ಹೈಟಿಯಲ್ಲಿ ಪ್ರಬಲ ಭೂಕಂಪನ : ಮೃತರ ಸಂಖ್ಯೆ 724 ಕ್ಕೇರಿಕೆ

ಹೈಟಿ : ದ್ವೀಪ ರಾಷ್ಟ್ರ ಹೈಟಿಯ ಕರಾವಳಿ ಪ್ರದೇಶದಲ್ಲಿ ಶನಿವಾರ ಸುನಾಮಿ ಭೀತಿಯ ನಡುವೆಯೇ 7.2 ರಷ್ಟು ತೀವ್ರತೆಯಷ್ಟು ಭೂಕಂಪ ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆ 724ಕ್ಕೇರಿದೆ ಎಂದು ವರದಿಯಾಗಿದೆ.
ಕೆರಿಬಿಯನ್ ರಾಷ್ಟ್ರ ಹೈಟಿಯಲ್ಲಿ ಪ್ರಬಲ ಭೂಕಂಪನದಿಂದ ಸುಮಾರು 724 ಜನರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸಾವಿನ ಸಂಖ್ಯೆ 724 ಕ್ಕೇರಿದ್ದು, ಅವಶೇಷಗಳಡಿ ಸಿಲುಕಿರುವವರ ರಕ್ಷಣೆ ಕಾರ್ಯಾಚರಣೆ ಮುಂದುವರೆದಿದೆ. ಹೈಟಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಅಲ್ಲಿನ ಪ್ರಧಾನಿ ಹೆನ್ರಿ ಅವರು ಹೈಟಿಯಲ್ಲಿ ಒಂದು ತಿಂಗಳು ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಸ್ಪೇಸ್ ಎಕ್ಸ್ ಷೇರುಗಳ ದಾಖಲೆ ಜಿಗಿತ: ವಿಶ್ವದ ಮೊದಲ 'ಟ್ರಿಲಿಯನೇರ್' (ಲಕ್ಷ ಕೋಟಿ ಡಾಲರ್ ಒಡೆಯ)ಆದ ಎಲೋನ್ ಮಸ್ಕ್ !

ನಿಮ್ಮ ಕಾಮೆಂಟ್ ಬರೆಯಿರಿ

advertisement