ಕಲಘಟಗಿ: ಧ್ವಜ ಮೆರವಣಿಗೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ, 14 ಜನರ ಮೇಲೆ ಪ್ರಕರಣ ದಾಖಲು

ಕಲಘಟಗಿ: ಧ್ವಜ ಮೆರವಣಿಗೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ 14 ಜನರ ಮೇಲೆ ಪ್ರಕರಣ ದಾಖಲು
ಕಲಘಟಗಿ: ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ತ್ರಿವರ್ಣ ಧ್ವಜದ ಮೆರವಣಿಗೆಯ ವೇಳೆ ಕೊವೀಡ್ ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ 14 ಜನರ ಮೇಲೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೊಟ್ಟಿಲು ನಗರಿಯಾದ ಕಲಘಟಗಿಯಲ್ಲಿ ಮಾಜಿ ಸಚಿವ ಸಂತೋಷ ‌ಲಾಡ್‌ ನೇತೃತ್ವದಲ್ಲಿ ಅಭೂತಪೂರ್ವ ರಾಷ್ಟ್ರ ಧ್ವಜದ ಮೆರವಣಿಗೆಗೆ ಸಾಕ್ಷಿಯಾಗಿತ್ತು 9 ಅಡಿ ಅಗಲ ಹಾಗೂ 2000 ಮೀಟರ್ ( 2 ಕಿಮೀ) ಉದ್ದದ ಬೃಹತ್ ರಾಷ್ಟ್ರ ಧ್ವಜದ ಮೆರವಣಿಗೆ ತಡಸ ಕ್ರಾಸ್ ನಿಂದ ತಹಶೀಲ್ದಾರ ಕಚೇರಿವರೆಗೆ ಸಾಗಿ ಸಂಪನ್ನಗೊಂಡಿತು.ತ್ರಿವರ್ಣ ಧ್ವಜ ನೋಡಲು ಮಹಿಳೆಯರು,ಮಕ್ಕಳು ಸಾಕಷ್ಟ ಸಂಖ್ಯೆಯಲ್ಲಿ ಸೇರಿದ್ದರು.
ತ್ರಿವರ್ಣ ಧ್ವಜದ ಮೆರವಣಿಗೆಯಲ್ಲಿ ಸಾರ್ವಜನಿಕ ಅಂತರ ಕಾಯ್ದುಕೊಳ್ಳದೆ, ಸುರಕ್ಷಿತ ಮಾಸ್ಕ್ ಧರಿಸಿರಲಿಲ್ಲ ಹಾಗೂ ಮೆರವಣಿಗೆ ಮಾಡಬಾರದು ಎಂಬ ಆದೇಶವಿದ್ದರೂ ಮೆರವಣಿಗೆ ಮಾಡಲಾಗಿದೆ ಎಂಬ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿದೆ. ಒಟ್ಟು 14 ಜನರ  ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement