾರ ತ್ಯಾಗ, ಹೋರಾಟದ ಫಲವಾಗಿ ಇಲ್ಲಿವರೆಗೂ ನಾವು ಸಾಗಿದ್ದು, ಅವರ ಬಲಿದಾನ ಸ್ಮರಿಸೋಣ ಎಂದರು.
ಕೋವಿಡ್​ ಕುರಿತು ಮಾತನಾಡಿದ ಅವರು ಎರಡನೇ ಅಲೆ ಭೀಕರತೆಗೆ ಅನೇಕರು ತಮ್ಮ ಪ್ರೀಪಾತ್ರರನ್ನು ಕಳೆದುಕೊಂಡರು. ನಿಮ್ಮ ಜೊತೆ ನಾವುದ್ದೇವೆ ಎಂದು ಅವರಿಗೆ ಧೈರ್ಯದ ಜೊತೆ ಅವರಿಗೆ ಸಹಾನೂಭೂತಿ ವ್ಯಕ್ತಪಡಿಸಿದರು.
ದೇಶದಲ್ಲಿ ಕೋವಿಡ್​ ಪ್ರಕರಣಗಳು ಕಡಿಮೆಯಾದರೂ, ಕೋವಿಡ್​ ವಿರುದ್ಧದ ನಮ್ಮ ಹೋರಾಟ ಮುಗಿದಿಲ್ಲ. ಕೋವಿಡ್ ಸೋಂಕು ದೇಶದ ಆರ್ಥಿಕ ಸ್ಥಿತಿ ಮೇಲೂ ಭಾರೀ ಪರಿಣಾಮ ಬೀರಿದ್ದು, ತಾತ್ಕಾಲಿಕ ಹಿನ್ನಡೆ ಅನುಭವಿಸುವಂತಾಗಿದೆ ಎಂದರು.
ದೇಶದ ಪ್ರತಿಯೊಬ್ಬರು ಲಸಿಕೆ ಪಡೆಯುವಂತೆ ಮನವಿ ಮಾಡಿದರು. ಸೋಂಕಿನ ವಿರುದ್ಧ ನಮ್ಮ ರಕ್ಷಣೆಗೆ ಇರುವುದು ಲಸಿಕೆ. ಇದುವರೆಗೂ ಯಾರು ಲಸಿಕೆ ಪಡೆದಿಲ್ಲವೋ ಅವರು, ಲಸಿಕೆ ಪಡೆಯಲು ಮುಂದಾಬೇಕು. ಲಸಿಕೆ ಪಡೆದವರು ಅಂತಹವರಿಗೆ ಹುರಿ ದುಂಬಿಸಿ ಲಸಿಕೆ ಪಡೆಯುವಂತೆ ತಿಳಿ ಹೇಳಬೇಕು. ಯಾಕೆಂದರೆ ಸೋಂಕಿನ ತೀವ್ರತೆ ಕಡಿಮೆ ಆಗಿದೆ. ಆದರೆ ಪ್ರಭಾವ ಮುಗಿದಿಲ್ಲ. ಹೀಗಾಗಿ ಎಲ್ಲರೂ ಲಸಿಕೆ ಪಡೆಯಬೇಕು. ವೈದ್ಯರು, ನರ್ಸ್​ಗಳು, ಆರೋಗ್ಯ ಕಾರ್ಯಕರ್ತರು, ಆಡಳಿತಗಾರರು ಮತ್ತು ಕೊರೋನಾ ವಾರಿಯರ್​ಗಳಿಂದಾಗಿ ಎರಡನೇ ಅಲೆ ತರಂಗ ಎದುರಿಸಲು ಸಾಧ್ಯವಾಯಿತು.
ವೈದ್ಯಕೀಯ ಸೌಲಭ್ಯಗಳ ವಿಸ್ತರಣೆಗಾಗಿ ಕಳೆದ ಒಂದು ವರ್ಷದಲ್ಲಿ 23.220 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದರು.
ಇದೇ ವೇಳೆ ರಾಷ್ಟ್ರಪತಿಗಳು ಒಲಂಪಿಕ್ಸ್​​ನಲ್ಲಿ ಸಾಧನೆ ತೋರಿದ ಕ್ರೀಡಾಳುಗಳನ್ನು ಹೀರೋಗಳು ಎಂದು ಕರೆದು ಅವರಿಗೆ ಶುಭ ಕೋರಿದರು. 121 ವರ್ಷಗಳ ಬಳಿಕ ಗರಿಷ್ಟ ಸಂಖ್ಯೆ ಪದಕಗಳನ್ನು ತರುವಲ್ಲಿ ಅವರು ಅದ್ಭುತ ಸಾಧನೆ ತೋರಿದ್ದಾರೆ ಎಂದು ಶ್ಲಾಘಿಸಿದರು.
ಕೃಷಿ ಮಾರುಕಟ್ಟೆಯಲ್ಲಿ ಅನೇಕ ಸುಧಾರಣೆಗಳಿಂದಾಗಿ, ರೈತರು ಮತ್ತಷ್ಟು ಸಬಲರಾಗಿದ್ದು, ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯುತ್ತಾರೆ ಎಂದು ಆಶಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಹೊಸ ಬೆಳಕು ಮೂಡುತ್ತಿದ್ದು, ಅಲ್ಲಿನ ಯುವ ಜನತೆ ಈ ಅವಕಾಶವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕು. ಭಾರತವು ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಬದ್ಧವಾಗಿರುವ ಜೊತೆಗೆ ಹವಾಮಾನವನ್ನು ರಕ್ಷಿಸಲು ಬದ್ಧವಾಗಿದೆ. ಇದೇ ಕಾರಣಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದೆ ಎಂದ ಅವರು
ಈ ವರ್ಷದ ಸ್ವಾತಂತ್ರ್ಯ ದಿನಾಚರಣೆಗೆ ವಿಶೇಷ ಮಹತ್ವವಿದೆ, ಕಾರಣ ಈ ಬಾರಿ ನಾವೆಲ್ಲರೂ ನಮ್ಮ 75 ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವದ ಸಂದರ್ಭದಲ್ಲಿದ್ದೇವೆ. ಸ್ವಾತಂತ್ರ್ಯದ ಅಮೃತ್ ಮಹೋತ್ಸವವನ್ನು ಆಚರಿಸುತ್ತಿದ್ದೇವೆ ಎಂದು ನಾಡಿನ ಜನತೆಗೆ ಶುಭ ಕೋರಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement