ಅಫ್ಘಾನಿಸ್ತಾನದಿಂದ ಭಾರತೀಯ ಅಧಿಕಾರಿಗಳ ಎರಡನೇ ತಂಡ ಏರ್‌ಲಿಫ್ಟ್‌

ನವದೆಹಲಿ : 24 ಗಂಟೆಗಳ ಕಾಲ ನಡೆದ ಮಾತುಕತೆಯ ನಂತರ, ಭಾರತೀಯ ವಾಯುಪಡೆಯ ಸಿ-17 ಹೆವಿ-ಲಿಫ್ಟ್ ವಿಮಾನವನ್ನು ಬಳಸಿಕೊಂಡು ಕಾಬೂಲ್ ನಿಂದ ರಾಜತಾಂತ್ರಿಕರು ಮತ್ತು ಅಧಿಕಾರಿಗಳ ಎರಡನೇ ತಂಡವನ್ನು ದೇಶಕ್ಕೆ ಸ್ಥಳಾಂತರಿಸುವಲ್ಲಿ ಭಾರತ ಯಶಸ್ವಿಯಾಗಿದೆ.
ಐಎಎಫ್ ವಿಮಾನವು ಬೆಳಿಗ್ಗೆ 8 ಗಂಟೆ ಸುಮಾರಿಗೆ ಹಮೀದ್ ಕರ್ಜಾಯ್ ವಿಮಾನ ನಿಲ್ದಾಣದಿಂದ ಎಟಿಸಿಯನ್ನು ನಿರ್ವಹಿಸುತ್ತಿರುವ ಅಮೆರಿಕ ಪಡೆಗಳ ಸಹಾಯದಿಂದ ಮೇಲಕ್ಕೆ ಹಾರಿತು. ಆಫ್ಘಾನಿಸ್ತಾನದ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ ಹಾಗೂ ಇತರ 120 ರಾಜತಾಂತ್ರಿಕರು ಮತ್ತು ಅಧಿಕಾರಿಗಳೊಂದಿಗೆ ವಿಮಾನದಲ್ಲಿದ್ದಾರೆ.
ವಿಮಾನ ಎಲ್ಲಾ ಸ್ಥಳಾಂತರಗೊಂಡವರೊಂದಿಗೆ ಸಿ-17 ಬೆಳಿಗ್ಗೆ 11 ಗಂಟೆ ಸುಮಾರಿಗೆ ಭಾರತೀಯ ವಾಯುಪ್ರದೇಶಕ್ಕೆ ದಾಟುತ್ತದೆ ಮತ್ತು ಜಾಮ್ ನಗರದಲ್ಲಿ ಇಳಿಯುತ್ತದೆ ಎಂದು ತಿಳಿದು ಬಂದಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವಿಡಿಯೋ | ಕನ್ನಡದ ಖ್ಯಾತ ನಟ ಅನಂತ ನಾಗ್‌ಗೆ ದಾದಾಸಾಹೇಬ ಫಾಲ್ಕೆ ಪ್ರಶಸ್ತಿ ಪ್ರದಾನ ; 50 ವರ್ಷಗಳ ಸಿನಿ ಪಯಣಕ್ಕೆ ರಾಷ್ಟ್ರದ ಅತ್ಯುನ್ನತ ಗೌರವ

ನಿಮ್ಮ ಕಾಮೆಂಟ್ ಬರೆಯಿರಿ

advertisement