ಅಫ್ಘಾನ್ ತಾಲಿಬಾನಿಗಳ ವಶಕ್ಕೆ:ವಿಶ್ವಸಂಸ್ಥೆ ಭದ್ರತಾ ಸಮಿತಿ ತುರ್ತು ಸಭೆ

ವಿಶ್ವಸಂಸ್ಥೆ: ಕಾಬೂಲ್ ತಾಲಿಬಾನಿಗಳ ಕೈವಶವಾದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಭದ್ರತಾ ಸಮಿತಿ ಇಂದು (ಸೋಮವಾರ) ತುರ್ತು ಸಭೆ ಕರೆದಿದೆ.
ಪ್ರಸ್ತುತ ಭಾರತದ ಅಧ್ಯಕ್ಷೀಯ ಉಸ್ತುವಾರಿಯಲ್ಲಿರುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ನಡೆಸಲಿದೆ. ಭಾರತ ಕಳೆದ ಆಗಸ್ಟ್ 1ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷೀಯ ಸ್ಥಾನ ವಹಿಸಿಕೊಂಡಿದೆ. ಬಳಿಕ ಆಗಸ್ಟ್ 6ರಂದು ಸಭೆ ನಡೆಸಿ ಆಫ್ಘಾನಿಸ್ತಾನದ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿತ್ತು. ಬದಲಾದ ಪರಿಸ್ಥಿತಿ ಹಿನ್ನೆಲೆಯಲ್ಲಿ ವಾರ ಕಳೆಯುವುದರೊಳಗೆ ಮತ್ತೊಮ್ಮೆ ಸಭೆ ನಡೆಸುತ್ತಿದೆ.
ಈ ಮೊದಲು ನಡೆದ ಸಭೆಯಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ವಿಶ್ವಸಂಸ್ಥೆ ಮನವಿ ಮಾಡಿತ್ತು. ಆದರೆ ಅದಕ್ಕೆ ತಾಲಿಬಾನಿಗಳು ಮನ್ನಣೆ ನೀಡಿಲ್ಲ. ಆಫ್ಘಾನಿಸ್ತಾನದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಮಹಿಳೆಯರು ಮತ್ತು ಬಾಲಕಿಯರ ರಕ್ಷಣೆ ಕುರಿತು ಆತಂಕಗಳಿವೆ ಎಂದು ವಿಶ್ವಸಂಸ್ಥೆಯ ಆಂಟೋನಿಯೋ ಗುಟ್ಟೇರ್ಸೆಸ್ ಹೇಳಿದ್ದಾರೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement