ಮೂಡಿಗೆರೆ: ಕಾರಿನ ಮೇಲೆ ಕಾಡಾನೆ ದಾಳಿ; ನಾಲ್ವರಿಗೆ ಗಂಭೀರ ಗಾಯ

ಚಿಕ್ಕಮಗಳೂರು: ಚಲಿಸುತ್ತಿದ್ದ ಓಮ್ನಿ ಕಾರೊಂದರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಗಂಭೀರ ಗಾಯಗೊಂಡ ಘಟನೆ ಮೂಡಿಗೆರೆ ತಾಲೂಕಿನ ಕುಂದೂರು ಬಳಿ ರವಿವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ಗಾಯಾಳುಗಳನ್ನು ಚಂದ್ರೇಗೌಡ, ಅವರ ಪತ್ನಿ ಮೋಹಿನಿ, ಪುತ್ರ ಅವನೀಶ, ಮತ್ತು ಸಂಬಂಧಿಕರಾದ ರಾಜಮ್ಮ ಎಂದು ಗುರುತಿಸಲಾಗಿದೆ. ಈ ಪೈಕಿ ಚಂದ್ರೇಗೌಡರ ಸ್ಥಿತಿ ಚಿಂತಾಜನಕವಾಗಿದ್ದರೆ, ಉಳಿದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ನಾಲ್ವರು ಮೂಡಿಗೆರೆಯಿಂದ ಹೊರನಾಡಿಗೆ ಹೋಗುತ್ತಿದ್ದಾಗ ಹೆಬ್ಬಳಗದ್ದೆ ಎಂಬಲ್ಲಿ ಕಾಡಾನೆ ದಾಳಿ ನಡೆಸಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಆಗಮಿಸಿದ್ದಾರೆ.
ಮತ್ತೊದು ಘಟನೆಯಲ್ಲಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಮಠಸಾಗರ ಬಳಿ ಒಂಟಿ ಸಲಗ ಪುಂಡಾಟಿಕೆ ಮೆರೆದಿದೆ. ವಿರೂಪಾಕ್ಷ ಎಂಬುವರ ಮನೆಯ ಸಮೀಪ ಕಾಂಪೌಂಡ್ ಬಳಿ ಬಂದವರನ್ನು ಅಟ್ಟಾಡಿಸಿದೆ. ಅತ್ತಿಂದಿತ್ತ ಓಡಾಡುತ್ತ ಕಾಂಪೌಂಡ್ ಒಳಗೆ ನುಗ್ಗಲು ಯತ್ನ ನಡೆಸಿ ಕಾಳುಮೆಣಸಿನ ಬಳ್ಳಿ ಕಿತ್ತುಹಾಕಿದೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ 2024: ಕರ್ನಾಟಕದ 14 ಕ್ಷೇತ್ರಗಳಿಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement